ಭಾನುವಾರ, ಜನವರಿ 26, 2020
27 °C

ನ್ಯಾಯಮೂರ್ತಿ ಸಿಂಘ್ವಿ ನಿವೃತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸಲಿಂಗರತಿ ಅಪರಾಧ ಎಂಬ ಮಹತ್ವದ ತೀರ್ಪು ನೀಡಿದ ನ್ಯಾಯಪೀಠದಲ್ಲಿದ್ದ ನ್ಯಾಯ­ಮೂರ್ತಿ ಜಿ.ಎಸ್‌. ಸಿಂಘ್ವಿ ಬುಧವಾರ ನಿವೃತ್ತರಾದರು.ಸುಪ್ರೀಂಕೋರ್ಟ್‌ನ ಕ್ರಿಯಾಶೀಲ ಮತ್ತು ದಿಟ್ಟ ನ್ಯಾಯಮೂರ್ತಿ ಎಂದೇ ಹೆಸರಾಗಿದ್ದ ಸಿಂಘ್ವಿ, ಹಲವು ಪ್ರಕರಣ­ಗಳಲ್ಲಿ ಸರ್ಕಾರ ತಲ್ಲಣಗೊಳ್ಳುವಂತಹ ತೀರ್ಪು ನೀಡಿದ್ದರು.ಸುಪ್ರೀಂಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದ ಅವರು, ಹಲವು ಸೂಕ್ಷ್ಮ ಪ್ರಕರಣಗಳ ವಿಚಾರಣೆ ನಡೆಸಿ 2ಜಿ ತರಂಗಾಂತರ ಪರವಾನಗಿ ರದ್ದು ಸೇರಿದಂತೆ ಮಹತ್ವದ ತೀರ್ಪುಗಳನ್ನು ನೀಡಿದ್ದರು.ಕಾರುಗಳ ಮೇಲೆ ವಿವೇಚನಾರಹಿತ ಕೆಂಪು ದೀಪ ಬಳಕೆಗೆ ನಿರ್ಬಂಧ ಹೇರುವ ತೀರ್ಪನ್ನು ಮಂಗಳವಾರವಷ್ಟೇ ನೀಡಿದ್ದ ಸಿಂಘ್ವಿ, ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು.ಸಲಿಂಗರತಿ ಕಾನೂನಬಾಹಿರ ಎಂಬ ಅವರ ಕೊನೆಯ ತೀರ್ಪು ಟೀಕೆಗೂ ಕಾರಣವಾಗಿದೆ. ಸಾಂವಿಧಾನಿಕ ಮೌಲ್ಯಗಳನ್ನು ವಿಸ್ತರಿಸುವ ಅವಕಾಶ­ವೊಂದು ಈ ನ್ಯಾಯ ಮೂರ್ತಿ­ಯವರಿಂದಾಗಿ ತಪ್ಪಿ ಹೋಯಿತು ಎಂದು ಹಿರಿಯ ನ್ಯಾಯವಾದಿಗಳು ಸೇರಿದಂತೆ ಹಲವರು ಟೀಕಿಸಿದ್ದಾರೆ.

ಪ್ರತಿಕ್ರಿಯಿಸಿ (+)