ಬೆಂಗಳೂರು: ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ₨ 2,500 ನಿಗದಿಪಡಿಸಿ ರುವುದು ಸರಿಯಲ್ಲ. ಇಷ್ಟು ಹಣ ನೀಡಲು ತಮ್ಮಿಂದ ಸಾಧ್ಯ ಇಲ್ಲ ಎಂದು ಹೇಳಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರು ಈ ಕುರಿತು ಚರ್ಚಿಸಲು ಸೋಮವಾರ ಸಭೆ ಸೇರಲಿದ್ದಾರೆ. ಸಭೆ ಎಲ್ಲಿ ನಡೆಯುತ್ತದೆ ಎನ್ನುವುದು ಇನ್ನೂ ಖಚಿತವಾಗಿಲ್ಲ.

ಸರ್ಕಾರದ ನಿಲುವಿಗೆ ಆಕ್ಷೇಪ ಎತ್ತಿ ರುವ ಸಕ್ಕರೆ ಕಾರ್ಖಾನೆಗಳ ಮಾಲೀ ಕರು ಕಾರ್ಖಾನೆಗಳನ್ನು ಮುಚ್ಚಿ ನ್ಯಾಯಾಲಯದ ಮೊರೆ ಹೋಗುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆ ಗಳ ಸಂಘಟನೆಯ ಕರ್ನಾಟಕ ಘಟಕದ ಸದಸ್ಯರು ಈ ಕುರಿತು ಸಭೆಯಲ್ಲಿ ಚರ್ಚಿಸಲಿದ್ದಾರೆ.

ಸದ್ಯದ ಪರಿಸ್ಥಿತಿ ಯಲ್ಲಿ ಉತ್ತರ ಕರ್ನಾಟಕದಲ್ಲಿನ ಖಾಸಗಿ ಕಾರ್ಖಾನೆಗಳು ₨ 2000 ಕ್ಕಿಂತ ಹೆಚ್ಚು ದರ ನೀಡಲು ಸಾಧ್ಯವಾ ಗುವುದಿಲ್ಲ ಎಂದು ಕಾರ್ಖಾನೆಗಳ ಮಾಲೀಕರು ಪ್ರತಿಪಾದಿಸುತ್ತಿದ್ದಾರೆ. ಈಗ ನಿಗದಿಪಡಿಸಿರುವ ದರವನ್ನು ಪುನರ್ಪರಿಶೀಲಿಸಬೇಕು ಎಂದು ಸರ್ಕಾರವನ್ನು ಕೋರಲು ಕಾರ್ಖಾನೆ ಮಾಲೀಕರು ನಿರ್ಧರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.