ರಾಣೆಬೆನ್ನೂರು: ಕರ್ನಾಟಕ ರಾಜ್ಯ ಆದಿ ಜಾಂಭವ (ಮಾದಿಗರ) ಸಂಘದಿಂದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಶೀಘ್ರ ಅನುಷ್ಠಾನಗೊಳಿಸಲು ಒತ್ತಾ ಯಿಸಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.

ಪ್ರತಿಭಟನಾ ಮೆರವಣಿಗೆಯು ಹರಳಯ್ಯನಗರದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ ಮೂಲಕ ತಹ ಶೀಲ್ದಾರ ಕಚೇರಿಗೆ ತೆರಳಿ ತಹಸೀಲ್ದಾರ ಇಲಿಯಾಸ್ ಅಹ್ಮದ್ ಅವರಿಗೆ ಮನವಿ ಸಲ್ಲಿಸಿದರು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಮಾತನಾಡಿ, ಪರಿ ಶಿಷ್ಟ ಜಾತಿಗಳಲ್ಲಿ ಮಾದಿಗ ಜನಾಂಗದ ಜನಸಂಖ್ಯೆ ಅತ್ಯಧಿಕವಾಗಿದೆ, ಇತರೆ ಎಲ್ಲಾ ಪರಿಶಿಷ್ಟ ಜಾತಿಗಳಿಗಿಂತ ಕಡಿಮೆ ಸೌಲಭ್ಯಗಳನ್ನು ಪಡೆದು ಎಲ್ಲಾ ರಂಗ ಗಳಲ್ಲಿ ವಂಚಿತರಾಗಿದ್ದೇವೆ ಎಂದು ವರದಿ ಯಲ್ಲಿ ಅಭಿಪ್ರಾಯಪಟ್ಟಿದ್ದು, ಎಲ್.ಜಿ. ಹಾವನೂರು ಆಯೋಗದ ವರದಿಯಲ್ಲಿ ಕೂಡ ಮಾದಿಗ ಜನಾಂಗ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಎಂಬುದು ಅಧ್ಯಯನ ಮಾಡಿ ದಾಖಲಿಸಿದೆ ಎಂದರು.

ಸದಾಶಿವ ಆಯೋಗವು ಪಜಾಯ ಒಳ ಮೀಸಲಾತಿ ವರದಿಯನ್ನು ಕರ್ನಾ ಟಕ ರಾಜ್ಯ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿರುತ್ತದೆ, 101 ಪರಿಶಿಷ್ಟ ಜಾತಿ ಗಳಲ್ಲಿ ಮಾದಿಗ ಜಾತಿಯ ಜನ ಸಂಖ್ಯೆಯು ರಾಜ್ಯದಲ್ಲಿಯೇ ಅತ್ಯಧಿಕ ಇರುತ್ತದೆ, ಸೌಲಭ್ಯಗಳು ಮಾದಿಗ ಜಾತಿಯ ಜನರಿಗೆ ಕನಿಷ್ಠವಾಗಿ ದೊರಕಿ ರುತ್ತದೆ ಎಂಬುದನ್ನು ಸದಾಶಿವ ಆಯೋಗದ ವರದಿಯಲ್ಲಿ ಸಮಗ್ರ ಅಧ್ಯಯನ ಮಾಡಿ ವರದಿಯನ್ನು ಮಾಡಿ ರುತ್ತದೆ ಎಂದರು.

ಸಮಾಜದ ಹಿರಿಯ ಮುಖಂಡ ನೀಲಕಂಠಪ್ಪ ಕಸುಗೂರ ಮಾತನಾಡಿ, ಬಹುಸಂಖ್ಯಾತ ಮಾದಿಗ ಜನಾಂಗ ಸರ್ಕಾರದ ಸರಿಯಾದ ಸೌಲಭ್ಯ ಸಿಗದ ಕಾರಣ ಒಳ ಮೀಸಲಾತಿ ಮಾಡಬೇಕು ಎಂದು ರಾಜ್ಯಾಧ್ಯಂತ ಪ್ರತಿಭಟನೆ ಹಮ್ಮಿ ಕೊಳ್ಳಲಾಗಿದೆ, ಶೇ.57 ರಷ್ಟು ಜನ ಸಂಖ್ಯೆ ಇರುವ ನಮಗೆ ಇಲ್ಲಿಯವರೆಗೆ ಶೇ.2 ಕೂಡ ಸೌಲಭ್ಯಗಳು ಸಿಕ್ಕಿಲ್ಲ, ಮಾದಿಗರ ಹಕ್ಮನ್ನು ಅಲ್ಪ ಸಂಖ್ಯಾತರು ಕಸಿದುಕೊಂಡಿದ್ದಾರೆ, ಅವರು ಅಸ್ಪೃಶ್ಯ ರಲ್ಲ, ಸಂವಿಧಾನಿಕವಾಗಿ ಇದ್ದ ಮೂಲ 5 ಅಸ್ಪೃಶ್ಯ ಜಾತಿಗಳ ಜಾಗೆಯಲ್ಲಿ ರಾಜ ಕೀಯ ಕಾರಣಗಳಿಂದಾಗಿ ದಿನೇ ದಿನೇ ಪರಿಶಿಷ್ಟ ಜಾತಿಯಲ್ಲಿ ಕಳ್ಳಕಿಂಡಿ ಕೊರೆದು 96 ಜಾತಿಗಳು ಸೇರ್ಪಡೆಯಾಗಿವೆ ಎಂದು ದೂರಿದರು.

ತಾಲ್ಲೂಕು ಅಧ್ಯಕ್ಷ ಕೆ.ಎಸ್. ಹಲ್ಡ ಲ್ಡೇರ ಅವರು ಮಾತನಾಡಿ, ಪಂಜಾಬ, ಹರಿಯಾಣಾ, ಆಂದ್ರಪ್ರದೇಶ, ತಮಿಳು ನಾಡಿನಲ್ಲಿ ಜಾರಿಯಲ್ಲಿರುವ ಜನಸಂಖ್ಯಾ ಧಾರಿತ ಮೀಸಲಾತಿಯಂತೆ ಕರ್ನಾಟಕ ರಾಜ್ಯ ಸರ್ಕಾರವೂ ಕೂಡ ತಮಗೆ ಇರುವ ಸಂವಿಧಾನದತ್ತ ಅಧಿಕಾರದ ಬಲದಿಂದ ಶಾಸನ ಸಭೆಗಳಲ್ಲಿ ಮಂಡಿಸಿ ಶೀಘ್ರದಲ್ಲಿ ತಮ್ಮ ಶಿಫಾರಸ್ಸನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ ಬ್ಯಾಡಗಿ, ನಗರಸಭಾ ಸದಸ್ಯ ಪ್ರಕಾಶ ಪೂಜಾರ, ರವಿ ಹುಚ್ಚಪ್ಪನವರ, ಮೈಲಪ್ಪ ಗೋಣಿ ಬಸಮ್ಮನವರ, ಪುಟ್ಟಪ್ಪ ಮರಿಯಮ್ಮ ನವರ, ಎಚ್.ಡಿ. ಹೊನ್ನಕ್ಕಳವರ, ಪ್ರೇಮಾ ಅಟವಾಳಗಿ, ದುರುಗಪ್ಪ, ಗುತ್ತೆಪ್ಪ ಹರಿಜನ, ಶೇಖಪ್ಪ ಬಾರ್ಕೇರ, ತಿರುಕಪ್ಪ ಬ್ಯಾಡಗಿ, ಹೊನ್ನಪ್ಪ ಚಿಕ್ಕಪ್ಪ ನವರ, ರಾಮಪ್ಪ ಕೆಂಪಹಾಲಪ್ಪನವರ, ಮಹಾಂತೇಶ ಪೂಜಾರ, ಪ್ರಭು ಕಿವುಡಣ್ಣನವರ, ನೀಲಪ್ಪ ವರವಜ್ಜಿ, ಚಂದ್ರಪ್ಪ ಚಿಕ್ಕಳ್ಳೇರ, ಚಲುವಾಧಿ ಸಂಘದ ಅಧ್ಯಕ್ಷ ಮಾಲತೇಶ ಮುದ್ಲೇರ, ಕುಬೇರಪ್ಪ ಅಟವಾಳಗಿ, ಎಚ್.ಡಿ. ಗೋಣೀಬಸಪ್ಪನವರ, ಬಸವರಾಜ ಕೊಂಗಿ, ನಾಗರಾಜ ಮರಿಯಮ್ಮನವರ, ಬಸವರಾಜ ಸಾವಕ್ಕನವರ, ಮೈಲಪ್ಪ ದಾಸಪ್ಪನವರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.