ಶುಕ್ರವಾರ, ಮೇ 7, 2021
26 °C

ಪಂಚಕಲ್ಯಾಣ ಮಹೋತ್ಸವಕ್ಕೆ ಸಂಭ್ರಮದ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ವೀರಾಧಿವೀರ... ಜೈ ಮಹಾವೀರ... ಪಾರ್ಶ್ವನಾಥ ಮಹಾರಾಜ ಕೀ ಜೈ... ಎಂಬ ಘೋಷಣೆಗಳು ತಾಲ್ಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಿರಂತರ ಐದು ದಿನಗಳ ಕಾಲ ಕೇಳಿಬಂದವು. ಮಂಗಳವಾರ ಪಂಚಕಲ್ಯಾಣ ಮಹಾಮಹೋತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿತು.ನೂತನವಾಗಿ ನಿರ್ಮಸಲಾದ ಜೈನ ಬಸದಿ ಉದ್ಘಾಟನೆ ಹಾಗೂ ಪಂಚಕಲ್ಯಾಣ ಪ್ರಾಣ ಪ್ರತಿಷ್ಠಾ ಮಹಾಮಹೋತ್ಸವವನ್ನು ಗ್ರಾಮದ ಜನರು ದೊಡ್ಡ ಹಬ್ಬದಂತೆ ಆಚರಿಸಿದರು. ಜೈನ ಧರ್ಮದವರಷ್ಟೇ ಅಲ್ಲದೇ ಉಳಿದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.ರಾಣಿಯರ ವೇಷ ಧರಿಸಿದ ಯುವತಿಯರು ಹಾಗೂ ರಾಜರಂತೆ ಅಲಂಕಾರಗೊಂಡ ಯುವಕರು ತಮ್ಮ ಉಳಿದೆಲ್ಲ ಕೆಲಸಗಳನ್ನು ಬದಿಕಗೊತ್ತಿ, ಆನೆ ಹಾಗೂ ಕುದುರೆ ಸವಾರಿಯ ಮೂಲಕ ಐದು ದಿನದ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ತಂದುಕೊಟ್ಟರು. ಆನೆ ಹಾಗೂ ಕುದುರೆಗಳನ್ನು ನೋಡಲು ಚಿಣ್ಣರ ದಂಡು ಐದು ದಿನಗಳ ಕಾಲ ಮುಖ್ಯ ವೇದಿಕೆಯನ್ನು ಬಿಟ್ಟು ಕದಲಿರಲಿಲ್ಲ.ಪ್ರತಿದಿನ ಬೆಳಿಗ್ಗೆ ಐದು ಗಂಟೆಯಿಂದಲೇ ಕಾರ್ಯಕ್ರಮ ಪ್ರಾರಂಭವಾಗಿ ರಾತ್ರಿ 11ರವರೆಗೆ ನಡೆಯುತ್ತಿತ್ತು. ಕಾರ್ಯಕ್ರಮಕ್ಕೆ ಬಂದ ಎಲ್ಲ ಸಾರ್ವಜನಿಕರಿಗೂ ಊಟದ ಸೌಲಭ್ಯವನ್ನೂ ಕಲ್ಪಿಸಲಾಗಿತ್ತು. ಪಂಚಕಲ್ಯಾಣದ ಕೊನೆಯ ದಿನವಾದ ಮಂಗಳವಾರ ಜಲಕುಂಭ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಅಷ್ಟಕುಮಾರಿಯರು ಹಾಗೂ ರಾಜಕನ್ನಿಕೆಯರು ಪೂರ್ಣಕುಂಭಗಳ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.