ಬುಧವಾರ, ಜನವರಿ 22, 2020
21 °C

ಪಂಚಮಸಾಲಿ ಪೀಠಕ್ಕೆ ಜಮೀನು: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ನಗರದ ಸಮೀಪ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠಕ್ಕೆ 10 ಎಕರೆ ಜಮೀನು ಒದಗಿಸಲು ಪ್ರಯತ್ನಿಸುವುದಾಗಿ ಶಾಸಕ ಎಸ್.ಕೆ. ಬಸವರಾಜನ್ ಭರವಸೆ ನೀಡಿದರು.ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಆಶ್ರಯದಲ್ಲಿ ತಾಲ್ಲೂಕಿನ ಸೀಬಾರದ ಬಳಿಯ ಎಸ್ಸೆನ್ ಸ್ಮಾರಕ ಆವರಣದಲ್ಲಿ ಭಾನುವಾರ ನಡೆದ ಪ್ರೊ.ಶರಣ ಬಸವಹತ್ತಿ ಸ್ಮರಣಾರ್ಥ ಗ್ರಾಮಗಳ ಯುವ ಘಟಕ ಉದ್ಘಾಟನಾ ಸಮಾ ರಂಭದಲ್ಲಿ ಅವರು ಮಾತನಾಡಿದರು.ನಗರದಲ್ಲಿ ಪಂಚಮಸಾಲಿ ಗುರುಪೀಠದ ಶಾಖಾಮಠ ಸ್ಥಾಪಿಸುವ ಮೂಲಕ ಶಾಲಾ, ಕಾಲೇಜುಗಳನ್ನು ತೆರೆದು ಶಿಕ್ಷಣ ನೀಡಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರದ ಜತೆ ವ್ಯವಹರಿಸಿ ನಗರ ಸಮೀಪದಲ್ಲಿ 8 ರಿಂದ 10 ಎಕರೆ ಜಾಗ ಕೊಡಿಸಲು ಯತ್ನಿಸಲಾಗುವುದು ಎಂದರು.ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಚರ ಪೀಠಾಧಿಪತಿ ಸಿದ್ದಲಿಂಗೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ್ ದಿಂಡೂರ್, ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ನೌಕರರ ಘಟಕದ ಅಧ್ಯಕ್ಷ ಸೋಮನಗೌಡ ಎಂ. ಪಾಟೀಲ, ಜಿ.ಪಂ. ಮಾಜಿ ಸದಸ್ಯರಾದ ಎಚ್.ಎನ್. ತಿಪ್ಪೇಸ್ವಾಮಿ,  ಮತ್ತಿತರರು ಹಾಜರಿದ್ದರು.

     

 

ಪ್ರತಿಕ್ರಿಯಿಸಿ (+)