ಶನಿವಾರ, ಮೇ 8, 2021
19 °C

ಪಕ್ಷಗಳಿಗೆ ಮೂಗುದಾರ ಇರಲಿ

ಎನ್. ಯಜ್ಞನಾರಾಯಣ ಉಳ್ಳೂರ,ಕೋಟೇಶ್ವರ. Updated:

ಅಕ್ಷರ ಗಾತ್ರ : | |

ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ತರುವ ಕೇಂದ್ರ ಮಾಹಿತಿ ಆಯೋಗದ ಆದೇಶ ಸ್ವಾಗತಾರ್ಹ. ಇದರಿಂದ ಮತದಾರನಿಗೆ ಸ್ವಲ್ಪಮಟ್ಟಿಗಾದರೂ ಬಲ ಬರುತ್ತದೆ. ಕಳೆದ ಆರು ದಶಕಗಳಿಂದ ಮನಸೋ ಇಚ್ಛೆ ಹಾರಾಡುತ್ತಿದ್ದ ಪಕ್ಷಗಳಿಗೆ ಈ ಕಾಯ್ದೆಯಿಂದ ಸ್ವಲ್ಪಮಟ್ಟಿಗಾದರೂ ಎಚ್ಚರ ಬಂದೀತು.ಜನಸೇವೆಯ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದ, ಬರುತ್ತಿರುವ ರಾಜಕೀಯ ಪಕ್ಷಗಳು ಆಮೇಲೆ ಜನವಿರೋಧಿಯಾಗಿ ಬರಿ ಅಧಿಕಾರ, ಹಣ ಗಳಿಕೆಗಾಗಿ ಹೋರಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಚುನಾವಣೆಯ ಸಂದರ್ಭಗಳಲ್ಲಿ ಹೊಸ ಹೊಸ ಪಕ್ಷಗಳು ಹುಟ್ಟಿಕೊಳ್ಳುತ್ತಲೇ ಇವೆ. ಇಷ್ಟೆಲ್ಲ ಪಕ್ಷಗಳು ಅವಶ್ಯವೇ? ನಿಜವಾಗಿಯೂ ಇವುಗಳ ಉದ್ದೇಶ ಜನಸಾಮಾನ್ಯರ ಹಿತ ಹೌದೇ? ನನಗೆ ಹಾಗನ್ನಿಸುವುದಿಲ್ಲ. ಆರ್‌ಟಿಐ ಕಾಯ್ದೆಯಿಂದ ಸತ್ಯ ಹೊರಬರಲಿ. ಪ್ರಾದೇಶಿಕ ಪಕ್ಷಗಳೂ ಈ ಕಾಯ್ದೆ ವ್ಯಾಪ್ತಿಗೆ ಬರಬೇಕು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.