ಗಂಗಾವತಿ: ಬಿಜೆಪಿ ಅಧಿಕಾರದಲ್ಲಿ ರಾಜ್ಯದ ಅಭಿವೃದ್ಧಿಯಾಗಿಲ್ಲ. ಬದಲಿಗೆ ಮೊದಲಿಗೆ ಯಡಿಯೂರಪ್ಪ, ಎರಡನೇಯದಾಗಿ ಕರಂದ್ಲಾಜೆ, ಭಾರತಿಶೆಟ್ಟಿ ಮೂರನೇಯದಾಗಿ ಸಚಿವ-ಶಾಸಕರು ಅಭಿವೃದ್ಧಿ ಆಗಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ ವ್ಯಂಗ್ಯವಾಡಿದರು.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅಧಿಕೃತವಾಗಿ ಮತ್ತೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲು ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ಬಿಜೆಪಿ ಬಿಟ್ಟು ಹೊರ ಬಂದು ಕರ್ನಾಟಕ ಜನತಾ ಪಾರ್ಟಿಯನ್ನು ಯಡಿಯೂರಪ್ಪ ಕಟ್ಟಿದರೆ ಅವರ ಸ್ವಕ್ಷೇತ್ರದಲ್ಲಿಯೆ ಮತದಾರರು ಠೇವಣಿ ಇಲ್ಲದಂತೆ ಯಡಿಯೂರಪ್ಪ ಅವರನ್ನು ಜನ ಸೋಲಿಸಲಿದ್ದಾರೆ ಎಂದು ಯತ್ನಾಳ ಹೇಳಿದರು. ಇನ್ನೂ ಪಕ್ಷದಲ್ಲಿರುವ ಸಂಸದ ಶಿವರಾಮಗೌಡ, ಸಚಿವ ಸಿ.ಎ. ಉದಾಸಿ ಮತ್ತು ಶಾಸಕ ಪರಣ್ಣ ಮುನವಳ್ಳಿ ಅವರು ಯಾವಾಗಲೋ ಠೇವಣಿ ಕಳೆದುಕೊಂಡಿದ್ದಾರೆ. ಚುನಾವಣೆ ಎದುರಾದರೆ ಸ್ಪರ್ಧಿಸುವ ಧೈರ್ಯಕೂಡ ಇಲ್ಲದಾಗಿದೆ ಎಂದರು.

ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷ ಮಧುಬಂಗಾರಪ್ಪ, ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ, ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಟಿ. ದೇವೇಗೌಡ ಪೊಲೀಸ್ ಪಾಟೀಲ್, ಮಂಡ್ಯ ಸಂಸದ ಚೆಲುವರಾಯ ಸ್ವಾಮಿ, ಇಕ್ಬಾಲ್ ಅನ್ಸಾರಿ, ಎಚ್.ಡಿ. ಕುಮಾರಸ್ವಾಮಿ ಇತರರು ಮಾತನಾಡಿದರು.

ಯಲಬುರ್ಗಾದ ಉದ್ಯಮಿ ಟಿ.ಜಿ. ಪಂಪಾಪತಿ, ಕುಷ್ಟಗಿ ಪುರಸಭೆಯ ಸದಸ್ಯ ಉಮೇಶ ಮಂಗಳೂರು, ಮಾಜಿ ಅಧ್ಯಕ್ಷ ಜಿ.ಕೆ. ಹಿರೇಮಠ, ದ್ಯಾವಣ್ಣ ಡೊಳ್ಳಿನ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.