ಭಾನುವಾರ, ಜೂನ್ 20, 2021
21 °C

ಪಟ್ಟು ಸಡಲಿಸದ ಐಒಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೂಸಾನ್ (ಪಿಟಿಐ): `ಒಲಿಂಪಿಕ್ ಕೂಟದಿಂದ ಡೌ ಕಂಪೆನಿಯ ಪ್ರಾಯೋಜಕತ್ವವನ್ನು ಕೈ ಬಿಡುವ ಪ್ರಶ್ನೆಯಿಲ್ಲ. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ಇದು  ಸ್ಪಷ್ಟ...~

-ಹೀಗೆ ನಿಖರವಾಗಿ ಹೇಳಿದ್ದು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ). ಡೌ ಕಂಪೆನಿಯನ್ನು ಪ್ರಾಯೋಜಕತ್ವದಿಂದ ಕೈ ಬಿಡಬೇಕು ಎನ್ನುವ ಭಾರತದ ಬೇಡಿಕೆಗೆ ಐಒಸಿ ನೀಡಿದ ಕಠೋರ ಉತ್ತರವಿದು.

`1984ರ ಭೋಪಾಲ್ ಅನಿಲ ದುರಂತಕ್ಕೆ ಡೌ ಕಂಪೆನಿ ಜವಾಬ್ದಾರಿ ಅಲ್ಲ ಎಂಬುದು ನಮಗೆ ಗೊತ್ತಿದೆ. ನಮ್ಮ  ನಿರ್ಧಾರ ಸ್ಪಷ್ಟ. ಈ ದುರಂತದಿಂದ 25,000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸಾಕಷ್ಟು ಜನ ನೋವಿನಿಂದ ನರಳಿದ್ದಾರೆ ಎನ್ನುವುದೂ ತಿಳಿದಿದೆ~ ಎಂದು ಐಒಸಿ ಅಧ್ಯಕ್ಷ ಜಾಕ್ ರಾಗ್ ಹೇಳಿದ್ದಾರೆ.

ಭಾರತ ಒಲಿಂಪಿಕ್ಸ್ ಸಂಸ್ಥೆ (ಐಒಎ) ಈ ವಿಷಯದಲ್ಲಿ ಐಒಸಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ ಎನ್ನುವ ಕಾರಣಕ್ಕಾಗಿ ಭಾರತ ಸರ್ಕಾರ ಮಧ್ಯ ಪ್ರವೇಶ ಮಾಡಿತ್ತು. ಈಗ ಸರ್ಕಾರದ ಎರಡನೇ ಸಲದ ಒತ್ತಾಯಕ್ಕೂ ಐಒಸಿ ತನ್ನ ನಿರ್ಧಾರದಲ್ಲಿ ಪಟ್ಟು ಸಡಲಿಸಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.