ಜಮಖಂಡಿ: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವುದರಿಂದ ವಿದ್ಯಾರ್ಥಿಗಳಿಗೆ ಬಹುಮುಖ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬಿಇಓ ಎ.ಸಿ. ಗಂಗಾಧರ ಅಭಿಪ್ರಾಯಪಟ್ಟರು. ಸ್ಥಳೀಯ ಸರಕಾರಿ ಗಂಡು ಮಕ್ಕಳ ಮಾದರಿ (ಪಾಗಾ) ಶಾಲೆ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಲ್ಪಭಾಷಿಕ ಮರಾಠಿ ಮಾಧ್ಯಮದ ತಾಲ್ಲೂಕು ಮಟ್ಟದ ‘ಪ್ರತಿಭಾ ಕಾರಂಜಿ’ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಅಡಗಿದ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಪ್ರತಿಭಾ ಕಾರಂಜಿಯ ಮೂಲ ಉದ್ದೇಶವಾಗಿದೆ. ಕಾರಣ ಪ್ರಾಮಾಣಿಕತೆಯಿಂದ ಪ್ರತಿಭಾನ್ವೇಷನೆ ಕಾರ್ಯ ಜರುಗಬೇಕು ಎಂದು ನಿರ್ಣಾಯಕರಲ್ಲಿ ಮನವಿ ಮಾಡಿದರು. ಎಸ್ಡಿಎಂಸಿ ಅಧ್ಯಕ್ಷ ಮೋಹನ ಸಾವಂತ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕರ ಸಂಗದ ಜಿಲ್ಲಾ ಅಧ್ಯಕ್ಷ ಬಿ.ಪಿ. ಬಾಗೇನವರ, ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಪಿ. ಹೂಗಾರ, ಅಲ್ಪಭಾಷಿಕ ಶಿಕ್ಷಣ ಸಂಯೋಜಕ ಕೆಂಭಾವಿ, ಸಿಆರ್ಸಿ ಎಂ.ಜಿ. ನ್ಯಾಮಗೌಡ, ಬಿಆರ್ಸಿ ಎಂ.ಎಸ್. ನ್ಯಾಮಗೌಡ, ಬಿ.ಆರ್. ಹಿರೇಮಠ, ಛತ್ರಪತಿ ಶಿವಾಜಿ ಕೋ-ಆಪ್ ಲಿಮಿಟೆಡ್ನ ಅಧ್ಯಕ್ಷ ನಾನಾ ಮೋರೆ, ಜಮಖಂಡಿ ಕೋ-ಆಪ್. ಲಿಮಿಟೆಡ್ನ ಅಧ್ಯಕ್ಷ ಉಮೇಶ ಜಾಧವ, ವಿ.ಜಿ. ಪುಕಾಳೆ, ರಮೇಶ ಜಾಧವ, ಪ್ರಕಾಶ ತೇಲಿ, ಎಸ್.ಬಿ. ನಾವಂದರ, ಸಂಜಯ ಕದಮ ವೇದಿಕೆಯಲ್ಲಿದ್ದರು.

ಶಿಕ್ಷಕರಾದ ಎಸ್.ಬಿ. ಢಂಗಿ, ಎಸ್.ಜಿ. ದೇಶಪಾಂಡೆ, ಎಸ್.ಸಿ. ತಳವಾರಮ, ಬಿ.ಬಿ. ಜೀರಗಾಳ, ಎ.ಕೆ. ವನಮಾನೆ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕಿ ಕೆ.ಬಿ. ಯಾದವ ಸ್ವಾಗತಿಸಿದರು. ಶಿಕ್ಷಕಿ ಆರ್.ಎಸ್. ಶಿಂಧೆ ನಿರೂಪಿಸಿದರು. ಶಿಕ್ಷಕಿ ಎಸ್.ಜಿ. ವಾಘ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.