ಸೋಮವಾರ, ಸೆಪ್ಟೆಂಬರ್ 16, 2019
26 °C

ಪಠ್ಯೇತರ ಚಟುವಟಿಕೆ ಅಗತ್ಯ: ಮೋಟಮ್ಮ

Published:
Updated:

ಬಾಳೆಹೊನ್ನೂರು: ವಿದ್ಯಾರ್ಥಿ ಜೀವನದಲ್ಲಿ ಪಠ್ಯೇತರ ಚಟುವ ಟಿಕೆಗಳಲ್ಲಿ ಭಾಗವಹಿಸು ವುದರಿಂದ ಸರ್ವಾಂಗೀಣ ಬೆಳವಣಿಗೆ ಸಾಧ್ಯ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ತಿಳಿಸಿದರು.

ಸಮೀಪದ ಸೀಗೋಡು ಜವಾ ಹರ್ ನವೋದಯ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಭಾರತ ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿ ಸಮಾರೋಪ ದಲ್ಲಿ ಅವರು ಮಾತನಾಡಿದರು.ನವೋದಯ ವಿದ್ಯಾಲಯದಲ್ಲಿ ಮಕ್ಕಳ ಆರೋಗ್ಯ ಕೊಠಡಿ ನಿರ್ಮಾಣಕ್ಕಾಗಿ ವಿಧಾನ ಪರಿಷತ್ ಸದಸ್ಯರ ಅನುದಾನದಿಂದ 2 ಲಕ್ಷ ರೂಪಾಯಿಗಳ ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದರು.ಪ್ರಾಚಾರ್ಯ ರಾಮಿರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಲಯದ ವಿಎಂಸಿ ಸದಸ್ಯೆ ಬಿ.ಸಿ.ಗೀತಾ, ಹೇರೂರು ಗ್ರಾ.ಪಂ.ಅಧ್ಯಕ್ಷ ಸಿ.ಕೆ.ನಟರಾಜ್, ಮಾಜಿ ಅಧ್ಯಕ್ಷ ಎನ್.ಎ.ಸಂಜೀವ, ಉಪ ಪ್ರಾಚಾರ್ಯ ಕೆ.ಎಂ.ಚಿದಾನಂದ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಕುಮಾರ ಸ್ವಾಮಿ, ರೇಖಾ ಅಶೋಕ್ ಇದ್ದರು.`ಯುವಶಕ್ತಿಯಿಂದ ದೇಶ ಸಮೃದ್ಧ~

ಬಾಳೆಹೊನ್ನೂರು: ಯುವಶಕ್ತಿಯಿಂದ ದೇಶ ಸಮೃದ್ಧವಾಗಲಿದೆ ಎಂದು ಮಾಗಡಿ ಸೋಲೂರು ರೇಣುಕ ಯಲ್ಲಮದೇವಿ ಮಹಾ ಸಂಸ್ಥಾನದ ಜಗದ್ಗುರು ಆರ್ಯಶ್ರೀ ರೇಣುಕಾನಂದ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಕಲಾರಂಗ ಕ್ರೀಡಾಂಗಣದ ಗಣೇಶೊ ೀತ್ಸವ ವೇದಿಕೆಯಲ್ಲಿ ಇತ್ತೀಚೆಗೆ ನಡೆದ 53ನೇ ವರ್ಷದ ಶ್ರೀವಿದ್ಯಾಗಣಪತಿ ಮಹೋತ್ಸವದ ಸಮಾರೋಪದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ತಂದೆ ತಾಯಿ, ಗುರುಹಿರಿಯರನ್ನು ಯಾರು ಗೌರವಿಸುತ್ತಾರೋ ಅವರು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿ ಎಂದರು. ಸೇವಾ ಸಮಿತಿ ಅಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂ.ಕೆ. ಶಿವ ರಾಮೇಗೌಡ ಎಮ್ಮೆನಹಡ್ಲು, ಕೆ.ಬಿ. ಕಳಸಪ್ಪ ಗೌಡ ಕಾನ್ಕೆರೆ , ಹಿರಿಯಣ್ಣ, ಸಿ.ಎಸ್.ರಮೇಶ್, ಪ್ರಕೃತಿ, ಸುರೇಂದ್ರ, ಕೃಷ್ಣಭಟ್ ಇದ್ದರು.

Post Comments (+)