ದಾವಣಗೆರೆ: ಗ್ರಾಮೀಣ ಪ್ರದೇಶದ ಬಡಕುಟುಂಬಗಳ ಹಲವು ಪಡಿತರಚೀಟಿ ರದ್ದುಗೊಂಡಿರುವುದು. ಹೊಸ ಪಡಿತರ ಚೀಟಿಗಾಗಿ ಆನ್ಲೈನ್ ಅರ್ಜಿ ಪಡೆಯಲು ಗ್ರಾಮ ಪಂಚಾಯ್ತಿ ಸಿಬ್ಬಂದಿ ನಿರಾಕರಿಸುತ್ತಿರುವ ವಿಷಯ ಬುಧವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯಸಭೆಯಲ್ಲಿ ಪ್ರತಿಧ್ವನಿಸಿತು.

ವಿಷಯ ಪ್ರಸ್ತಾಪಿಸಿದ ಕುಕ್ಕುವಾಡ ಕ್ಷೇತ್ರದ ಸದಸ್ಯ ಜಿ.ಎಂ. ರುದ್ರೇಗೌಡ, ಪ್ರತಿ ಗ್ರಾಮದಲ್ಲೂ 50ರಿಂದ 60 ಕುಟುಂಬಗಳ ಪಡಿತರ ಚೀಟಿಗಳು ರದ್ದಾಗಿದೆ. ಅವುಗಳನ್ನು ಸರಿಪಡಿಸಲೂ ಸಹ ಅರ್ಜಿ ಸ್ವೀಕರಿಸುತ್ತಿಲ್ಲ. ನ್ಯೂನತೆ ನೆಪ ಹೇಳಿ ಅಂತಹ ಚೀಟಿಗಳಿಗೆ ನ್ಯಾಯಬೆಲೆ ಅಂಗಡಿಗಳಲ್ಲೂ ಪಡಿತರ ವಿತರಿಸುತ್ತಿಲ್ಲ. ಹೊಸದಾಗಿ ಅರ್ಜಿ ಸ್ವೀಕರಿಸುತ್ತಲೂ ಇಲ್ಲ. ಕೂಡಲೇ, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸದಸ್ಯರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಇಒ ಎಲ್.ಎಸ್. ಪ್ರಭುದೇವ್, ಇಲಾಖೆಯ ಕೆಲಸ ಮಾಡಲು ಸಿಬ್ಬಂದಿ ಕೊರತೆ ಇದೆ. ಇಂತಹ ಸಂದರ್ಭದಲ್ಲಿ ಪಡಿತರ ಚೀಟಿಯ ಅರ್ಜಿ ಸ್ವೀಕರಿಸಲು ಸಾಧ್ಯವಿಲ್ಲ. ಎಲ್ಲ ಗ್ರಾಮ ಪಂಚಾಯ್ತಿ ಆಡಳಿತವನ್ನು ಕಂಪ್ಯೂಟರೀಕರಣಗೊಳಿಸಿ, ಕಂಪ್ಯೂಟರ್ ಕಲಿತವರಿಗೆ ತರಬೇತಿ ನೀಡಿ ಎಲ್ಲ ಸಿದ್ಧತೆ ಮಾಡಿಕೊಂಡು ನಂತರ ಅರ್ಜಿ ಸ್ವೀಕರಿಸಲು ಆದೇಶ ನೀಡಲಾಗುವುದು. ಅದಕ್ಕೆಲ್ಲ ಎರಡು ತಿಂಗಳು ಕಾಲಾವಕಾಶ ಬೇಕು ಎಂದು ಸಮಜಾಯಿಷಿ ನೀಡಿದರು.

ಅಲ್ಲಿಯರೆಗೂ ನ್ಯೂನತೆ ಇವೆ ಎಂದು ರದ್ದುಪಡಿಸಿದ ಚೀಟಿಗಳಿಗೆ ಪಡಿತರ ವಿತರಿಸಲು ಸೂಚಿಸಿ, ಇಲ್ಲದಿದ್ದರೆ ಬಡವರು ಅನ್ನಕ್ಕಾಗಿ ಪರಿತಪಿಸಬೇಕಾಗುತ್ತದೆ ಎಂದು ಚಮನ್ ಸಾಬ್ ಸೇರಿದಂತೆ ಬಹುತೇಕ ಸದಸ್ಯರು ಒತ್ತಾಯಿಸಿದರು.

ಆನ್ಲೈನ್ ವ್ಯವಸ್ಥೆ ಇರುವ ಕಾರಣ ರದ್ದುಗೊಂಡ ಚೀಟಿಗಳಿಗೆ ಪಡಿತರ ವಿತರಿಸಲು ಸಾಧ್ಯವಿಲ್ಲ. ಹೊಸ ಕಾರ್ಡ್ ಪಡೆಯಲು ಎರಡು ತಿಂಗಳು ಕಾಯಲೇಬೇಕು ಎಂದು ಇಒ ತಿಪ್ಪೇ ಸಾರಿಸಿದರು.

ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಶಿಥಿಲಗೊಂಡಿದ್ದು ಅಂತಹ ಕಂಬಗಳನ್ನು ಕೂಡಲೇ ಬದಲಿಸುವಂತೆ ಹಲವು ಸದಸ್ಯರು ಬೆಸ್ಕಾಂ ಎಂಜಿನಿಯರ್ಗೆ ತಾಕೀತು ಮಾಡಿದರು.

ಪ್ರಸಕ್ತ ಸಾಲಿನಲ್ಲಿ 155 ಟ್ರ್ಯಾಕ್ಟರ್ಗಳಿಗೆ ಸಬ್ಸಿಡಿ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ 92 ಟ್ರ್ಯಾಕ್ಟರ್ಗಳಿಗೆ ಸಬ್ಸಿಡಿ ವಿತರಿಸಲಾಗಿದೆ. ಕಂದುಬಾಳೆ, ಪಚ್ಚಬಾಳೆ, ದಾಳಿಂಬೆ, ಕೋಕೋ ಸೇರಿದಂತೆ 782 ಎಕರೆಗೆ ಸಬ್ಸಿಡಿ ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದರು.

ಮುಖ್ಯಶಿಕ್ಷಕರ ವಿರುದ್ಧ ಕ್ರಮ: ಶಾಲೆಗಳಲ್ಲಿ ನಡೆಯುವ ಪಠ್ಯಪುಸ್ತಕ, ಸಮವಸ್ತ್ರ ವಿತರಣೆಗೆ ಸ್ಥಳೀಯ ಜನಪ್ರತಿನಿಧಿಗಳು, ತಾಲ್ಲೂಕು ಪಂಚಾಯ್ತಿ ಸದಸ್ಯರನ್ನು ಆಹ್ವಾನಿಸುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು. ಅಂತಹ ಶಾಲೆಗಳ ಮುಖ್ಯಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ದೊಗ್ಗಳ್ಳಿ ರೇವಣಸಿದ್ದಪ್ಪ ಬಿಇಒಗೆ ಸೂಚಿಸಿದರು.

ಕ್ರಮಕ್ಕೆ ಶಿಫಾರಸು: ಯಾವುದೇ ಯೋಜನೆಗಳ ಫಲಾನುಭವಿಗಳ ಆಯ್ಕೆಯನ್ನು ಗ್ರಾಮ ಅಥವಾ ವಾರ್ಡ್ ಸಭೆಯಲ್ಲೇ ಮಾಡಬೇಕು. ಅಧಿಕಾರಿಗಳು ಕಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸಬೇಕು. ಆಯ್ಕೆ ಕುರಿತು ಸೂಕ್ತ ದಾಖಲೆ ಒದಗಿಸಬೇಕು. ಇಲ್ಲದಿದ್ದರೆ ಅಂತಹ ಪಟ್ಟಿ ಸಿಂಧುವಾಗುವುದಿಲ್ಲ. ಗ್ರಾಮ ಸಭೆ ನಡೆಸದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಜಿಲ್ಲಾ ಪಂಚಾಯ್ತಿಗೆ ಶಿಫಾರಸು ಮಾಡಲಾಗುವುದು ಎಂದು ಇಒ ಎಚ್ಚರಿಸಿದರು.
ಉಪಾಧ್ಯಕ್ಷೆ ನಿರ್ಮಲಾ ಅಜ್ಜಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಂದ್ರಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.