ಶನಿವಾರ, ಜನವರಿ 18, 2020
18 °C

ಪಡಿತರ ಚೀಟಿ ಖಾಸಗಿ ಸೇವಾ ಕೇಂದ್ರ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ:ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗಾಗಿ ನಗರಗಳಲ್ಲಿ ತೆರೆದಿದ್ದ 260 ಖಾಸಗಿ ಫೋಟೋ ಬಯೋಮೆಟ್ರಿಕ್‌ ಸೇವಾ ಕೇಂದ್ರಗಳನ್ನು ಮುಚ್ಚಲಾಗಿದ್ದು ಇನ್ನು ಮುಂದೆ ‘ಕರ್ನಾಟಕ ಒನ್‌’ ಮತ್ತು ‘ಅಟಲ್‌ಜೀ ಜನಸ್ನೇಹಿ ಕೇಂದ್ರ’ಗಳು ಮಾತ್ರ ಈ  ಕಾರ್ಯನಿರ್ವಹಿಸಲಿವೆ.ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಗ್ರಾಹಕ­ರಿಂದ ಬೇಕಾಬಿಟ್ಟಿ ಹಣ ವಸೂಲು ಮಾಡು­ತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗದುಕೊಳ್ಳ­ಲಾ­ಗಿದೆ’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ­ಗಳ ಇಲಾಖೆ ಆಯುಕ್ತ ಹರ್ಷ ಗುಪ್ತಾ ‘ಪ್ರಜಾವಾಣಿ’ಗೆ ತಿಳಿಸಿದರು.‘ಕರ್ನಾಟಕ ಒನ್‌’ ಕೇಂದ್ರಗಳಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮೂರು ತಿಂಗಳ ಹಿಂದೆ ಆರಂಭವಾಗಿದೆ. ಹೀಗಾಗಿ ಈ ನಗರ­ಗಳಲ್ಲಿ ಖಾಸಗಿ ಸೇವಾ ಕೇಂದ್ರಗಳನ್ನು ರದ್ದು­ಪಡಿಸಲಾಗಿದೆ. ‘ಕರ್ನಾಟಕ ಒನ್‌’ ಇಲ್ಲದ ಕಡೆ ಮಾತ್ರ ಖಾಸಗಿ ಫೋಟೋ ಬಯೋಮೆಟ್ರಿಕ್‌ ಕೇಂದ್ರಗಳು ಮುಂದು­ವರಿಯಲಿವೆ’ ಎಂದರು.‘ಗ್ರಾಮೀಣ ಪ್ರದೇಶಗಳಲ್ಲಿರುವ ಖಾಸಗಿ ಫೋಟೋ ಬಯೋಮೆಟ್ರಿಕ್‌ ಕೇಂದ್ರ­ಗಳನ್ನೂ ಸದ್ಯದಲ್ಲೆ ಬಂದ್‌ ಮಾಡ­ಲಾಗುವುದು. ಪರ್ಯಾಯವಾಗಿ ತಾಲ್ಲೂಕು ಕೇಂದ್ರಗಳಲ್ಲಿರುವ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿ­ಕೊಡಲಾಗುವುದು. ಇಲಾಖೆಯ ತಾಲ್ಲೂಕು ಕಚೇರಿಗಳಲ್ಲೂ ಅರ್ಜಿ­ಗಳ­ನ್ನು ಸ್ವೀಕರಿಸುವ ವ್ಯವಸ್ಥೆ ಆರಂಭಿಸುವ ಚಿಂತನೆ ಇದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)