ಮಂಗಳವಾರ, ಜನವರಿ 21, 2020
28 °C

ಪದವೀಧರರ ಕ್ಷೇತ್ರ; ಶಂಕರಮೂರ್ತಿ ಬಿಜೆಪಿ ಅಭ್ಯರ್ಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ನೈರುತ್ಯ ಪದವೀ ಧರರ ಕ್ಷೇತ್ರ ವ್ಯಾಪ್ತಿಯ ಪದವೀಧರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಫೆ. 5ರವರೆಗೆ ಅವಕಾಶವಿದೆ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ತಕ್ಷಣವೇ ನೋಂದಣಿ ಮಾಡಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮನವಿ ಮಾಡಿದರು.ಆರು ಜಿಲ್ಲೆಗಳನ್ನು ಒಳಗೊಂಡ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಈ ಬಾರಿಯೂ ಪಕ್ಷ ನನ್ನನ್ನೇ ಅಭ್ಯರ್ಥಿ ಯಾಗಿ ಪ್ರಕಟಿಸಿದೆ. ಇದೇ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದು, ಉತ್ತಮವಾಗಿ ಕೆಲಸ ಮಾಡಿದ್ದೇನೆ ಎಂದು ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಈ ಬಾರಿ ಯುವಕರಿಗೆ ಟಿಕೆಟ್ ನೀಡ ಬೇಕೆನ್ನುವ ಅಭಿಪ್ರಾಯ ಪಕ್ಷ ಮತ್ತು ಸಂಘ ಪರಿವಾರದವರು ವ್ಯಕ್ತಪಡಿ ಸಿದ್ದರಲ್ಲವೇ? ಎಂದು ಪ್ರಶ್ನಿಸಿದಾಗ, ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇನೆ.  ರಾಜ್ಯ ಘಟಕ ನನ್ನನ್ನೇ ಪಕ್ಷದ ಅಭ್ಯರ್ಥಿಯಾಗಿ ಅವಿರೋಧ ಆಯ್ಕೆ ಮಾಡಿದೆ. ಈ ಹಿಂದೆ ಅತ್ಯಧಿಕ ಮತ ಗಳಿಂದ ಗೆಲುವು ಸಾಧಿಸಿದ್ದೇನೆ. ಈ ಬಾರಿ ಯೂ ಅಷ್ಟೇ ವಿಶ್ವಾಸವಿದೆ ಎಂದರು.ಸಿ.ಟಿ.ರವಿ ರವಿ,  ಪ್ರೇಂಕುಮಾರ್,  ಬಿ.ರಾಜಪ್ಪ, ಡಿ.ಕೆ.ನಿಂಗೇಗೌಡ, ವರಸಿದ್ದಿವೇಣು,   ಇದ್ದರು.

 

ಪ್ರತಿಕ್ರಿಯಿಸಿ (+)