ಮಂಗಳವಾರ, ಜೂನ್ 22, 2021
28 °C

ಪ.ಪಂ ಅವ್ಯವಹಾರ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯಿತಿ ವಸತಿ ಯೋಜನೆ ಸೇರಿದಂತೆ ಎಸ್‌ಸಿ, ಎಸ್‌ಟಿ ಮೀಸಲು ಹಣ ದೂರುಪಯೋಗಪಡಿಸಿ ಕೊಂಡಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಪಟ್ಟಣ ಬಿಜೆಪಿ ಘಟಕ ಒಕ್ಕೂರಲಿನಿಂದ ಆಗ್ರಹಸಿದೆ.ಈ ಕುರಿತು ಬಿಜೆಪಿ ಕಾರ್ಯಾ ಲಯದಲ್ಲಿ ಏರ್ಪಡಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಘಟಕದ  ಕಾರ್ಯದರ್ಶಿ ಯಲ್ಲಪ್ಪ ಜಿಡ್ಡಿ ದಾಖಲೆಗಳ ಸಮೇತ ನಡೆದಿರುವ ಅವ್ಯವಹಾರಗಳ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು.ಪಟ್ಟಣದಲ್ಲಿ ನಿರ್ಮಿಸಿರುವ ರಾಜೀವ ಗಾಂಧಿ ವಸತಿ ಯೋಜನೆಯ ಒಟ್ಟು 445 ಮನೆಗಳು ಬೇನಾಮಿ ಹೆಸರಿನಲ್ಲಿ ಅನರ್ಹರ ಪಾಲಾಗಿದ್ದು, ಪ್ರಭಾವಿ ವ್ಯಕ್ತಿಯೊರ್ವರು ಮನೆ ಹಂಚಿಕೆ ಮಾಡಿ ನಿಯಮ ಉಲ್ಲಂಘಿಸಿದ್ದಾರೆ.ಪ.ಪಂ ಮಾಹಿತಿ ಪ್ರಕಾರ ಎಲ್ಲ ಮನೆಗಳಲ್ಲಿ ಫಲಾನುಭವಿಗಳು ವಾಸವಿದ್ದಾರೆ. ಆದರೆ ಕಳೆದ 7-8 ವರ್ಷದಿಂದ  ಬೇನಾಮಿ ಹೆಸರಿನಲ್ಲಿರುವ ಹಲವು ಮನೆಗಳಿಗೆ ಬೀಗ ಹಾಕಲಾಗಿದೆ.ಇನ್ನೂ ಪ್ರಭಾವಿ ವ್ಯಕ್ತಿಗಳ  ಆಪ್ತರಾದ ಕೆಲವರು ದನಕಟ್ಟಲು, ಕೃಷಿ ಉಪಕರಣ ಇಡಲು, ಮನೆ ಬಾಡಿಗಿಗೆ ನೀಡಿದರೆ ಮತ್ತೆ ಕೆಲವರು ಪಟ್ಟಾ ಹಂಚುವ ಮೊದಲೇ ಇದ್ದ ಮನೆಯನ್ನು ತಮ್ಮದೆಂದು ಬೇರೆಯವರಿಗೆ ಪರಾ ಭಾರೆ ಮಾಡಿರುವ ಪ್ರಕರಣಗಳು ಸಾಕಷ್ಟಿವೆ.  ವಸತಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿ ಖಾತೆಯನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ತೆರೆಯದೆ, ಸ್ಥಳೀಯ ಅರ್ಬನ್ ಬ್ಯಾಂಕಿನಲ್ಲಿಯೇ ತೆರೆದು ಕೋಟ್ಯಂತರ ರೂಪಾಯಿಗಳ ದುರ್ಬಳಕೆಗೆಯಾಗಿದೆ ಎಂದು ಆರೋಪಿ ಸಿದರು.

ಇನ್ನೂ ಖಾತೆ ತೆರದ ಹಲವರಲ್ಲಿ ತುಂಬಿದ ಹಣ ಜಮಾ ಆಗದೆ ಕೇವಲ 38 ಫಲಾನುಭವಿಗಳು ಮಾತ್ರ ತುಂಬಿದ್ದಾರೆ ಎನ್ನುವುದು ಪಟ್ಟಣದ ನಿಜವಾದ ಫಲಾನುಭವಿಗಳಿಗೆ, ನಾಗರಿಕರಿಗೆ ದಿಗ್ಭ್ರಮೆ  ಮೂಡಿಸಿದೆ.ಆಶ್ರಯ ಸಮಿತಿಯಲ್ಲಿ ಬಿಜೆಪಿಯ ನಾಲ್ಕು ಸದಸ್ಯರು ಇದ್ದರೂ ಇದುವರೆಗೆ ಅವರನ್ನು ಒಮ್ಮೆಯೂ ಸಭೆಗೆ ಆಹ್ವಾನಿಸಿಲ್ಲ.22.75ರ ಅಡಿಯಲ್ಲಿ ರೂಪಿಸಿದ ಕ್ರಿಯಾ ಯೋಜನೆ ಸಮಪರ್ಕವಾಗಿ ಅನುಷ್ಟಾನಗೊಳ್ಳದೆ, ಜಿಲ್ಲೆಯ ಇತರ ಪ.ಪಂ ಗಳಿಗಿಂತ ಮುಳಗುಂದ ಹಣ ದುರ್ಬಳೆಕೆಯಲ್ಲಿ ಪ್ರಥಮ ಸ್ಥಾನ ದಲ್ಲಿರುವ ಬಗ್ಗೆ ಈಚಗೆ ಪ್ರಕಾಶ ಕಾಂಬಳೆ ತನಿಖಾಧಿಕಾರಿಯ ವರಿದಿ ಬಹಿ ರಂಗಪಡಿಸಿದೆ.  ಇತ್ತೀಚಿನ ದಿನಗಳಲ್ಲಿ ವಾಜಪೇಯಿ ನಗರ ವಸತಿ ಯೋಜನೆ ಅಡಿ ಬೋಗಸ್ ಚೆಕ್ ವಿತರಿಸಿರುವ ಆಡಳಿತ ಮಂಡಳಿ ಪಟ್ಟಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ತಕ್ಷಣ ಪ.ಪಂ ನಡೆದಿರುವ ಅವ್ಯವಹಾರದ ಸಮಗ್ರ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ವಾರಾಂತ್ಯದಲ್ಲಿ ಕ್ರಮ ಜರುಗಿಸದಿದ್ದರೆ ಘಟಕದ ವತಿಯಿಂದ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿಕ್ಕೆ ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ಸ್ಥಳೀಯ ಘಟಕದ ಅಧ್ಯಕ್ಷ ಬಸವಣ್ಣೆಪ್ಪ ಉಜ್ಜಣ್ಣವರ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಘಟಕದ ಅಧ್ಯಕ್ಷ ಬುದ್ದಪ್ಪ ಮಾಡೊಳ್ಳಿ, ವಿ.ಸಿ. ಮರಿದೇವರಮಠ, ಅಲ್ಪಸಂಖ್ಯಾತರ ಘಟಕದ ಆಧ್ಯಕ್ಷ ಮೌಲಾಸಾಬ್ ಸದರಭಾವಿ, ಶಿವಲಿಂಗಪ್ಪ ಮಟ್ಟಿ, ಸಿದ್ರಾಮಯ್ಯ ಹಿರೇಮಠ, ಸಿದ್ಧಣ್ಣಾ ಗೌಳಿ, ಅಮ್ಝಾದ ನರಗುಂದ, ಮಾಬುಸಾಬ್ ಅಬ್ಬುನವರ, ಅಡಿವೇಪ್ಪ ಬಾತಾಖಾನಿ, ನಾಗಪ್ಪ ಸಂಗನಪೇಟಿ, ಸಿ.ಎಸ್. ಪತ್ರಿ, ಬಸವರಾಜ ದಿವಟರ, ಚನಬಸಪ್ಪ ಕತ್ತಿ, ಈರಣ್ಣ ಹೊಂಬಳ, ಶಿವಪ್ಪ ಮಟ್ಟಿ. ಶಂಕ್ರಪ್ಪ ನೀರಲಗಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.