ಶುಕ್ರವಾರ, ಜೂನ್ 18, 2021
23 °C
ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಪರಮಶಿವಯ್ಯ ವರದಿ ಜಾರಿಗೆ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ಗುರು­ವಾರ ನಗರದಲ್ಲಿ ತುರ್ತುಸಭೆ ನಡೆಸಿ ಮಾರ್ಚ್‌ 3 ರಂದು ನಗರದಲ್ಲಿ ನಡೆಸಲು ಉದ್ದೇಶಿಸಿರುವ ಎತ್ತಿನಹೊಳೆ ಶಂಕು ಸ್ಥಾಪನೆ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಲು ನಿರ್ಧರಿಸಿದರು.ಬಯಲುಸೀಮೆ ಭಾಗಕ್ಕೆ ಕೆರೆ ಕುಂಟೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸಿ ಕೃಷಿಗೆ ಮತ್ತು ಕುಡಿಯುವ ನೀರಿನ ಯೋಜನೆಗೆ ಪೂರಕವಾಗಿರುವ ಪರಮ­ಶಿವಯ್ಯ ವರದಿ ಅನುಷ್ಠಾನಕ್ಕಾಗಿ ದಶಕ­ದಿಂದಲೂ ಹೋರಾಟ ನಡೆಸಲಾಗುತ್ತಿದೆ. ಜನರ ಧ್ವನಿ ಧಿಕ್ಕರಿಸಿ ಕುಡಿಯುವ ನೀರಿಗಷ್ಟೆ ಸೀಮಿತ­ವಾಗಿರುವ ಎತ್ತಿನಹೊಳೆ ಯೋಜನೆ­ಯನ್ನು ಅನುಷ್ಠಾನಗೊಳಿಸಲು ಹೊರ­ಟಿದೆ ಎಂದು ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.ಸಾವಿರಾರು ಕೊಟಿ ರೂಪಾಯಿ ಖರ್ಚು ಮಾಡಿದರೂ ಎತ್ತಿನ­ಹೊಳೆ ಯೋಜನೆಯು, ಕೃಷಿಯನ್ನು ನಂಬಿರುವ ಬಯಲು ಸೀಮೆ ಜಿಲ್ಲೆಗಳ ದಾಹ ಇಂಗಿಸಲಾರದು. ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳದ ಸರ್ಕಾರವು ಮುಂಬರುವ ಲೋಕಸಭಾ ಚುನಾವಣೆ­ಯನ್ನು ದೃಷ್ಟಿಯಲ್ಲಿರಿಸಿಕೊಂಡು ಅವೈಜ್ಞಾನಿಕ ಯೋಜನೆ ಜಾರಿ ಮಾಡಲು ಹೊರಟಿದೆ ಎಂದರು.ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಆರ್.ಆಂಜನೇಯರೆಡ್ಡಿ, ಮುಖಂಡರಾದ ಸೊಣ್ಣೇನಹಳ್ಳಿ ನಾರಾಯಣ­ಸ್ವಾಮಿ, ರಾಯಪ್ಪನಹಳ್ಳಿ ಅಶ್ವತ್ಥರೆಡ್ಡಿ, ಅಗಲಗುರ್ಕಿ ಚಂದ್ರ­ಶೇಖರ್, ಸುಧಾವೆಂಕಟೇಶ್, ಮಳ್ಳೂರು ಹರೀಶ್, ಅಗಲಗುರ್ಕಿ ಚಲಪತಿ, ಯಲುವಹಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಬೈರೇಗೌಡ, ಮಂಚನಬಲೆ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕ­ರಾದ ಹನುಮೇಗೌಡ, ಬಾಗೇಪಲ್ಲಿ ಲಕ್ಷ್ಮೀ­ನಾರಾಯಣರೆಡ್ಡಿ, ಸಿ.ಡಿ.­ಗಂಗು­ಲಪ್ಪ, ಗೌರಿಬಿದನೂರು ಲಕ್ಷ್ಮೀ­ನಾರಾ­ಯಣ್, ಬಿ.ಎಚ್.ನರಸಿಂಹಪ್ಪ, ಬಾಗೇಪಲ್ಲಿ ನಾರಾಯಣಸ್ವಾಮಿ, ಸುಷ್ಮಾ ಶ್ರೀನಿವಾಸ್, ಗೌರಿಬಿದನೂರು ರೇಣುಕಾ, ಬಾಗೇಪಲ್ಲಿ ನಿರ್ಮಲ, ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಮೋಹನ್ ಕುಮಾರ್, ಹುನೇಗಲ್ ಕೇಶವ, ವಿ.ಆನಂದ್, ಅರಸನಹಳ್ಳಿ ವೆಂಕಟರಾಮ್ ಮುಂತಾದವರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.