ಶುಕ್ರವಾರ, ಮೇ 20, 2022
19 °C

ಪರಿಶಿಷ್ಟ ಜಾತಿಗೆ ಮಡಿವಾಳರು: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರುಗೋಡು: ಆಧುನಿಕ ಸಮಾಜದಲ್ಲಿ ಕನಿಷ್ಠ ಜೀವನ ಸಾಗಿಸುತ್ತಿರುವ ಮಡಿವಾಳ ಸಮುದಾಯ ಕಡೆಗಣಿಸಲ್ಪಟ್ಟಿದೆ. ಈ ಜನಾಂಗವನ್ನು ಸರಕಾರ ಪರಿಶಿಷ್ಟ ಜಾತಿಗೆ ಸೇರಿಸಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಚಳವಳಿ ನಡೆಸುವುದು ಅನಿವಾರ್ಯ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್. ಶಂಕ್ರಪ್ಪ ತಿಳಿಸಿದರು.ಪಟ್ಟಣದಲ್ಲಿ ಸೋಮವಾರ ಮಡಿವಾಳ ಮಾಚಿದೇವ ಸಂಘ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದರು.ಚಿತ್ರದುರ್ಗ ಮಹಾಸಂಸ್ಥಾನ ಮಠದ ಬಸವ ಮಾಚಿದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿಕ್ಷಣ ಪಡೆದ ಕೆಲವರು ಜಾಗೃತಿ ವೈಯುಕ್ತಿಕ ಬೆಳೆವಣಿಗೆಗೆ ಸೀಮಿತಗೊಂಡಿದೆ. ಇದರಿಂದ ಸಮುದಾಯ ಬೆಳೆಯಲು ಸಾಧ್ಯವಿಲ್ಲ. ಸಾಮಾಜಿಕ ಜಾಗೃತಿ ಮೂಲಕ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಅಗತ್ಯ ಎಂದು ಹೇಳಿದರು.ಮಡಿವಾಳ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಡಿ. ಗೋಪಾಲ್, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೊರವಾಲೆ ರುದ್ರಪ್ಪ, ಬಳ್ಳಾರಿ ತಾಪಂ. ಸದಸ್ಯೆ ಹನುಮಂತಮ್ಮ ಮತ್ತು ಗಾಳೆಮ್ಮ,  ಗ್ರಾ.ಪಂ. ಅಧ್ಯಕ್ಷೆ ನಿರ್ಮಲ, ಉಪಾಧ್ಯಕ್ಷೆ ಸುವರ್ಣಮ್ಮ, ಎಎಸ್‌ಐ ಈಶ್ವರಪ್ಪ, ಮುಖಂಡ ಎನ್. ಜಯದೇವಗೌಡ, ಕೆ.ಎಸ್. ರಜಬಲಿಸಾಬ್, ಚಾನಾಳ್‌ಆನಂದ್, ಬಂಗಿ ಮಲ್ಲಯ್ಯ, ಜೆ. ಓಂಕಾರಿ,  ಮಡಿವಾಳರ ಸಂಘದ ಅಧ್ಯಕ್ಷ ಎ. ಬಸವರಾಜ, ಗೌರವಾಧ್ಯಕ್ಷ ಎ.ಮಲ್ಲಿಕಾರ್ಜುನ, ಎಂ.ಆರ್. ತಿಮ್ಮಪ್ಪ, ಎ.ಲೋಕಣ್ಣ, ಎ. ಮಂಜುನಾಥ ಉಪಸ್ಥಿತರಿದ್ದರು.ಕೆ. ವಿರೂಪಾಕ್ಷಿ ನಿರೂಪಿಸಿದರು. ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.