ಏನನ್ನಾದರೂ ಸಾಧಿಸಬೇಕೆಂಬ ತುಡಿತ ಎಲ್ಲ ತೊಡರುಗಳ ಮೀರಿ ನಾನಾ ಸಾಧ್ಯತೆಗಳನ್ನು ತೆರೆದಿಡುತ್ತದೆ. ತಾಂಜೇನಿಯಾದ 25ರ ಹರೆಯದ ತರುಣಿ ವಾಕೊಂಟ ಕಪುಂಡ ಈ ಮಾತಿಗೆ ಮಾದರಿಯಾಗಿ ನಿಲ್ಲುತ್ತಾರೆ.

ವಾಕೊಂಟು ಕಪುಂಡ ನಾಲಗೆಯ ಸಹಾಯದಿಂದ ಸರಾಗವಾಗಿ ಮೊಬೈಲ್, ಟ್ಯಾಬ್ಲಾಯ್್ಡ್ಗಳನ್ನು ಟೈಪಿಸುವ ಕಾರಣಕ್ಕೆ ರಾಷ್ಟ್ರೀಯ– ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ.

ಅಸಾಮಾನ್ಯವಾದದನ್ನು ಸಾಧಿಸಿದರೆಂಬ ಕಾರಣಕ್ಕೆ ಹಲವರು ಗಿನ್ನಿಸ್ ಮತ್ತಿತರ ದಾಖಲೆ ಸೇರುತ್ತಾರೆ. ಇನ್ನೂ ಕೆಲವರು ದಾಖಲೆ ಬರೆಯುವ ಉದ್ದೇಶದಿಂದ ಹಠಯೋಗಿಗಳಂತೆ ಅವರವರ ಆಸಕ್ತಿಯ ಕ್ಷೇತ್ರದಲ್ಲಿ ಶ್ರಮಿಸುತ್ತಾರೆ. ಆದರೆ ವಾಕೊಂಟಳ ವಿಷಯ ಬೇರೆಯೇ. ಆದದ್ದು ಇಷ್ಟು – ವಾಕೊಂಟ ಪ್ರೌಢಶಾಲೆಯಲ್ಲಿ ಓದುವ ಸಮಯದಲ್ಲಿ ಅವರಿಗೆ ಆಕಸ್ಮಿಕವಾಗಿ ಅಪಘಾತ ಸಂಭವಿಸುತ್ತದೆ. ಅದೆಂಥ ಭೀಕರ ಅಪಘಾತವೆಂದರೆ ವಾಕೊಂಟ ತನ್ನ ಕೈ–ಕಾಲುಗಳ ಸ್ವಾಧೀನ ಕಳೆದುಕೊಳ್ಳುತ್ತಾರೆ.

ಮನೆಯಲ್ಲಿ ಸದಾ ಒಂದೇ ಕಡೆ ಮಲಗಿರುವುದು, ಟಿವಿ ನೋಡುವುದು, ಎಲ್ಲ ಕೆಲಸಗಳಿಗೂ ಮನೆಯವರ ಸಹಾಯ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.ಭವಿಷ್ಯದಲ್ಲಿ ಸಿನಿಮಾಗಳಿಗೆ ಸಂಭಾಷಣೆ ಬರೆಯುವ ಕನಸು ಕಾಣುತ್ತಿದ್ದ ವಾಕೊಂಟ ಜೀವನದಲ್ಲಿ ಏನು ಸಾಧನೆ ಮಾಡಲು ಆಗುವುದಿಲ್ಲ ಎಂದು ಕುಗ್ಗಿ ಹೋದರು.

ಈ ವೇಳೆ ಮನೆಯವರು, ಸ್ನೇಹಿತರು ಅವರಿಗೆ ಸಮಾಧಾನ ಮಾಡಿದರು. ನಾನಾ ಕಾರಣಗಳಿಗೆ ಅಂಗವೈಕಲ್ಯ ಉಂಟಾಗಿ, ಎಲ್ಲವನ್ನೂ ಮೀರಿ ಸಾಧನೆ ಮಾಡಿದವರ ಬಗ್ಗೆ ತಿಳಿಸಿದರು. ಆಗೆಲ್ಲ ತಾನೂ ಏನಾದರೂ ಸಾಧಿಸಬೇಕೆಂಬ ಹೆಬ್ಬಯಕೆಯಂತೂ ಮನಸ್ಸಿನಾಳದಲ್ಲಿ ಬೇರೂರಿತ್ತು. ಒಂದು ದಿನ ಅವರ ತೊಡೆಯ ಮೇಲೆದ್ದ ಫೋನ್ ರಿಂಗಣಿಸಿತು. ಹತ್ತಿರ ಯಾರೂ ಇರಲಿಲ್ಲ. ಅವರ ಗಲ್ಲದ ಸಹಾಯದಿಂದ ಫೋನ್ ರಿಸೀವ್ ಮಾಡಲು ಯತ್ನಿಸಿದರು. ಆಗಲಿಲ್ಲ. ನಾಲಿಗೆಯ ಸಹಾಯದಿಂದ ಪ್ರಯತ್ನಿಸಿದರು.

ನಂತರ ತೊಡೆಯ ಮೇಲೆ ಎತ್ತರದ ದಿಂಬನ್ನಿರಿಸಿ ಅದರ ಮೇಲೆ ಫೋನ್ ಇಡುವಂತೆ ಮನೆಯವರನ್ನು ಕೇಳಿಕೊಂಡರು. ಪ್ರಾರಂಭದಲ್ಲಿ ಆಯಾಸ ಎನಿಸಿದರೂ, ಅವರ ನಿರಂತರ ಪ್ರಯತ್ನದಿಂದ ಇಂದು ಅನಾಯಾಸವಾಗಿ ನಾಲಿಗೆಯ ಸಹಾಯದಿಂದ ಮೊಬೈಲ್ ಬಳಸುತ್ತಾರೆ. ಹೊಸ ವಿಚಾರಗಳನ್ನು ಅಂತರ್ಜಾಲದ ಮುಖಾಂತರ ತಿಳಿದುಕೊಳ್ಳುತ್ತಾರೆ. ಭವಿಷ್ಯದ ಬರಹಗಾರ್ತಿ ಆಗುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.