ಮಂಗಳವಾರ, ಜೂನ್ 15, 2021
27 °C

ಪರಿಹಾರಕ್ಕೆ ಆಗ್ರಹಿಸಿ ಕಾರ್ಮಿಕರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಗಣಿಗಾರಿಕೆ ಸ್ಥಗಿತ ಗೊಂಡು ಮೂರು ವರ್ಷ ಕಳೆದರೂ ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿ  ಪರಿಹಾರ ನೀಡದ ಎಸ್.ವಿ.ಕೆ.ಗ್ರೂಪ್ ಮಾಲೀಕ  ಶ್ಯಾಮ್‌ಸಿಂಗ್ ಮನೆಯ ಮುಂದೆ ಸಿಐಟಿಯು ಸಂಯೋಜಿತ ಮೈನಿಂಗ್ ವರ್ಕರ್ಸ್ ಯೂನಿಯನ್ ಕಾರ್ಮಿಕರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.ಶನಿವಾರ ಸ್ಥಳೀಯ ಶ್ರಮಿಕ ಭವನದಿಂದ ಬೃಹತ್ ಪ್ರತಿಭಟನೆ ನಡೆಸುತ್ತಾ ಬಸವೇಶ್ವರ ಬಡಾವಣೆಯ ಉದ್ಯಮಿ ಶ್ಯಾಮ್‌ಸಿಂಗ್ ಮನೆಯ ಮುಂದೆ ಧರಣಿ ಆರಂಭಿಸಿದ ಕಾರ್ಮಿಕರು ತಮ್ಮ ಸಮಸ್ಯೆಗಳು ಪರಿಹಾರ ಕಾಣುವವರೆಗೂ ಧರಣಿ ಮುಂದುವರಿಸುವುದಾಗಿ ಹೇಳಿದ್ದಾರೆ.ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಅನೇಕ ಬಾರಿ ಭೇಟಿಗೆ ಪ್ರಯತ್ನ ನಡೆಸಿದರು ಮಾಲೀಕರು ದೊರೆಯ ದಾಗಿದ್ದಾರೆ, ಸಂಸ್ಥೆಯ ಮುಖ್ಯಸ್ಥರು ಸರಿಯಾಗಿ ಸ್ಪಂದಿಸುತ್ತಿಲ್ಲ, ಬಾಕಿ ವೇತನ ನೀಡಬೇಕು, ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಧರಣಿ ಆರಂಭಿಸಿರುವುದಾಗಿ ಹೇಳಿದರು.ಸಂಘಟನೆಯ ಎಂ.ಗೋಪಾಲ, ಆರ್. ಭಾಸ್ಕರ್‌ರೆಡ್ಡಿ, ಅಡಿವೆಪ್ಪ, ಸಣ್ಣ ವೆಂಕಪ್ಪ, ಸೇರಿದಂತೆ ನೂರಾರು ಸಂಖ್ಯೆಯ ಕಾರ್ಮಿಕರು ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.ಬೆಂಬಲ: ಮೈನಿಂಗ್ ವರ್ಕರ್ಸ್ ಯೂನಿಯನ್ ಕಾರ್ಮಿಕರ ಧರಣಿ ಬೆಂಬಲಿಸಿ ಭಾನುವಾರ ಎಸ್.ಎಫ್.ಐ ಕಾರ್ಯಕರ್ತರು ಚೆಕ್‌ಪೋಸ್ಟ್ ಬಳಿ ಮಾನವ ಸರಪಳಿ ನಿರ್ಮಿಸಿ ಹೋರಾಟ ದಲ್ಲಿ ತಾವು ಸಾಥ್ ನೀಡುವುದಾಗಿ ಹೇಳಿದ್ದಾರೆ. ಅಧ್ಯಕ್ಷ ಹುಲಗಪ್ಪ ನೇತೃತ್ವದಲ್ಲಿ ವಿದ್ಯಾರ್ಥಿಗಳು ಧರಣಿ ಕಾರ್ಮಿಕರೊಂದಿಗೆ ಪಾಲ್ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.