ಬುಧವಾರ, ಮೇ 12, 2021
18 °C

ಪಲ್ಸ್ ಪೋಲಿಯೊ: ಶೇ 90 ಮಕ್ಕಳಿಗೆ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಜೀವನಕ್ಕಾಗಿ ಎರಡು ಹನಿ~ ಎಂಬ ಧ್ಯೇಯದೊಂದಿಗೆ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಭಾನುವಾರ ಏರ್ಪಡಿಸಿದ್ದ ಎರಡನೇ ಹಂತದ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಶೇ 96ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಯಿತು.ಜಿಲ್ಲೆಯಾದ್ಯಂತ 5 ವರ್ಷದೊಳಗಿನ 3.14 ಲಕ್ಷ ಮಕ್ಕಳಿಗೆ ಈ ಬಾರಿ ಪೋಲಿಯೊ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಈ ಪೈಕಿ ನಂಜನಗೂಡು-ಶೇ. 95.3, ಕೆ.ಆರ್.ನಗರ-ಶೇ. 94.9, ತಿ.ನರಸೀಪುರ- ಶೇ. 96.5, ಹುಣಸೂರು-ಶೇ. 98.2, ಎಚ್.ಡಿ. ಕೋಟೆ- ಶೇ. 96, ಪಿರಿಯಾಪಟ್ಟಣ- ಶೇ. 97, ಮೈಸೂರು ತಾಲ್ಲೂಕು-ಶೇ.94 ಹಾಗೂ ಮೈಸೂರು ನಗರದಲ್ಲಿ ಶೇ. 81.88 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಯಿತು.ರೈಲು ನಿಲ್ದಾಣ, ನಗರ ಮತ್ತು ಗ್ರಾಮೀಣ ಬಸ್ ನಿಲ್ದಾಣ, ವಿವಿಧ ಬಡಾವಣೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ದೇಗುಲ, ಸಮುದಾಯ ಭವನಗ ಳಲ್ಲಿ ಪೋಲಿಯೋ ಕೇಂದ್ರಗಳನ್ನು ಆರಂಭಿಸಲಾಗಿತ್ತು.ರೋಟರ‌್ಯಾಕ್ಟ್ ಕ್ಲಬ್: ಜೆಎಲ್‌ಬಿ ರಸ್ತೆಯ ಮೈಸೂರು ಉತ್ತರ ರೋಟರ‌್ಯಾಕ್ಟ್ ಕ್ಲಬ್ ವತಿಯಿಂದ ನಗರದ ಆರು ಕೇಂದ್ರಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಯಿತು. ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ಮಂಜುನಾಥ್ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿದರು.ರಾಮಕೃಷ್ಣ ನಗರ ಜಿ ಬ್ಲಾಕ್‌ನ ಗಣಪತಿ ದೇವಸ್ಥಾನ, ನೃಪತುಂಗ ಕನ್ನಡ ವಿದ್ಯಾಶಾಲೆ, ಕೆ ಬ್ಲಾಕ್ ಗಣಪತಿ ದೇವಸ್ಥಾನ, ರಾಮಕೃಷ್ಣ ವಿದ್ಯಾಶಾಲೆ, ರಾಮಕೃಷ್ಣ ನಗರದ ಗಣಪತಿ ದೇವಸ್ಥಾನ, ವಿಜಯ ಪ್ರಥಮದರ್ಜೆ ಕಾಲೇಜು ಹಾಗೂ ಶ್ರೀರಾಂಪುರ 2ನೇ ಹಂತದಲ್ಲಿ ಒಟ್ಟು 2,601 ಮಕ್ಕಳಿಗೆ ಉಚಿತವಾಗಿ ಲಸಿಕೆ ಹಾಕಲಾಯಿತು.ಕ್ಲಬ್‌ನ ಮಾಜಿ ಅಧ್ಯಕ್ಷರಾದ ಜಗದೀಶ್, ಶಿವರಾಜ್, ಅಧ್ಯಕ್ಷ ರಾಮರಾಧ್ಯ, ಸದಸ್ಯರಾದ ಡಿ.ಬಿ.ರಾಜಶೇಖರ್‌ಮೂರ್ತಿ, ಗೋಪಾಲ್, ಪ್ರಭಾಕರ್, ಮಹದೇವಪ್ಪ, ಅಶೋಕ್‌ಕುಮಾರ್, ಎಂ.ಜೆ.ಸ್ವಾಮಿ, ಕೃಷ್ಣಕುಮಾರ್, ಉದಯ್ ಎಸ್. ಕುಮಾರ್, ಪರಶಿವಮೂರ್ತಿ, ಯಶಸ್ವಿನಿ ಸೋಮಶೇಖರ್ ಉಪಸ್ಥಿತರಿದ್ದರು.ರೈಲ್ವೆ ನಿಲ್ದಾಣ: ನೈರುತ್ಯ ರೈಲ್ವೆ ಆಸ್ಪತ್ರೆ ವತಿಯಿಂದ ರೈಲು ನಿಲ್ದಾಣದ ಆವರಣದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಯಿತು.ಒಟ್ಟು ನಾಲ್ಕು ದಿನಗಳ ಕಾಲ ಪೋಲಿಯೋ ಲಸಿಕೆ ಹಾಕಲಾಗುವುದು ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವಿನೋದ್‌ಕುಮಾರ್, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ರಾಕೇಶ್‌ಕುಮಾರ್ ಗುಪ್ತ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.