ಪವರ್ ಪ್ಲೇಗೆ ತಕ್ಕ ಆಟ

7

ಪವರ್ ಪ್ಲೇಗೆ ತಕ್ಕ ಆಟ

Published:
Updated:

ಹೈದರಾಬಾದ್: `ಈ ಸರಣಿಯಲ್ಲಿ ಪಾಲಿಸಲಾಗುವ ಹೊಸ ಪವರ್‌ಪ್ಲೇಯಿಂದಾಗಿ ಆಟದ ತಂತ್ರಗಳಲ್ಲಿ ಬದಲಾವಣೆಗಳಾಗುವುದು ಖಚಿತ. ಅದಕ್ಕೆ ತಕ್ಕಂತೆ ಯೋಜನೆ ರೂಪಿಸುತ್ತೇವೆ. ಎರಡೂ ತಂಡಗಳಿಗೂ ಇದು ಸತ್ವಪರೀಕ್ಷೆ. ನಾವು ಆತ್ಮವಿಶ್ವಾಸದಿಂದ ಇದ್ದೇವೆ~ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಹೇಳಿದರು.

`ಇದು ಒತ್ತಡದ ಸರಣಿಯಲ್ಲ. ಹೊಸ ಹುಡುಗರಿಗೆ ಸುವರ್ಣಾವಕಾಶವಿದು. ವಿಶೇಷವಾಗಿ ಬೌಲರ್‌ಗಳ ಪ್ರದರ್ಶನವನ್ನು ನೋಡಲು ಕಾಯುತ್ತಿದ್ದೇನೆ. ಸಚಿನ್, ವೀರೂ, ಜಹೀರ್ ಅವರ ಅನುಭವಕ್ಕೂ ಮತ್ತು ಅವರಿಗೆ ಸರಿಸಾಟಿಯಾಗಿ ನಿಲ್ಲಲು ಹೊಸಬರಿಗೆ ಖಂಡಿವಾಗಿಯೂ ಆಗುವುದಿಲ್ಲ. ಆದರೆ ಯುವ ಆಟಗಾರರಲ್ಲಿ ಉತ್ತಮ ಪ್ರತಿಭೆಯಿದೆ.  ಅವರ ಛಲ, ಪರಿಶ್ರಮವನ್ನು ನೋಡಿದ್ದೇನೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry