ಬುಧವಾರ, ಮೇ 19, 2021
24 °C

ಪಶ್ಚಿಮಘಟ್ಟ ಸಂರಕ್ಷಣೆ ನಾಳೆ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಶ್ಚಿಮಘಟ್ಟ ಸಂರಕ್ಷಣೆಯಲ್ಲಿ ತೊಡಕಾಗುತ್ತಿರುವ ಕಾನೂನು ಸಂಬಂಧಿ ವಿಷಯಗಳ ಕುರಿತು ಪಶ್ಚಿಮಘಟ್ಟ ಕಾರ್ಯಪಡೆಯು 13ರಂದು ನಗರದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಕಾರ್ಯಾಗಾರ ಆಯೋಜಿಸಿದೆ.ಈ ಕುರಿತು ಬುಧವಾರ ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಪಶ್ಚಿಮಘಟ್ಟ ಕಾರ್ಯಪಡೆ  ಅಧ್ಯಕ್ಷ ಅನಂತಹೆಗಡೆ ಅಶೀಸರ, ಕಾನೂನು ತಜ್ಞರು, ಪಶ್ಚಿಮ ಘಟ್ಟ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳ ಪ್ರತಿನಿಧಿಗಳು, ಅರಣ್ಯ ಇಲಾಖೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.ಹಸಿರು ಹೊದಿಕೆ: ರಾಜ್ಯದ ಕರಾವಳಿ ತೀರದಲ್ಲಿ ಕಡಲ ಕೊರೆತ ತಪ್ಪಿಸಲು ಅರಣ್ಯ ಇಲಾಖೆ  `ಕರಾವಳಿ ಹಸಿರು ಕವಚ~ ಯೋಜನೆ ಅಡಿ  ಗಿಡಗಳನ್ನು ನೆಡುತ್ತಿದೆ. 90 ಕಿ.ಮೀ. ಉದ್ದದಲ್ಲಿ ಗಿಡ ನೆಡುವ ಯೋಜನೆ ಇದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.