ಪಶ್ಚಿಮ ಘಟ್ಟ: ವಿಶ್ವ ಪರಂಪರೆ ಪಟ್ಟಿಗೆ ಆಗ್ರಹ

7

ಪಶ್ಚಿಮ ಘಟ್ಟ: ವಿಶ್ವ ಪರಂಪರೆ ಪಟ್ಟಿಗೆ ಆಗ್ರಹ

Published:
Updated:

ನವದೆಹಲಿ: ರಾಜ್ಯದಲ್ಲಿ ಹಾದು ಹೋಗುವ ಪಶ್ಚಿಮ ಘಟ್ಟದ ಕೆಲವು ಸೂಕ್ಷ್ಮ ಪ್ರದೇಶಗಳನ್ನು `ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿ~ಗೆ ಸೇರ್ಪಡೆ ಮಾಡಲು ಶಿಫಾರಸು ಮಾಡುವಂತೆ `ಪ್ರಜಾಪ್ರಭುತ್ವ ಉಳಿಸಿ ವೇದಿಕೆ~ ಕೇಂದ್ರ ಸರ್ಕಾರವನ್ನು ಆಗ್ರಹಪಡಿಸಿದೆ.ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ~ಹುಲಿ ಸಂರಕ್ಷಣಾ ಯೋಜನೆ~ ಮಾಡಬಾರದು. ಈ ಯೋಜನೆಯಿಂದ ಅರಣ್ಯವನ್ನೇ ಅವಲಂಬಿಸಿರುವ ಬುಡಕಟ್ಟು ಜನ ನೆಲೆ ಕಳೆದುಕೊಳ್ಳುವ ಅಪಾಯವಿದೆ. ಈ ಸಮಸ್ಯೆಯನ್ನು ನಕ್ಸಲೀಯರು ಎತ್ತಿಕೊಳ್ಳುವ ಮೂಲಕ ಸ್ಥಳೀಯರನ್ನು ತೆಕ್ಕೆಗೆ ಎಳೆದುಕೊಳ್ಳುತ್ತಿದ್ದಾರೆ ಎಂದು ವೇದಿಕೆ ಸಂಚಾಲಕರಾದ ಸುಮಾ ನಾಗೇಶ್ ಕೇಂದ್ರ ಪರಿಸರ ಮತ್ತು ಅರಣ್ಯ  ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.ಪಶ್ಚಮ ಘಟ್ಟವನ್ನು ಯುನೆಸ್ಕೊ ಪಟ್ಟಿಗೆ ಸೇರ್ಪಡೆ ಮಾಡಬೇಕೇ ವಿನಾ ಹುಲಿ ಸಂರಕ್ಷಣಾ ಯೋಜನೆ ಮಾಡಬಾರದು ಎಂದು ಅವರು ಆಗ್ರಹಿಸಿದ್ದಾರೆ. ಶಿವಮೊಗ್ಗ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಕಾಫಿ ಬೆಳೆಗಾರರು ಮೂರು ಲಕ್ಷ ಎಕರೆ ಭೂಮಿ ಕಬಳಿಸಿದ್ದು ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry