ಸುರಪುರ: ಎರಡನೇ ಪಂಢರಪುರ ಎಂದು ಖ್ಯಾತಿ ಪಡೆದಿರುವ ಇಲ್ಲಿನ ಪುರಾತನ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಆಷಾಢೋತ್ಸವ ಕಾರ್ಯಕ್ರಮವನ್ನು ಹರೇ ವಿಠಲ ಸೇವಾ ಸಮಿತಿ ಹಮ್ಮಿಕೊಂಡಿದೆ. ಕಾರ್ಯಕ್ರಮಕ್ಕೆ ಗುರುವಾರ ಸಂಸ್ಥಾನಿಕ ರಾಜಾ ಕೃಷ್ಣಪ್ಪನಾಯಕ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.

ಹಿನ್ನೆಲೆ: ಇಲ್ಲಿನ ಗೋಸಲ ಸಂಸ್ಥಾನದ ದಿವಾನರಾಗಿದ್ದ ಜಮದರಖಾನಿ ಮನೆತನದ ವಿಪ್ರ ದಂಪತಿ ಪಂಢರಪುರದ ಪಾಂಡುರಂಗ ಭಕ್ತರಾಗ್ದ್ದಿದು, ಪಾಂಡುರಂಗನ ಅಭಯದಂತೆ ತಮ್ಮ ಮನೆ ಮುಂದೆ ದೇವಸ್ಥಾನ ಕಟ್ಟಿಸಿದರು.

ಅಂದಿನಿಂದ ಪ್ರತಿ ವರ್ಷ ಆಷಾಡೋತ್ಸವ ಕಾರ್ಯಕ್ರಮ ವಿಜೃಂಭಣೆ ನಡೆದು ಬಂತು ಎಂಬುದು ಪ್ರತೀತಿ. ಈ ದೇವಸ್ಥಾನಕ್ಕೆ ಮೂರು ಶತಮಾನಗಳ ಇತಿಹಾಸವಿದೆ.

ಕಾರ್ಯಕ್ರಮ: ಜುಲೈ 19 ರಂದು ಪ್ರಮುಖ ಕಾರ್ಯಕ್ರಮ ಏಕಾದಶಿ ಆಚರಣೆ. ರುಕ್ಮಿಣಿ ಪಾಂಡುರಂಗ ದೇವರಿಗೆ ವಿಶೇಷ ಪೂಜೆ. ವೇಣುಗೋಪಾಲ ಮಹಿಳಾ ಭಜನಾ ಮಂಡಳಿಯಿಂದ ಗ್ರಾಮ ಪ್ರದಕ್ಷಿಣೆ. ಸಂಜೆ ಖ್ಯಾತ ಗಾಯಕ ಅನಂತ ಕುಲಕರ್ಣಿ ಅವರಿಂದ ದಾಸವಾಣಿ. ಅಹೋರಾತ್ರಿ ಹರೇ ವಿಠಲ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ.

ಜುಲೈ 20 ರಂದು ದ್ವಾದಶಿ ಬೆಳಿಗ್ಗೆ 6 ಗಂಟೆಗೆ ದೇವರ ಪೂಜೆ, ನೈವೇದ್ಯ, ತೀರ್ಥ ಪ್ರಸಾದ. ಜುಲೈ 21 ರಂದು ಬೆಳಿಗ್ಗೆ ಪಲ್ಲಕ್ಕಿ ಸೇವೆ, ಗೋಪಾಳ ಕಾವಲಿ, ಅವಭೃತ ಸ್ನಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.