ದೀಪಾವಳಿ ಕೇವಲ ಬೆಳಕು ಕೊಡುವ ಹಬ್ಬ ಮಾತ್ರವಲ್ಲ, ಇದು ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲಿ ಅಡಗಿರುವ ಕತ್ತಲೆಯನ್ನು ಹೋಗಲಾಡಿಸಿ ಆ ವ್ಯಕ್ತಿಯ ಉಲ್ಲಾಸ, ಆನಂದ ಇವುಗಳಿಗೆ ಪ್ರೋತ್ಸಾಹ ಕೊಡುತ್ತದೆ. ದೀಪಾವಳಿ ಹಿಂದುಗಳ ಹಬ್ಬ.

ಆದರೆ ಇಲ್ಲಿ ಹಿಂದು ಮತ್ತು ಮುಸ್ಲಿಂ ಎಂಬ ಭೇದ ಭಾವನೆಗೆ ಅವಕಾಶವಿಲ್ಲ. ಪೂಜೆ ಒಂದು ಬಿಟ್ಟರೆ ಈ ದೀಪಾವಳಿಯ ಆನಂದದಲ್ಲಿ ಹಿಂದು ಮುಸ್ಲಿಂ ಎಲ್ಲರೂ ಭಾಗಿ ಗಳಾಗಿರುತ್ತಾರೆ. ಇತ್ತೀಚಿಗೆ ಪಾಕಿಸ್ತಾನ ಅಧ್ಯಕ್ಷ ರಾದ ಆಸಿ್ ಅಲಿ ಜರ್ದಾರಿ ಅವರು ದೀಪಾ ವಳಿಗೆ ಕೊಟ್ಟಂತಹ ಮಹತ್ವ ಗಮನಾರ್ಹ.

ಬಿಹಾರ್ ಮುಖ್ಯ ಮಂತ್ರಿಗಳಾದ ನಿತೀಶ್ ಕುಮಾರ್ ಪಾಕಿಸ್ತಾನಕ್ಕೆ ಹೋದರು. ಅಲ್ಲಿ ಅವರಿಗೆ ಅದ್ಭುತವಾದ ಸ್ವಾಗತ ಕಂಡು ಬಂದಿತು. ಅಧ್ಯಕ್ಷರಾದ ಜರ್ದಾರಿಯವರು ಸಾಮಾನ್ಯವಾಗಿ ಗಣ್ಯ ವ್ಯಕ್ತಿಗಳು ಬಂದಾಗ ಭೋಜನ ಕೂಟ ಏರ್ಪಾಟು ಮಾಡುವುದು ಸಾಮಾನ್ಯ.

ಆದರೆ ಈ ಸಲ ಇದು ಕೇವಲ ಅಧ್ಯಕ್ಷರ ಔತಣ ಕೂಟ ಮಾತ್ರ ವಲ್ಲ, ದೀಪಾವಳಿಯ ಔತಣ ಕೂಟವೆಂದು ಸಾರಿದರು. ಇದರಿಂದ ಉಂಟಾಗುವ ಪರಿಣಾಮ ಬಹಳ ಮಹತ್ತರವಾದದ್ದು. ಎರಡು ದೇಶಗಳ ಸಂಬಂಧ ಬಹಳ ಹಿತಕರವಾಗುವುದು.

ಜರ್ದಾರಿ ಯವರ ವರ್ತನೆಯಿಂದ ಭಾರತ ಪಾಕಿಸ್ತಾನ ನಡುವೆ ಇರುವ ರಾಜಕೀಯ ಸಂಬಂಧದ ಮೇಲೆಯೂ ಮತ್ತು ಸಾಮಾಜಿಕ ಸಂಬಂಧಗಳ ಮೇಲೆಯೂ ಹಿತಕರವಾದ ಪರಿಣಾಮ ಉಂಟಾಗುವುದರಲ್ಲಿ ಸಂದೇಹವೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.