ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಕಮ್ರಾ ವಾಯುನೆಲೆಯ ಮೇಲೆ ಗುರುವಾರ ಬೆಳಗಿನ ಜಾವ ನಡೆದ ಆತ್ಮಹತ್ಯಾ ದಾಳಿಯಲ್ಲಿ 9 ಉಗ್ರರು ಹಾಗೂ ಭದ್ರತಾ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.

ಪಾಕಿಸ್ತಾನದ ಅಣ್ವಸ್ತ್ರಗಳು ಉಗ್ರರ ಕೈಸೇರುವ ಅಪಾಯ ಇದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಿಯೋನ್ ಪಾನೆಟ್ಟ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಅಣ್ವಸ್ತ್ರ ಸಂಗ್ರಹ ಇದೆ ಎಂಬ ಕಾರಣಕ್ಕೆ ಉಗ್ರರು ದಾಳಿಗೆ ಕಮ್ರಾ ವಾಯುನೆಲೆಯನ್ನು ಆಯ್ಕೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ದಾಳಿ ವೇಳೆ ಕನಿಷ್ಠ ನೂರಕ್ಕೂ ಹೆಚ್ಚು ಅಣ್ವಸ್ತ್ರ ಸಿಡಿತಲೆಗಳು ಇಲ್ಲಿದ್ದವು ಎನ್ನಲಾಗಿದೆ.

ಸೇನಾ ಉಡುಪಿನಲ್ಲಿದ್ದ ಉಗ್ರರು: ಇಸ್ಲಾಮಾಬಾದ್ನಿಂದ 40 ಕಿ.ಮೀ ದೂರದಲ್ಲಿರುವ ಪಂಜಾಬ್ ಪ್ರಾಂತ್ಯದ ಕಮ್ರಾ ವಾಯುನೆಲೆ ಪಾಕಿಸ್ತಾನದ ಪ್ರಮುಖ ಹಾಗೂ ದೊಡ್ಡ ವಾಯುನೆಲೆಗಳಲ್ಲಿ ಒಂದು. ಸೇನಾ ಸಮವಸ್ತ್ರದಲ್ಲಿದ್ದ ಉಗ್ರರು ಮೂರು ಸುತ್ತಿನ ಭಾರಿ ಭದ್ರತೆಯನ್ನು ಭೇದಿಸಿ ಒಳನುಗ್ಗಿ, ಅಮೆರಿಕ ನಿರ್ಮಿತ ಎಫ್-16 ಮತ್ತು ಚೀನಾ ನಿರ್ಮಿತ ಜೆಎಫ್-17 ಯುದ್ಧ ವಿಮಾನಗಳನ್ನು ಗುರಿಯಾಗಿಟ್ಟುಕೊಂಡು ಗ್ರೆನೇಡ್ ದಾಳಿ ನಡೆಸಿದ್ದಾರೆ. ಸದ್ಯದ ಮಾಹಿತಿಗಳ ಪ್ರಕಾರ ದಾಳಿಯಲ್ಲಿ ಒಂದು ಯುದ್ಧವಿಮಾನ ಧ್ವಂಸಗೊಂಡಿದ್ದು, ಇನ್ನೂ ಅನೇಕ ಯುದ್ಧವಿಮಾನಗಳಿಗೆ ಹಾನಿಯಾಗಿರುವ ಶಂಕೆ ಇದೆ.

ಭಾರಿ ಪ್ರಮಾಣದ ಶಕ್ತಿಶಾಲಿ ಸ್ಫೋಟಕ ಮತ್ತು ಕ್ಷಿಪಣಿ ವಾಹಕಗಳನ್ನು ಹೊಂದಿದ್ದ ಉಗ್ರರನ್ನು ಹಿಮ್ಮೆಟ್ಟಿಸಲು ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದರು. ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹಿರಿಯ ಸೇನಾಧಿಕಾರಿ ಮೊಹಮ್ಮದ್ ಅಜಾಮ್ ಗುಂಡೇಟಿನಿಂದ ಗಾಯಗೊಂಡಿದ್ದಾರೆ.

`ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ವಾಯುನೆಲೆಯಲ್ಲಿ ಅಡಗಿರಬಹುದಾದ ಉಗ್ರರಿಗಾಗಿ ಶೋಧ ಮುಂದುವರಿದಿದೆ~ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಕಮ್ರಾ ವಾಯುನೆಲೆಯಲ್ಲಿ ಅಮೆರಿಕ ನಿರ್ಮಿತ ಎಫ್-16 ಮತ್ತು ಚೀನಾ ನಿರ್ಮಿತ ಜೆಎಫ್-17 ಯುದ್ಧವಿಮಾನಗಳಿದ್ದವು. ಆದರೆ ಅವುಗಳ ನಿಖರವಾದ ಸಂಖ್ಯೆ ಮತ್ತು ಹಾನಿಗೊಳಗಾದ ವಿಮಾನಗಳ ಸಂಖ್ಯೆಯ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ.

ದಾಳಿ ಹೊಣೆ:  ನಿಷೇಧಿತ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ ಘಟಕ ದಾಳಿಯ ಹೊಣೆ ಹೊತ್ತಿದ್ದು, ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಮತ್ತು ತಾಲಿಬಾನ್ ಕಮಾಂಡರ್ ಬೈತುಲ್ಲಾ ಮೆಹಸೂದ್ ಹತ್ಯೆಗೆ ಪ್ರತೀಕಾರ ತೀರಿಸಿಕೊಂಡಿದ್ದಾಗಿ ಹೇಳಿಕೊಂಡಿದೆ. ಇಂಥ ಇನ್ನೂ ಅನೇಕ ದಾಳಿಗಳನ್ನು ನಡೆಸುವುದಾಗಿ ತಾಲಿಬಾನ್ ವಕ್ತಾರ ಇಸಾನುಲ್ಲಾ ಇಸಾನ್ ದೂರವಾಣಿ ಮೂಲಕ ಮಾಧ್ಯಮಗಳಿಗೆ ತಿಳಿಸಿದ್ದಾನೆ.

ಇದು ಮೂರನೇ ದಾಳಿ: ಕಮ್ರಾ ವಾಯುನೆಲೆಯ ಮೇಲೆ ಗುರುವಾರ ನಡೆದಿರುವುದು ಮೂರನೇ ದಾಳಿ. ಈ ಹಿಂದೆ 2007ರಲ್ಲಿ ವಾಯುನೆಲೆಯ ದ್ವಾರದಲ್ಲಿದ್ದ ಬಸ್ ಮೇಲೆ ಆತ್ಮಹತ್ಯಾ ದಾಳಿ ನಡೆದಿತ್ತು. 2008ರಲ್ಲಿ ಕ್ಷಿಪಣಿ ದಾಳಿ ನಡೆಸಲಾಗಿತ್ತು.

ಕಳೆದ ವರ್ಷ (2011) ಮೇ ತಿಂಗಳಲ್ಲಿ ಕರಾಚಿ ನೌಕಾನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ್ದರು. 2009ರಲ್ಲಿ ರಾವಲ್ಪಿಂಡಿಯಲ್ಲಿರುವ ಸೇನಾ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆದಿತ್ತು.

ಒಳಗಿನವರ ಕೈವಾಡ?: ಪಿಂಡ್ ಸುಲೇಮಾನ್ ಮಖಾನ್ ಗ್ರಾಮದಿಂದ ಉಗ್ರರು ಒಳನುಸುಳಿರಬಹುದು ಎಂದು ಶಂಕಿಸಲಾಗಿದ್ದು, ವಾಯುನೆಲೆ ಅಧಿಕಾರಿಗಳ ನೆರವು ದೊರೆತಿರುವ ಸಾಧ್ಯತೆಗಳಿವೆ ಎಂದು ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಜಿಯೊ ಸುದ್ದಿವಾಹಿನಿ ವರದಿ ಮಾಡಿದೆ.

ವಾರದ ಮೊದಲೇ ಸುಳಿವು!: ಭಯೋತ್ಪಾದನೆ ವಿರುದ್ಧ ಪಾಕಿಸ್ತಾನದ ಹೋರಾಟ ಮುಂದುವರೆಯಲಿದೆ ಎಂಬ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇಜ್ ಕಯಾನಿ ಅವರ ಹೇಳಿಕೆ ಹೊರಬಿದ್ದ ಎರಡೇ ದಿನಗಳಲ್ಲಿ ದಾಳಿ ನಡೆದಿದೆ.

`ಈದ್-ಉಲ್-ಫಿತ್ರ್ ಹಬ್ಬದ ಮೊದಲೇ ಪಂಜಾಬ್ ಪ್ರಾಂತ್ಯದಲ್ಲಿರುವ ಪಾಕಿಸ್ತಾನದ ವಾಯುನೆಲೆ ಮೇಲೆ `ತೆಹ್ರಿಕ್ -ಎ- ತಾಲಿಬಾನ್~ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ~ ಎಂದು ಗುಪ್ತಚರ ವರದಿಯನ್ನು ಆಧರಿಸಿ `ಎಕ್ಸ್ಪ್ರೆಸ್ ಟ್ರಿಬ್ಯೂನ್~ ಪತ್ರಿಕೆ ಇದೇ 10ರಂದು ವರದಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.