ವೆಲ್ಲಿಂಗ್ಟನ್ (ಎಎಫ್ಪಿ): ಆರಂಭಿಕ ಬ್ಯಾಟ್ಸ್ಮನ್ ಮೊಹಮ್ಮದ್ ಹಫೀಜ್ (61; 47ಎ, 8ಬೌಂ, 2ಸಿ) ಮತ್ತು ನಾಯಕ ಶಾಹಿದ್ ಅಫ್ರಿದಿ ಅವರ ಜವಾಬ್ದಾರಿಯುತ ಆಟದ ಬಲದಿಂದ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ಧ ದ ಮೊದಲ ಟ್ವೆಂಟಿ–20 ಪಂದ್ಯದಲ್ಲಿ 16 ರನ್ಗಳ ಗೆಲುವು ಪಡೆದಿದೆ.

ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–0ರ ಮುನ್ನಡೆ ಗಳಿಸಿದೆ. ಈಡನ್ ಪಾರ್ಕ್ ಮೈದಾನದಲ್ಲಿ ಶುಕ್ರವಾರ ಟಾಸ್ ಗೆದ್ದ ಕಿವೀಸ್ ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಲು ಸಿಕ್ಕ ಅವ ಕಾಶವನ್ನು ಪಾಕ್ ಚೆನ್ನಾಗಿಯೇ ಬಳಸಿ ಕೊಂಡಿತು. ಪ್ರವಾಸಿ ತಂಡ 20 ಓವರ್ ಗಳಲ್ಲಿ 8 ವಿಕೆಟ್ಗೆ 171 ರನ್ ಕಲೆಹಾಕಿತು.

ಸವಾಲಿನ ಗುರಿ ಬೆನ್ನಟ್ಟಿದ ನ್ಯೂಜಿ ಲೆಂಡ್ ನಿಗದಿತ ಓವರ್ಗಳಲ್ಲಿ 155ರನ್ಗಳಿಗೆ ಆಲೌಟ್ ಆಯಿತು. ಉತ್ತಮ ಆರಂಭ: ಹಫೀಜ್ ಮತ್ತು ಅಹ್ಮದ್ ಶೆಹಜಾದ್ (16) ಮೊದಲ ವಿಕೆಟ್ಗೆ 33ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಐದನೇ ಓವರ್ ಬೌಲ್ ಮಾಡಿದ ಆ್ಯಡಮ್ ಮಿಲ್ನೆ ನಾಲ್ಕನೇ ಎಸೆತದಲ್ಲಿ ಶೆಹಜಾದ್ಗೆ ಪೆವಿಲಿಯನ್ ಹಾದಿ ತೋರಿಸಿದರು.

ಶೊಯಬ್ ಮಕ್ಸೂದ್ (0) ಕ್ರೀಸ್ಗೆ ಬಂದಷ್ಟೇ ವೇಗವಾಗಿ ಔಟಾದರು. ಶೋಯಬ್ ಮಲಿಕ್ (20;18ಎ, 1ಬೌಂ, 1ಸಿ) ಮತ್ತು ಉಮರ್ ಅಕ್ಮಲ್ (24; 14ಎ, 1ಬೌಂ, 1ಸಿ) ಜತೆಗೆ ಉತ್ತಮ ಇನಿಂಗ್ಸ್ ಕಟ್ಟಿದ ಹಫೀಜ್ ತಂಡದ ಮೊತ್ತ ಮೂರಂಕಿ ದಾಟುವಂತೆ ಮಾಡಿದರು.
ಕೊನೆಯಲ್ಲಿ ನಾಯಕ ಅಫ್ರಿದಿ (23; 8ಎ, 2ಬೌಂ, 2ಸಿ) ಮತ್ತು ಇಮಾದ್ ವಾಸಿಂ (18; 9ಎ, 1ಬೌಂ, 1ಸಿ) ಚುರುಕಿನ ಬ್ಯಾಟಿಂಗ್ ನಡೆಸಿ ತಉತ್ತಮ ಮೊತ್ತಕ್ಕೆ ಕಾರಣರಾದರು.

ಗುರಿ ಬೆನ್ನಟ್ಟಿದ ಕಿವೀಸ್ ಮಾರ್ಟಿನ್ ಗುಪ್ಟಿಲ್ (2) ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ಆದರೆ ನಾಯಕ ಕೇನ್ ವಿಲಿಯಮ್ಸನ್ (70; 60ಎ, 6ಬೌಂ, 1ಸಿ) ಮತ್ತು ಕಾಲಿನ್ ಮನ್ರೊ (56; 27ಎ, 2ಬೌಂ, 6 ಸಿಕ್ಸರ್) ಎರಡನೇ ವಿಕೆಟ್ಗೆ 80ರನ್ ಪೇರಿಸಿದರು. ಆದರೆ ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳು ವೈಫಲ್ಯ ಕಂಡಿದ್ದರಿಂದ ಆತಿಥೇಯ ತಂಡಕ್ಕೆ ಗೆಲುವು ಮರೀಚಿಕೆಯಾಯಿತು.

ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: 20 ಓವರ್ಗಳಲ್ಲಿ 8 ವಿಕೆಟ್ಗೆ 171 (ಮೊಹಮ್ಮದ್ ಹಫೀಜ್ 61, ಶೊಯಬ್ ಮಲಿಕ್ 20, ಉಮರ್ ಅಕ್ಮಲ್ 24, ಶಾಹಿದ್ ಅಫ್ರಿದಿ 23; ಆ್ಯಡಮ್ ಮಿಲ್ನೆ 37ಕ್ಕೆ4, ಮಿಷೆಲ್ ಸ್ಯಾಂಟ್ನರ್ 14ಕ್ಕೆ2).

ನ್ಯೂಜಿಲೆಂಡ್: 20 ಓವರ್ಗಳಲ್ಲಿ 155 (ಕೇನ್ ವಿಲಿಯಮ್ಸನ್ 70, ಕಾಲಿನ್ ಮನ್ರೊ 56, ಮ್ಯಾಟ್ ಹೆನ್ರಿ 10; ವಹಾಬ್ ರಿಯಾಜ್ 34ಕ್ಕೆ3, ಶಾಹಿದ್ ಅಫ್ರಿದಿ 26ಕ್ಕೆ2, ಉಮರ್ ಗುಲ್ 38ಕ್ಕೆ2). ಫಲಿತಾಂಶ: ಪಾಕಿಸ್ತಾನಕ್ಕೆ 16ರನ್ ಗೆಲುವು. ಪಂದ್ಯ ಶ್ರೇಷ್ಠ: ಶಾಹಿದ್ ಅಫ್ರಿದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.