ಲಾಹೋರ್ (ಪಿಟಿಐ): ಭದ್ರತೆಯ ಕಾರಣದಿಂದ ಯಾವುದೇ ಕ್ರೀಡಾ ತಂಡವು ಪಾಕಿಸ್ತಾನಕ್ಕೆ ಹೋಗಲು ಬಯಸುತ್ತಿಲ್ಲ. ಆದರೆ ಭಾರತ ಹಾಕಿ ತಂಡವು ತನ್ನ ನೆಲದಲ್ಲಿ ನಡೆಯಲಿರುವ ಮೂರು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ ಎಂದು ಪಾಕ್ ಹಾಕಿ ಫೆಡರೇಷನ್ (ಪಿಎಚ್ಎಫ್) ಹೇಳಿಕೊಂಡಿದೆ.

ಮುಂದಿನ ತಿಂಗಳು ನಡೆಯಲಿರುವ ಟೂರ್ನಿಯಲ್ಲಿ ಆತಿಥೇಯ ಪಾಕಿಸ್ತಾನ, ಭಾರತ ಹಾಗೂ ಮಲೇಷ್ಯಾ ತಂಡಗಳು ಆಡಲಿವೆ ಎಂದು ಪಿಎಚ್ಎಫ್ ಕಾರ್ಯದರ್ಶಿ ಆಸಿಫ್ ಬಜ್ವಾ ಅವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

`ಭಾರತ ಹಾಗೂ ಮಲೇಷ್ಯಾ ತಂಡಗಳು ಈಗಾಗಲೇ ಪ್ರವೇಶವನ್ನು ಖಚಿತಪಡಿಸಿವೆ. ಸಾಧ್ಯವಾದರೆ ಇದನ್ನು ನಾಲ್ಕು ಇಲ್ಲವೆ ಐದು ರಾಷ್ಟ್ರಗಳ ಟೂರ್ನಿ ಮಾಡುವುದು ಉದ್ದೇಶ. ಆ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ ಮತ್ತು ಅರ್ಜೆಂಟೀನಾಕ್ಕೆ ಹಾಕಿ ಫೆಡರೇಷನ್ಗೆ ಕೂಡ ಕೋರಿಕೆ ಕಳುಹಿಸಲಾಗಿತ್ತು. ಆದರೆ ಅಲ್ಲಿಂದ ಸಕಾರಾತ್ಮಕ ಉತ್ತರ ಸಿಕ್ಕಿಲ್ಲ~ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.