ಬುಧವಾರ, ಜೂನ್ 16, 2021
27 °C

ಪಾಕ್‌ನಲ್ಲಿ ಪೇಚಿಗೆ ಸಿಲುಕಿದ ಕಿರ್ಮಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಚಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಅವರಿಗೆ ಪಾಕಿಸ್ತಾನದ ಕರಾಚಿಯಲ್ಲಿ ಕಹಿ ಘಟನೆ ಎದುರಾಗಿದೆ. ನ್ಯಾಷನಲ್ ಕ್ರೀಡಾಂಗಣದ ಒಳಗೆ ಪ್ರವೇಶಿಸಲು ಕಿರ್ಮಾನಿಗೆ ಭದ್ರತಾ ಸಿಬ್ಬಂದಿ ಅವಕಾಶ ನೀಡಿಲ್ಲ!ಖಾಸಗಿ ಭೇಟಿಗಾಗಿ ಪಾಕ್‌ನಲ್ಲಿರುವ ಕಿರ್ಮಾನಿ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಉದ್ದೇಶದಿಂದ ಕ್ರೀಡಾಂಗಣದೊಳಗೆ ಪ್ರವೇಶಿಸಲು ಮುಂದಾಗಿದ್ದರು. ಆದರೆ ಭಾರತದ ಮಾಜಿ ಆಟಗಾರನನ್ನು ಗುರುತಿಸುವಲ್ಲಿ ವಿಫಲನಾದ ಭದ್ರತಾ ಸಿಬ್ಬಂದಿ ಅವರಿಗೆ ಒಳ ಪ್ರವೇಶಿಸಲು ಅವಕಾಶ ನೀಡಲಿಲ್ಲ.ಈ ವೇಳೆ ಅಲ್ಲಿದ್ದ ಪತ್ರಕರ್ತರೊಬ್ಬರು ಕಿರ್ಮಾನಿಯನ್ನು ಗುರುತಿಸಿದ್ದಾರೆ. ಮಾತ್ರವಲ್ಲ ಪಾಕ್ ತಂಡದ ಮಾಜಿ ಆಟಗಾರ ರಶೀದ್ ಖಾನ್‌ಗೆ ನಡೆದ ವಿಷಯ ತಿಳಿಸಿದರು. ಕ್ರೀಡಾಂಗಣದೊಳಗಿದ್ದ ರಶೀದ್ ಹೊರಬಂದು ಕಿರ್ಮಾನಿ ಅವರನ್ನು ಬರಮಾಡಿಕೊಂಡರು.ಕಿರ್ಮಾನಿ 1976 ರಲ್ಲಿ ಈ ಕ್ರೀಡಾಂಗಣದಲ್ಲಿ ಪಂದ್ಯವನ್ನು ಆಡಿದ್ದರು. `ಭದ್ರತಾ ಸಿಬ್ಬಂದಿಗೆ ನಾನು ಯಾರೆಂಬುದು ತಿಳಿಯಲಿಲ್ಲ. ತನ್ನ ಕೆಲಸವನ್ನು ಆತ ನಿರ್ವಹಿಸಿದ್ದಾನೆ~ ಎಂದು ಕಿರ್ಮಾನಿ ಪ್ರತಿಕ್ರಿಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.