ಭಾನುವಾರ, ಏಪ್ರಿಲ್ 18, 2021
25 °C

ಪಾಕ್: ಗವರ್ನರ್ ಹತ್ಯೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಉಗ್ರರು ನಡೆಸಿದ ಹತ್ಯೆ ಯತ್ನದಿಂದ ಪಾಕಿಸ್ತಾನದ ಖೈಬರ್-ಪಖ್ತುಂಖ್ವಾ ಪ್ರಾಂತ್ಯದ ಗವರ್ನರ್ ಮಸೂದ್ ಕೌಸರ್ ಸ್ವಲ್ಪದರಲ್ಲೇ ಪಾರಾದ ಘಟನೆ ಮಂಗಳವಾರ ನಡೆದಿದೆ.

ಈ ಪ್ರಾಂತ್ಯದ ಕಲಾಯಾ ಎಂಬ ಪ್ರದೇಶದಲ್ಲಿ ಮಂಗಳವಾರ ಜಾಥಾ ಏರ್ಪಡಿಸಲಾಗಿತ್ತು. ಗವರ್ನರ್ ಕೌಸರ್ ಜಾಥಾವನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಅವರು ಆ ಸ್ಥಳಕ್ಕೆ ತಲುಪುವ ಮೊದಲು ಉಗ್ರರು ರಾಕೆಟ್ ದಾಳಿ ನಡೆಸಿದರು.  ಕನಿಷ್ಠ ಒಬ್ಬ ವ್ಯಕ್ತಿ ಮೃತಪಟ್ಟು ಏಳು ಜನರು ಗಾಯಗೊಂಡಿದ್ದಾರೆ.

ಸಮೀಪದಲ್ಲೇ ಇರುವ ಬೆಟ್ಟ ಪ್ರದೇಶಗಳಿಂದ ಮೂರು ರಾಕೆಟ್‌ಗಳನ್ನು ಉಗ್ರರು ಜಾಥಾ ನಡೆಯುತ್ತಿದ್ದ ಸ್ಥಳಕ್ಕೆ ಎಸೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾಳಿಯಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇತರ ಏಳು ಮಂದಿ  ಗಾಯಗೊಂಡಿದ್ದಾರೆ ಎಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.