ಬುಧವಾರ, ಏಪ್ರಿಲ್ 21, 2021
33 °C

ಪಾಕ್ ನೆರವಿಗೆ ಅಜರ್ ಅಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಲ್ಲೆಕೆಲೆ (ಪಿಟಿಐ): ಅಜರ್ ಅಲಿ (136) ಅವರ ಶತಕದ ಹೊರತಾಗಿಯೂ ಪಾಕಿಸ್ತಾನ ತಂಡದವರು ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಬುಧವಾರ ನಾಲ್ಕನೇ ದಿನದಾಟದ ಅಂತ್ಯಕ್ಕೆ ಪಾಕ್ ತನ್ನ ಎರಡನೇ ಇನಿಂಗ್ಸ್‌ನಲ್ಲಿ 104 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 299 ರನ್ ಗಳಿಸಿದೆ. ಈ ಮೂಲಕ 188 ರನ್‌ಗಳ ಮುನ್ನಡೆ ಹೊಂದಿದೆ.ಇನಿಂಗ್ ಹಿನ್ನಡೆ ಅನುಭವಿಸಿದ್ದ ಈ ತಂಡಕ್ಕೆ ಆಸರೆಯಾಗಿ ನಿಂತಿದ್ದು ಅಜರ್. 284 ಎಸೆತಗಳನ್ನು ಎದುರಿಸಿದ ಅವರು 13 ಬೌಂಡರಿ ಗಳಿಸಿದರು. ಅವರಿಗೆ ಮೊಹಮ್ಮದ್ ಹಫೀಜ್ (52) ಹಾಗೂ ಅಸಾದ್ ಶಫಿಕ್ (ಬ್ಯಾಟಿಂಗ್ 55) ಉತ್ತಮ ಬೆಂಬಲ ನೀಡಿದರು. ಆದರೆ ರಂಗನಾ ಹೆರಾತ್ (64ಕ್ಕೆ4) ಹಾಗೂ ದಿಲ್ಹಾರಾ ಫರ್ನಾಂಡೊ (65ಕ್ಕೆ3) ಅವರ ಪ್ರಭಾವಿ ಬೌಲಿಂಗ್ ದಾಳಿಯ ಪರಿಣಾಮ ಪ್ರವಾಸಿ ತಂಡದವರು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: ಮೊದಲ ಇನಿಂಗ್ಸ್ 72.5 ಓವರ್‌ಗಳಲ್ಲಿ 226 ಹಾಗೂ 104 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 299 (ಮೊಹಮ್ಮದ್ ಹಫೀಜ್ 52, ಅಜರ್ ಅಲಿ 136, ಯೂನಿಸ್ ಖಾನ್ 19, ಅಸಾದ್ ಶಫಿಕ್ ಬ್ಯಾಟಿಂಗ್ 55; ನುವಾನ್ ಕುಲಶೇಖರ 50ಕ್ಕೆ1, ರಂಗನಾ ಹೆರಾತ್ 64ಕ್ಕೆ4, ದಿಲ್ಹಾರಾ ಫರ್ನಾಂಡೊ 65ಕ್ಕೆ3); ಶ್ರೀಲಂಕಾ: ಮೊದಲ ಇನಿಂಗ್ಸ್ 100.2 ಓವರ್‌ಗಳಲ್ಲಿ 337.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.