ಭಾನುವಾರ, ಜನವರಿ 19, 2020
24 °C

ಪಾಯಲ್ ರೋಹಟ್ಗಿ ಕುಣಿದಾಗ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ ಬಿರಿಯಾನಿ ಇಷ್ಟಪಡುತ್ತಿದ್ದ ಪಾಯಲ್ ರೋಹಟ್ಗಿ `ಯೇ ಕ್ಯಾ ಹೋ ರಹಾ ಹೈ~ ಎಂಬ ಚಿತ್ರದ ಮೂಲಕ ನಟನೆಗೆ ಬಣ್ಣಹಚ್ಚಿದ್ದು ನೆನಪಾಗಲು ಕಾರಣವಿತ್ತು. ಅವರು ಹೊಸವರ್ಷ ಬರಮಾಡಿಕೊಳ್ಳಲು ಬೆಂಗಳೂರಿನ ಕಂಟ್ರಿ ಕ್ಲಬ್‌ನಲ್ಲಿ ನರ್ತಿಸುತ್ತಿದ್ದರು.ಪಾಯಲ್ ಸಿನಿಮಾಗಳಲ್ಲಿ ಬಣ್ಣಹಚ್ಚಿ ಮೂರು ವರ್ಷಗಳಾಗಿವೆ. `ಬಿಗ್ ಬಾಸ್~, `ಖತ್‌ರೋಂ ಕೆ ಖಿಲಾಡಿ~, `ಸಿಐಡಿ~ ಮೊದಲಾದ ಕಾರ್ಯಕ್ರಮಗಳ ಮೂಲಕ ಕಿರುತೆರೆಯಲ್ಲೂ ಒಂದು ಕೈ ನೋಡಿದ ಅವರೀಗ ವೇದಿಕೆ ಮೇಲೆ ಕುಣಿಯುವ ನಿರ್ಧಾರ ತೆಗೆದುಕೊಳ್ಳಲು ಕಾರಣ ಅವರ ವಯಸ್ಸಾ? ಅದನ್ನು ನೇರವಾಗಿ ಹೇಳಿಕೊಳ್ಳಲು ಅವರು ಸಿದ್ಧರಿಲ್ಲ.ಪಾಯಲ್ ರೋಹಟ್ಗಿ ನಟಿಯಾಗಿ ಹೆಸರು ಮಾಡಿದವರೇನಲ್ಲ. `36 ಚೈನಾ ಟೌನ್~, `ಕಾರ್ಪೊರೇಟ್~, `ಹೇ ಬೇಬಿ~, `ಢೋಲ್~, `ದಿಲ್ ಕಬಡ್ಡಿ~ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಿದೆ. `ಕಾರ್ಪೊರೇಟ್~ ಚಿತ್ರದ ಐಟಂ ಹಾಡಿನ ಮೂಲಕ ಗುರುತಾದ ಅವರು ಆಮೇಲೆ ಕಿರುತೆರೆಗೆ ಹೊರಳಲು ಕಾರಣ ವಯಸ್ಸು. ಯುವಕರ ಮಧ್ಯೆ ರೋಹಟ್ಗಿ ಹೆಜ್ಜೆಹಾಕುವಾಗ ಅವರ ಮುಖಭಾವದಲ್ಲಿ ದಣಿವು ಕಾಣುತ್ತಿತ್ತು. ಅದಕ್ಕೂ ಅವರ ವಯಸ್ಸೇ ಕಾರಣ.ಅವರ ನೃತ್ಯ ಕಣ್ತುಂಬಿಕೊಂಡವರು ಅವರೊಟ್ಟಿಗೆ ಸಣ್ಣಪುಟ್ಟ ಮಾತುಕತೆ ನಡೆಸುವ ಅವಕಾಶವನ್ನೂ ಪಡೆದು ಪುಳಕಿತರಾದರು. ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾ ತಾರೆಯರೊಂದಿಗೆ ಅವರ ಅಭಿಮಾನಿಗಳು ವಿಶ್ವದ ವಿವಿಧ ಕಂಟ್ರಿ ಕ್ಲಬ್‌ಗಳಲ್ಲಿ ಕಾಲ ಕಳೆಯುವ ಅವಕಾಶ ಕೂಡ ಸೃಷ್ಟಿಯಾಗಿತ್ತು.ಮುಂಬೈನಲ್ಲಿ ವಿವೇಕ್ ಓಬೆರಾಯ್, ಓಮನ್‌ನಲ್ಲಿ ಉಷಾ ಉತುಪ್, ದುಬೈನಲ್ಲಿ ಸೋಫಿ ಚೌಧರಿ, ದೆಹಲಿಯಲ್ಲಿ ತನುಶ್ರೀ ದತ್ತಾ, ಸೂರತ್‌ನಲ್ಲಿ ಶೆಫಾಲಿ ಝರಿವಾಲಾ, ಅಹಮದಾಬಾದ್‌ನಲ್ಲಿ ಸಯಾಲಿ ಭಗತ್, ಹೈದರಾಬಾದ್‌ನಲ್ಲಿ ಅಂಜನಾ ಸುಖಾನಿ, ಪುಣೆಯಲ್ಲಿ ಆರ್ತಿ ಛಾಬ್ರಿಯಾ, ನಾಗ್ಪುರದಲ್ಲಿ ಶ್ರದ್ಧಾ ಶರ್ಮಾ, ಚೆನ್ನೈನಲ್ಲಿ ಪೂರ್ಣಾ ನೃತ್ಯ ಮಾಡಿದರು. ಬೆಂಗಳೂರಿನಲ್ಲಿ ಪಾಯಲ್ ಸಮಯ.ಶುಭಾಶಯಗಳ ವಿನಿಮಯದ ಸಮಯದಲ್ಲಿ ನೃತ್ಯ ಮಾಡುತ್ತಿದ್ದ ಪಾಯಲ್ ರೋಹಟ್ಗಿಯವರನ್ನು ಕಣ್ಣಂದಾಜಲ್ಲೇ ಗುರುತಿಸಿದವರು ಕೂಡ ಕಡಿಮೆ. ಅವರು ನಟಿಸಿದ ಸಿನಿಮಾ ಯಾವ್ಯಾವುದು ಎಂದು ಪರಸ್ಪರ ಮಾತನಾಡಿಕೊಂಡವರೂ ಇದ್ದರು. ಅಂದಹಾಗೆ, ಪಾಯಲ್ ರೋಹಟ್ಗಿಯವರ ವಯಸ್ಸು ನಲವತ್ತೆರಡು!

ಪ್ರತಿಕ್ರಿಯಿಸಿ (+)