ಬೆಂಗಳೂರು: ‘ಪಾರಂಪರಿಕ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಪ್ರಸ್ತುತ ಇರುವ ಐತಿಹಾಸಿಕ ಕಟ್ಟಡಗಳನ್ನು ಜತನದಿಂದ ಕಾಪಾಡಿಕೊಳ್ಳುವ ಅಗತ್ಯವಿದೆ’ ಎಂದು ವಾಸ್ತುತಜ್ಞ ನರೇಶ್ ನರಸಿಂಹನ್ ಹೇಳಿದರು.

ನಗರದ ಭಾರತೀಯ ಎಂಜಿನಿಯರ್ ಸಂಸ್ಥೆಯಲ್ಲಿ (ಐಇಐ) ಮಂಗಳವಾರ ಆಯೋಜಿಸಿದ್ದ ವಾಸ್ತುತಜ್ಞ ಬಿ.ಆರ್.ಮಾಣಿಕ್ಯಂ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ‘ಪಾರಂಪರಿಕ ಬೆಂಗಳೂರು’ ಎಂಬ ವಿಷಯ ಕುರಿತು ಮಾತನಾಡಿದರು.

‘ಒಂದು ಕಾಲದಲ್ಲಿ ವಿಶಾಲ ಪ್ರದೇಶ, ಸಮೃದ್ಧ ಕೆರೆ–ಕುಂಟೆಗಳು ಮತ್ತು ವಿವಿಧ ಜಾತಿಯ ಮರಗಳಿಂದ ಕೂಡಿದ್ದ ನಗರ ಇಂದು ಗದ್ದಲದ ಗೂಡಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ತರಾತುರಿಯಿಂದ ನಡೆಸುವ ಕಾಮಗಾರಿಗಳು ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿವೆ’ ಎಂದು ಖೇದ ವ್ಯಕ್ತಪಡಿಸಿದರು.

‘ತನ್ನದೇ ಆದ ಐತಿಹಾಸಿಕ, ಚಾರಿತ್ರಿಕ ಇತಿಹಾಸವುಳ್ಳ ನಗರದಲ್ಲಿ ಶತಮಾನದ ಹಿಂದೆ ನೂರಾರು ಪಾರಂಪರಿಕ ಕಟ್ಟಡ ನೋಡಬಹುದಾಗಿತ್ತು. ಇಂದು ಅವುಗಳ ಸಂಖ್ಯೆ ಬೆರಳೆಣಿಕೆಗೆ ಬಂದು ನಿಂತಿದೆ. ನೂರರ ಹತ್ತಿರದಲ್ಲಿದ್ದ ಕೆರೆಗಳ ಸಂಖ್ಯೆ 30ಕ್ಕೆ ಕುಸಿದಿದೆ’ ಎಂದು ಹೇಳಿದರು.

‘ಪ್ರಸ್ತುತ ನಗರದಲ್ಲಿ ಚಾಮರಾಜಪೇಟೆಯ ಕೋಟೆ ಹೈಸ್ಕೂಲ್ನಿಂದ ಸದಾಶಿವನಗರದ ಅರಮನೆ ಮೈದಾನದವರೆಗೆ ಸುಮಾರು 40 ಪಾರಂಪರಿಕ ಕಟ್ಟಡಗಳನ್ನು ನೋಡಬಹುದು. ಇದನ್ನು ‘ಪಾರಂಪರಿಕ ವಲಯ’ವೆಂದು ಗುರುತಿಸಿ ಸರ್ಕಾರ ಈ ಮಾರ್ಗದಲ್ಲಿರುವ ಚಾರಿತ್ರಿಕ ಕಟ್ಟಡಗಳ ರಕ್ಷಣೆಗೆ ವಿಶೇಷ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

‘ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ತರಾತುರಿಯಲ್ಲಿ ನಡೆಸಬಾರದು. ಬದಲು, ವಾಸ್ತುತಜ್ಞರು ಮತ್ತು ಎಂಜಿನಿಯರುಗಳು ಜತೆಗೂಡಿ ನಗರ ಸೌಂದರ್ಯವನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಬಗೆಯ ವಿನ್ಯಾಸಗಳನ್ನು ರೂಪಿಸುವ ಅಗತ್ಯವಿದೆ’ ಎಂದು ತಿಳಿಸಿದರು.

ಐಇಐ ಅಧ್ಯಕ್ಷ ಎಲ್.ವಿ.ಮುರುಳಿಕೃಷ್ಣ ರೆಡ್ಡಿ ಮಾತನಾಡಿ, ‘ರಾಜ್ಯ ಸರ್ಕಾರದ ವಾಸ್ತುತಜ್ಞರಾಗಿ, ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಮತ್ತು ನಗರ ಯೋಜನೆ ಇಲಾಖೆಯ ನಿರ್ದೇಶಕರಾಗಿ ಬಿ.ಆರ್.ಮಾಣಿಕ್ಯಂ ಅವರು ಸಲ್ಲಿಸಿದ ಸೇವೆ ಅನುಪಮವಾದದ್ದು. ಅವರು ರೂಪಿಸಿದ ವಿನ್ಯಾಸದಲ್ಲಿ ಮೈದಳೆದ ವಿಧಾನಸೌಧದ ಭವ್ಯ ಆಡಳಿತ ಕಟ್ಟಡವು ಪಾರಂಪರಿಕ ಕಟ್ಟಡದ ಸಾಲಿಗೆ ಸೇರಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.