ದಾವಣಗೆರೆ: ಪಾಲಿಕೆಯ ವ್ಯಾಪಾರ ಮಳಿಗೆಗಳ ಬಾಡಿಗೆಯನ್ನು ನಿಯಮ ಮೀರಿ ಹೆಚ್ಚಿಸಲಾಗುತ್ತಿದ್ದು, ಈ ಕ್ರಮ ಸರಿಯಲ್ಲ ಎಂದು ಪಾಲಿಕೆ ಮಾಜಿ ಸದಸ್ಯ ಭೈರಪ್ಪ ಹೇಳಿದರು.ಪಾಲಿಕೆ ಮಳಿಗೆಗಳ ಬಾಡಿಗೆಯನ್ನು ಮೂರು ವರ್ಷಗಳಿಗೊಮ್ಮೆ ಹೆಚ್ಚಿಸಲಾಗುತ್ತಿತ್ತು. ಇದೀಗ ಬಾಡಿಗೆದಾರರನ್ನು ಪ್ರತ್ಯೇಕವಾಗಿ ಕರೆದು ಮೂರರಿಂದ ಐದುಪಟ್ಟು ಬಾಡಿಗೆ ಪಾವತಿಸುವಂತೆ ಒತ್ತಾಯಿಸಲಾಗುತ್ತಿದೆ. ಇದು ಸಲ್ಲದು.

ಸರ್ಕಾರದ ನಿಯಮಾವಳಿಗಳನ್ನು ಸ್ಪಷ್ಟಪಡಿಸಿ ಬಾಡಿಗೆ ನಿಗದಿಪಡಿಸಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.ನಗರದಲ್ಲಿ ಪಾಲಿಕೆಗೆ ಸೇರಿದ 400 ಮಳಿಗೆಗಳು ಇವೆ. ಚಾಮರಾಜ ಪೇಟೆಯ ಮಳಿಗೆಗೆ ರೂ 600, ಜಿಲ್ಲಾ ಕ್ರೀಡಾಂಗಣದ ಬಳಿಯ ಮಳಿಗೆಗೆ ರೂ 1,300 ಲೇಬರ್ ಕಾಲೊನಿಯ ಮಳಿಗೆಗೆ ರೂ 350 ನಿಗದಿಪಡಿಸಲಾಗಿದೆ. ಆದರೆ, ಇದೀಗ ಏಕಾಏಕಿ 2011ರ ಏಪ್ರಿಲ್ನಿಂದ ಪೂರ್ವಾನ್ವಯ ಆಗುವಂತೆ ಹೆಚ್ಚುವರಿ ಬಾಡಿಗೆ ಪಾವತಿಸಲು ಒತ್ತಾಯಿಸಲಾಗುತ್ತದೆ ಎಂದು ದೂರಿದರು.

ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಮಳಿಗೆದಾರರಿಗೆ ತಿಳಿಸಿಲ್ಲ. ಅನೇಕ ಬಾಡಿಗೆದಾರರಿಂದ ಹೆಚ್ಚುವರಿ ಮುಂಗಡ ಹಣ ವಸೂಲು ಮಾಡಲಾಗಿದೆ. ಹೆಚ್ಚುವರಿ ಮುಂಗಡ ಹಣ ಪಾವತಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ನಿರ್ವಹಿಸಿಲ್ಲ. ಬಾಡಿಗೆದರ ವಿಧಿಸುವ ಮಾನದಂಡದ ಬಗ್ಗೆ ಮಾಹಿತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಾಡಿಗೆ ದರವನ್ನು ಏಕಾಏಕಿ ಹೆಚ್ಚಿಸಬಾರದು. ಸರ್ಕಾರದ ಆದೇಶದ ಪ್ರಕಾರ ಬಾಡಿಗೆ ದರ ಹೆಚ್ಚಳ ಮಾಡಬೇಕು. ಅದಕ್ಕೆ ತಾವು ಬದ್ಧರಿದ್ದೇವೆ. ಈ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಮಾರ್ಚ್ 21ರಂದು ಪಾಲಿಕೆಗೆ, ಸಂಸತ್ ಸದಸ್ಯರು, ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿವಿಧ ಉಮಾಪತಿ, ನಾಗರಾಜ್, ಆರ್. ರುದ್ರೇಶ್, ನಾಗಭೂಷಣ ತೌಡೂರು, ಬಿ.ವಿ. ರಾಜಶೇಖರ, ಸುಭಾನ್ ಸಾಬ್, ಜಿ. ಬಾಬು, ಸಿ.ಆರ್. ಕೃಷ್ಣಪ್ಪ ಇತರರು ಇದ್ದರು.

ಬಾಡಿಗೆ ಏರಿಕೆಗೆ ವಿರೋಧ

ಸರ್ಕಾರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಮಳಿಗೆಗಳಿಗೆ ನಾಲ್ಕುಪಟ್ಟು ಬಾಡಿಗೆ ಹೆಚ್ಚಿಸಿರುವುದನ್ನು ಕಾಂಗ್ರೆಸ್ ಜಿಲ್ಲಾ ಮುಖಂಡ ದಿನೇಶ್ ಕೆ. ಶೆಟ್ಟಿ ಖಂಡಿಸಿದ್ದಾರೆ.

ಹಲವು ವರ್ಷಗಳಿಂದ ಮಳಿಗೆಗಳ ದುರಸ್ತಿಯನ್ನೇ ಮಾಡಿಸಿಲ್ಲ. ಗೋಡೆಯಲ್ಲಿ ಕಬ್ಬಿಣದ ಸಲಾಕೆಗಳು ಕಾಣಿಸುತ್ತಿವೆ. ಇಂತಹ ಮಳಿಗೆಗಳಿಗೆ ನಾಲ್ಕುಪಟ್ಟು ದರ ಹೆಚ್ಚು ಮಾಡಿರುವುದು ಯಾವ ನ್ಯಾಯ. ಕೂಡಲೇ, ಬಾಡಿಗೆ ದರ ಕಡಿಮೆ ಮಾಡದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

`ಸಮಾನತೆ ಮಹಿಳೆಗೆ ಕನಸಿನ ಗಂಟು~

ಶೋಷಣೆಗಳ ಮಧ್ಯೆ ಮಹಿಳೆ ದುಡಿಯುತ್ತಿದ್ದು, ಸಮಾನತೆ ಮಹಿಳೆಗೆ ಕನಸಿನ ಗಂಟಾಗಿದೆ ಎಂದು ನೂತನ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಜಿ. ವಿಜಯಕುಮಾರಿ ಅಭಿಪ್ರಾಯಪಟ್ಟರು.

ನಗರದ ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮುದೇಗೌಡ್ರ ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಸ್ಥೆ ಕಾರ್ಯದರ್ಶಿ ಎಸ್.ಎಸ್. ಮಠಪತಿ, ಪ್ರಾಂಶುಪಾಲ ಡಾ.ಎಚ್.ವಿ. ಶಿವಶಂಕರ್ ಇದ್ದರು. ಪ್ರಶಿಕ್ಷಣಾರ್ಥಿ ಬಿ.ಯು. ಮಂಜುಳಾ, ಕವಿತಾ ಪ್ರಾರ್ಥಿಸಿದರು. ಪಿ. ಶೈಲಜಾ ಸ್ವಾಗತಿಸಿದರು. ಕೆ. ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಜಿ.ಆರ್. ವಾಣಿಶ್ರೀ ವಂದಿಸಿದರು.

7ಕ್ಕೆ ರಾಷ್ಟ್ರೀಯ ಕನ್ನಡ ಸಮ್ಮೇಳನ

ನವದೆಹಲಿಯಲ್ಲಿ ಏ. 7ರಿಂದ 29ನೇ ರಾಷ್ಟ್ರೀಯ ಕನ್ನಡ ಸಮ್ಮೇಳನ ಜರುಗಲಿದೆ.
`ದೆಹಲಿ ಕನ್ನಡಿಗ~ ಪತ್ರಿಕೆ ಆಶ್ರಯದಲ್ಲಿ ಸಮ್ಮೇಳನ ಜರುಗಲಿದ್ದು, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಗೀತಾ ಬಾಲಿ ಉದ್ಘಾಟನೆ ನೆರವೇರಿಸುವರು. ಲಖನೌ ಅಂಬೇಡ್ಕರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ. ಹುನುಮಯ್ಯ ಅಧ್ಯಕ್ಷತೆ ವಹಿಸುವರು ಎಂದು ಸಮ್ಮೇಳನದ ಸಂಚಾಲಕ ಬಾ. ಸಾಮಗ ತಿಳಿಸಿದ್ದಾರೆ.

ದಾವಣಗೆರೆ ವಿವಿ ಕುಲಪತಿ ಪ್ರೊ.ಎಸ್. ಇಂದುಮತಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಕೆ. ನಾರಾಯಣಗೌಡ ಅವರು ಪುಸ್ತಕ ಮತ್ತು ಕಲಾ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಮ್ಮೇಳನ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಇದೇ ವೇಳೆ ವಿವಿಧ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.