ಶುಕ್ರವಾರ, ಏಪ್ರಿಲ್ 16, 2021
31 °C

ಪಾಲಿಕೆ ಸದಸ್ಯ-ಸಿಬ್ಬಂದಿ ಕ್ರೀಡಾಕೂಟ 26ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಹಾನಗರಪಾಲಿಕೆಯ 150ನೇ ವರ್ಷಾಚರಣೆಯ ಅಂಗವಾಗಿ ಆಗಸ್ಟ್ 26ರಂದು ಪಾಲಿಕೆ ಸದಸ್ಯರು ಹಾಗೂ ಸಿಬ್ಬಂದಿವರ್ಗದವರಿಗಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕ್ರೀಡಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಪುರುಷೋತ್ತಮ್, `ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು,  ವಿವಿಧ ವಯೋಮಾನದವರಿಗೆ ಬೇರೆ ಬೇರೆ ಕ್ರೀಡೆಗಳನ್ನು ಆಡಿಸಲಾಗುತ್ತಿದೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ~ ಎಂದರು.`ಪುರುಷರ ವಿಭಾಗದಲ್ಲಿ 40 ವಯಸ್ಸು ಒಳಗಿನವರಿಗೆ 400 ಮೀಟರ್ ಓಟ, 200 ಮೀ. ಓಟ, ಶಾಟ್‌ಪಟ್, ಗಾಲ್ಫ್ (ಹಾಕಿ ಸ್ಟಿಕ್‌ನಲ್ಲಿ ಚೆಂಡನ್ನು ನಿಗದಿತ ಸ್ಥಳಕ್ಕೆ ಕಳುಹಿಸುವುದು), 41 ರಿಂದ 50 ವಯಸ್ಸಿನೊಳಗಿನವರಿಗೆ 200 ಮೀ, 100 ಮೀ ಓಟ, ಶಾಟ್‌ಪಟ್, ಗಾಲ್ಫ್ (ಹಾಕಿ ಸ್ಟಿಕ್‌ನಲ್ಲಿ ಚೆಂಡನ್ನು ನಿಗದಿತ ಸ್ಥಳಕ್ಕೆ ಕಳುಹಿಸುವುದು), 51 ರಿಂದ 60 ವಯಸ್ಸಿನೊಳಗಿನವರಿಗೆ 100ಮೀ, 75 ಮೀ ಓಟ, ಹಿಟ್ಟಿಂಗ್ ದ ವಿಕೆಟ್, ಗಾಲ್ಫ್ (ಹಾಕಿ ಸ್ಟಿಕ್‌ನಲ್ಲಿ ಚೆಂಡನ್ನು ನಿಗದಿತ ಸ್ಥಳಕ್ಕೆ ಕಳುಹಿಸುವುದು), 61 ವಯಸ್ಸು ಮೇಲ್ಪಟ್ಟವರಿಗೆ 75 ಮೀ,  50 ಮೀ, ಹಿಟ್ಟಿಂಗ್ ದ ವಿಕೆಟ್, ಗಾಲ್ಫ್ (ಹಾಕಿ ಸ್ಟಿಕ್‌ನಲ್ಲಿ ಚೆಂಡನ್ನು ನಿಗದಿತ ಸ್ಥಳಕ್ಕೆ ಕಳುಹಿಸುವುದು) ಸ್ಪರ್ಧೆಗಳು ಇವೆ~ ಎಂದರು.`ಮಹಿಳಾ ಸದಸ್ಯರು ಹಾಗೂ ಸಿಬ್ಬಂದಿಗೆ 200 ಮೀ, 100 ಮೀ, 41 ರಿಂದ 50 ವಯಸ್ಸಿನೊಳಗಿನವರಿಗೆ 100 ಮೀ , 75 ಮೀಟರ್ ಓಟ,  51 ರಿಂದ 60 ವಯಸ್ಸು ಮೇಲ್ಪಟ್ಟವರಿಗೆ 75 ಮೀ, 50 ಮೀ ಓಟ, 61 ವಯಸ್ಸು ಮೇಲ್ಪಟ್ಟವರಿಗೆ 75 ಮೀ, 50 ಮೀ ಓಟದ ಸ್ಪರ್ಧೆ ಹಾಗೂ ಎಲ್ಲ ವಯೋಮಾನದವರಿಗೂ ಚಮಚನಿಂಬೆಹಣ್ಣು ಓಟ, ಪೆಗ್ಗಿಂಗ್ ದ ವಿಕೆಟ್ (ವಿಕೆಟ್‌ಗೆ ರಿಂಗ್ ಹಾಕುವುದು) ಸ್ಪರ್ಧೆಗಳು ನಡೆಯುತ್ತವೆ~ ಎಂದರು.`ಪಾಲಿಕೆ ಸದಸ್ಯರು ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ತಂಡಗಳ ನಡುವೆ ಹಗ್ಗ ಜಗ್ಗಾಟ, ಕ್ರಿಕೆಟ್, ಕಬಡ್ಡಿ, ಸಂಗೀತ ಕುರ್ಚಿ, ಕೇರಂ (ಡಬಲ್ಸ್), ಚೆಸ್ ಸ್ಪರ್ಧೆಗಳೂ ನಡೆಯಲಿವೆ. ಮೇಯರ್ ತಂಡ ಹಾಗೂ ಆಯುಕ್ತರ ತಂಡಗಳ ನಡುವೆ ವಿಜೇತರಾಗುವ ತಂಡವು ಪತ್ರಕರ್ತರ ತಂಡದೊಡನೆ ಸ್ನೇಹಪೂರ್ವಕ ಕ್ರಿಕೆಟ್ ಪಂದ್ಯ ನಡೆಯಲಿದೆ~ ಎಂದು ತಿಳಿಸಿದರು.`ಆಗಸ್ಟ್ 27ರಂದು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಪ್ರತಿ ವಾರ್ಡ್‌ಗಳಲ್ಲಿ ನಿರಂತರ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ~ ಎಂದು ಹೇಳಿದರು.ಈ ಸಂದರ್ಭದಲ್ಲಿ ಸದಸ್ಯರಾದ ಭೈರಪ್ಪ, ಕೆ.ವಿ. ಮಲ್ಲೇಶ್, ಗಿರೀಶಪ್ರಸಾದ, ದೇವರಾಜ್ ಹಾಜರಿದ್ದರು.`ಮೇಯರ್ ಕಪ್ ಟೂರ್ನಿ ನಡೆಯಲಿ~


ಮೈಸೂರು: ಮಹಾನಗರ ಪಾಲಿಕೆಯು ಮೊದಲು ನಡೆಸುತ್ತಿದ್ದ ಮೇಯರ್ ಕಪ್ ಕಬಡ್ಡಿ ಟೂರ್ನಿಯು ನಿಂತುಹೋಗಿದೆ. ಮೇಯರ್ ಆದವರು ಅದರ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನಾನು ಮೇಯರ್ ಆಗಿದ್ದಾಗ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಮೇಯರ್ ಕಪ್ ಟೂರ್ನಿ ನಡೆದಿತ್ತು. ಮುಂದೆಯೂ ಅದು ನಡೆಯುವಂತಾಗಬೇಕು. ಪ್ರತಿ ವರ್ಷವೂ ಪಾಲಿಕೆಯಿಂದ ಕ್ರೀಡಾ ಚಟುವಟಿಕೆ ಮತ್ತು ಪ್ರೋತ್ಸಾಹಕ್ಕಾಗಿ 20 ಲಕ್ಷ ರೂಪಾಯಿ ಹಣವನ್ನು ಇಟ್ಟಿರಲಾಗುತ್ತದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಸಾಧಕರಿಗೆ ಸೂಕ್ತ ಧನಸಹಾಯ ನೀಡಲಾಗುತ್ತಿದೆ~ ಎಂದು ತಿಳಿಸಿದರು.`ಪ್ರತಿ ಬಾರಿಯೂ ಸಭೆಯಲ್ಲಿ ಈಜುಗೊಳ ನಿರ್ಮಾಣದ ಬಗ್ಗೆ ಪ್ರಸ್ತಾಪ ಮಾಡಲಾಗುತ್ತದೆ. ಹಣವೂ ಮಂಜೂರಾಗಿದೆ. ಆದರೆ ಕಾಮಗಾರಿ ಆರಂಭವಾಗಿಲ್ಲ. 150 ವರ್ಷದ ಈ ಸಂದರ್ಭದಲ್ಲಿ ಈಜುಗೊಳ ಕಾಮಗಾರಿ ಆರಂಭವಾಗಬೇಕು~ ಎಂದು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.