ಶಿರಸಿ (ಉ.ಕ. ಜಿಲ್ಲೆ): ಪರಿಸರ ಸಂರಕ್ಷಣೆಯಲ್ಲಿ ಗಮನಾರ್ಹ ಕೆಲಸ ಮಾಡಿದವರಿಗೆ ಇಲ್ಲಿನ ಪಾವನಾ ಟ್ರಸ್ಟ್ ನೀಡುವ `ಪಾವನಾ ಪ್ರಶಸ್ತಿ'ಗೆ ಈ ವರ್ಷ ಧಾರವಾಡದ ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆಯ್ಕೆಯಾಗಿದ್ದಾರೆ.

ಇದೇ 12ರಂದು ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡುವರು. ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಅಧ್ಯಕ್ಷತೆ ವಹಿಸುವರು.

ಸ್ವಾತಂತ್ರ್ಯಯೋಧ ಬಕ್ಕೆಮನೆ ನಾರಾಯಣ ಹೆಗಡೆ ಹಾಗೂ ಪಾರ್ವತಿ ದಂಪತಿ ಸ್ಮರಣಾರ್ಥ ಪಾವನಾ ಪರಿಸರ ಪ್ರತಿಷ್ಠಾನವು ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ ವ್ಯಕ್ತಿ, ಸಂಘಟನೆಗಳನ್ನು ಗುರುತಿಸಿ,

ಕಳೆದ 15 ವರ್ಷಗಳಿಂದ ಪ್ರಶಸ್ತಿ ನೀಡುತ್ತ ಬಂದಿದೆ. ಈ ಪ್ರಶಸ್ತಿಯು 50 ಸಾವಿರ ರೂ. ನಗದು ಮತ್ತು ಪ್ರಶಸ್ತಿಪತ್ರ ಒಳಗೊಂಡಿರುತ್ತದೆ.
`ಅರಣ್ಯನಾಶ, ಪರಿಸರ ಮಾಲಿನ್ಯ, ಗ್ರಾಮೀಣ ಜನರ ಸಮಸ್ಯೆಗಳ ವಿರುದ್ಧ 25 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಹಿರೇಮಠ, ಕರ್ನಾಟಕದಲ್ಲಿ ವ್ಯಾಪಕವಾಗಿ ಹಬ್ಬಿದ್ದ ಅಕ್ರಮ ಗಣಿಗಾರಿಕೆ ತಡೆಗಟ್ಟುವಲ್ಲಿ ಯಶಸ್ಸು ಸಾಧಿಸಿರುವುದನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ' ಎಂದು ಪಾವನಾ ಟ್ರಸ್ಟ್ ವಕ್ತಾರ ಬಕ್ಕೆಮನೆ ಶ್ರೀಪಾದ ಹೆಗಡೆ ತಿಳಿಸಿದ್ದಾರೆ.

`ಅಮೆರಿಕಾದ ಪ್ರತಿಷ್ಠಿತ ಸಂಸ್ಥೆಯ ಉನ್ನತ ಹುದ್ದೆ ತ್ಯಜಿಸಿದ ಎಸ್.ಆರ್. ಹಿರೇಮಠ ಅವರು ಗಾಂಧೀಜಿ ಗ್ರಾಮೀಣ ಭಾರತದ ಕನಸನ್ನು ಸಾಕಾರಗೊಳಿಸಲೆಂದು ಸಮಾಜ ಪರಿವರ್ತನ ಸಮುದಾಯ ಸಂಘಟನೆ ಆರಂಭಿಸಿ ಬೆಳೆಸಿದವರು. ಡಾ. ಶಿವರಾಮ ಕಾರಂತ, ಕುಸುಮಾ ಸೊರಬ, ಮೇಧಾ ಪಾಟ್ಕರ್ ಬೆಂಬಲದೊಂದಿಗೆ ಕಿತ್ತಿಕೊ-ಹಚ್ಚಿಕೊ, ಪಶ್ಚಿಮಘಟ್ಟ ಉಳಿಸಿ, ನರ್ಮದಾ ಬಚಾವೊ ಮತ್ತಿತರ ಆಂದೋಲನಗಳಲ್ಲಿ ಜನರನ್ನು ತೊಡಗಿಸಿ, ಹೊಸರಾಷ್ಟ್ರೀಯ ಅರಣ್ಯ ನೀತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು.

ನಾಲ್ಕು ವರ್ಷಗಳಿಂದ ಕರ್ನಾಟಕದ ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಣೆಯ ಬಗ್ಗೆ ಸುಪ್ರೀಂ ಕೋರ್ಟ್ಗೆ ದಾಖಲೆ ಒದಗಿಸುತ್ತ, ಲೋಕಾಯುಕ್ತರ ಕೈ ಬಲಪಡಿಸುತ್ತಿರುವ ಅವರು ತಪ್ಪಿತಸ್ಥರಿಗೆ ಶಿಕ್ಷೆಯಾಗುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ' ಎಂದು ಹೆಗಡೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.