ಸೋಮವಾರ, ಸೆಪ್ಟೆಂಬರ್ 28, 2020
28 °C

ಪಾಸ್ತಾ ಮಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಸ್ತಾ ಮಸ್ತಿ

ಸುಡುವ ಪಾಸ್ತಾವನ್ನು ತುಟಿಗೆ ಸೋಕಿಸುತ್ತಾ ನಾಲಗೆ ಮೇಲೆ ಹೊರಳಾಡಿಸಿ ಹೊಟ್ಟೆಯೊಳಕ್ಕೆ ಇಳಿಸುವಾಗ ಸಿಗುವ ಸುಖವನ್ನು ಅನುಭವಿಸಿಯೇ ತಿಳಿಯಬೇಕು. ಚೀಸ್, ಫುಸಿಲ್ಲಿ, ಕ್ರೀಮಿ ಟೊಮೆಟೊ, ಸ್ಪೆಗಟಿ (ದಪ್ಪ ಎಳೆಯ ಶಾವಿಗೆ), ಚಿಕನ್ ವ್ಹಾಹ್! ಇವೆಲ್ಲದರ ಸಮ್ಮಿಶ್ರಣ ಹೊಂದಿರುವ ಪಾಸ್ತಾ ತಿನ್ನುವಾಗ ಸಿಗುವ ಆನಂದವೇ ಬೇರೆ.ಪಾಸ್ತಾ ಪ್ರಿಯರಿಗೆ ಪಿಜ್ಜಾ ಹಟ್ ಇಂತಹ ಇನ್ನೊಂದು ಅವಕಾಶ ಕಲ್ಪಿಸಿದೆ. ಪಾಸ್ತಾ ಭಕ್ಷಕರು ಇಲ್ಲಿ ಹನ್ನೊಂದು ಬಗೆಯ ಸ್ವಾದಿಷ್ಟಕರ ಪಾಸ್ತಾ ಸವಿದು ಮಸ್ತಿ ಮಾಡಬಹುದು.`ಪಾಸ್ತಾ ಮಸ್ತಿ~ ಹೆಸರಿನಡಿಯಲ್ಲಿ ಪರಿಚಯಿಸಿರುವ ಈ ಪಾಸ್ತಾಗಳು ವೈವಿಧ್ಯಮಯ ಸ್ವಾದದಲ್ಲಿ ಲಭ್ಯ. ಪಾಸ್ತಾ ಪ್ರಿಯರು ತಮ್ಮ ಸ್ನೇಹಿತರು, ಕುಟುಂಬದೊಂದಿಗೆ ಪಿಜ್ಜಾ ಹಟ್‌ಗೆ ತೆರಳಿ ಮನಸಾರೆ ಸವಿಯಬಹುದು. ಪಾಸ್ತಾಗಳು ವೆಜ್ ಹಾಗೂ ನಾನ್‌ವೆಜ್ ಎರಡರಲ್ಲೂ ಲಭ್ಯವಿದೆ. ಲಸಂಗಾ ಪಿಜ್ಜಾ ಹಟ್‌ನ ವಿಶೇಷ ಪಾಸ್ತಾ. ಇದರ ಪ್ರತಿ ತುಂಡನ್ನು ತಿನ್ನುವಾಗ ವಿಭಿನ್ನ ಅನುಭೂತಿ ಸಿಕ್ಕುತ್ತದೆ ಹಾಗೂ ಮತ್ತಷ್ಟು ಭಕ್ಷಣೆಗೆ ಪ್ರೇರಣೆ ಹುಟ್ಟಿಸುತ್ತದೆ ಎಂಬುದು ಕಂಪೆನಿ ಹೇಳಿಕೆ. ಅಂದಹಾಗೆ ಪಾಸ್ತಾ ಬೆಲೆ ರೂ.109ರಿಂದ ಪ್ರಾರಂಭವಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.