ಬುಧವಾರ, ಏಪ್ರಿಲ್ 21, 2021
30 °C

ಪಿಎನ್‌ಬಿ, ಎಸ್‌ಬಿಐ ಬಡ್ಡಿ ಪರಿಷ್ಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್  ಬ್ಯಾಂಕ್ (ಪಿಎನ್‌ಬಿ) ಸ್ಥಿರ ಠೇವಣಿ ಬಡ್ಡಿ ದರ ಪರಿಷ್ಕರಿಸಿವೆ.`ಎಸ್‌ಬಿಐ~ ಐದು ವರ್ಷಗಳ ಸ್ಥಿರ ಠೇವಣಿ ಬಡ್ಡಿ ದರವನ್ನು ಶೇ 0.25ರಷ್ಟು ಕಡಿಮೆ ಮಾಡುವ ಮೂಲಕ ಶೇ 8.50ಕ್ಕೆ ತಗ್ಗಿಸಿದೆ. `ಪಿಎನ್‌ಬಿ~  ಕೂಡ ಒಂದು ವರ್ಷದ ಠೇವಣಿ ಬಡ್ಡಿ ದರವನ್ನು ಶೇ 0.25ರಷ್ಟು ತಗ್ಗಿಸಿದ್ದು ಶೇ 9ಕ್ಕೆ ತಂದಿದೆ. ಪರಿಷ್ಕೃತ ದರಗಳು ಆಗಸ್ಟ್ 7ರಿಂದ ಜಾರಿಗೆ ಬರಲಿವೆ.ಗರಿಷ್ಠ ರೂ15 ಲಕ್ಷದಿಂದ ಕನಿಷ್ಠ ರೂ1 ಲಕ್ಷದೊಳಗಿನ 5ರಿಂದ 10 ವರ್ಷಗಳೊಳಗಿನ ಸ್ಥಿರ ಠೇವಣಿ ಬಡ್ಡಿ ದರ ಶೇ 0.5ರಷ್ಟು ಇಳಿಕೆಯಾಗಿದೆ ಎಂದು `ಎಸ್‌ಬಿಐ~ ತಿಳಿಸಿದೆ. ರೂ30 ಲಕ್ಷ ಮೊತ್ತದವರೆಗಿನ ಗೃಹ ಸಾಲ ಬಡ್ಡಿ ದರವನ್ನು `ಎಸ್‌ಬಿಐ~ ಶೇ 10.50ರಿಂದ ಶೇ 10.25ಕ್ಕೆ ತಗ್ಗಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.