ಬುಧವಾರ, ಜೂನ್ 3, 2020
27 °C

ಪಿಕ್ಸ್‌ನ ತ್ರಿ ಮಸ್ಕೆಟಿಯರ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿಕ್ಸ್‌ನ ತ್ರಿ ಮಸ್ಕೆಟಿಯರ್ಸ್

ಪಿಕ್ಸ್ ದೇಶದ ಉತ್ಕ್ರಷ್ಟ ಹಾಲಿವುಡ್ ಚಲನಚಿತ್ರಗಳ ಚಾನೆಲ್. ಹಾಲಿವುಡ್ ಚಿತ್ರಗಳಲ್ಲದೇ, ಚಿತ್ರ ತಾರೆಯರ ಕುರಿತ ಮಾಹಿತಿ, ಚಲನಚಿತ್ರ ಸೆಟ್, ಶೂಟಿಂಗ್ ವಿವರಗಳ ಕುರಿತಾದ ಕಾರ್ಯಕ್ರಮಗಳನ್ನು ನಿಯಮಿತವಾಗಿ ಪ್ರಸಾರ ಮಾಡುತ್ತಿದೆ. ಹಾಲಿವುಡ್ ಸೂಪರ್‌ಸ್ಟಾರ್ ವಿಲ್ ಸ್ಮಿತ್ ಐದು ವರ್ಷಗಳ ಹಿಂದೆ ಈ ಚಾನೆಲ್ ಉದ್ಘಾಟಿಸಿದ್ದರು.ಸ್ಲಮ್‌ಡಾಗ್ ಮಿಲೇನಿಯರ್, ಹರ್ಟ್ ಲಾಕರ್, ಕರಾಟೆ ಕಿಡ್, ಬುಕ್ ಆಫ್ ಎಲಿ ಇತ್ಯಾದಿ ಸುಪ್ರಸಿದ್ಧ ಹಾಲಿವುಡ್ ಚಿತ್ರಗಳನ್ನು ಬಿಡುಗಡೆಯಾದ ಕೆಲ ದಿನಗಳಲ್ಲೇ ಪ್ರಸಾರ ಮಾಡಿದ ಖ್ಯಾತಿ ಅದರದ್ದು.ಪಿಕ್ಸ್ ಈಗ ಚಲನಚಿತ್ರ ಪ್ರಿಯ ವಿದ್ಯಾರ್ಥಿಗಳಿಗೆ ಹೊಸದೊಂದು ಅವಕಾಶ ಕಲ್ಪಿಸಿದೆ. ಬೆಂಗಳೂರು, ದೆಹಲಿ, ಮುಂಬೈನ `ಪಿಕ್ಸ್ ಮೂವಿ ಕ್ಲಬ್~ನ ವಿದ್ಯಾರ್ಥಿ ಸದಸ್ಯರು ಹೊಸ ಹಾಲಿವುಡ್ ಚಿತ್ರಗಳನ್ನು ಪಿವಿಆರ್ ಸಿನಿಮಾ ಮಂದಿರಗಳಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.ಪಿಕ್ಸ್ ಮೂವಿ  ಕ್ಲಬ್ ವಿದ್ಯಾರ್ಥಿ ಸದಸ್ಯರಾಗಲು ನೀವು ಮಾಡಬೇಕಾಗಿದ್ದು ಇಷ್ಟೆ. www.pixtelevision.com  ಮೂಲಕ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಬೇಕು.ನಿಮಗೊಂದು ಸದಸ್ಯತ್ವ ಸಂಖ್ಯೆಯನ್ನು ಇ-ಮೇಲ್ ಮೂಲಕ ಕಳುಹಿಸಲಾಗುವುದು. ಮಲ್ಟಿಫ್ಲೆಕ್ಸ್‌ನಲ್ಲಿ ಚಿತ್ರ ನೋಡಲು ತೆರಳುವಾಗ ಈ ಸಂಖ್ಯೆಯನ್ನು ನೀವು ಅಲ್ಲಿ ತೋರಿಸಬೇಕಾಗುತ್ತದೆ.ಕೋರಮಂಗಲದ ಫೋರಂ ಮಾಲ್‌ನ ಪಿವಿಆರ್‌ನಲ್ಲಿ ಶುಕ್ರವಾರ  ಬೆಳಿಗ್ಗೆ 10ಕ್ಕೆ `ಪಿಕ್ಸ್ ಮೂವಿ ಕ್ಲಬ್~ನ ವಿದ್ಯಾರ್ಥಿ ಸದಸ್ಯರಿಗಾಗಿ `ತ್ರಿ ಮಸ್ಕೆಟಿಯರ್ಸ್~ ಚಿತ್ರದ ಉಚಿತ ಪ್ರದರ್ಶನ. ಪಾಲ್ ಡಬ್ಲು. ಎಸ್. ಆ್ಯಂಡರ್‌ಸನ್ ಈ ಚಿತ್ರ ನಿರ್ದೇಶಿಸಿದ್ದಾರೆ.ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಈ 3-ಡಿ ಚಲನಚಿತ್ರ ಕೆಲ ದಶಕದ ಹಿಂದೆ ತೆರೆಕಂಡಿದ್ದ `ತ್ರಿ ಮಸ್ಕೆಟಿಯರ್ಸ್~ ಕೃತಿಯ ಆಧುನಿಕ ರೂಪವಾಗಿದೆ. ಅದರ ಹಂದರವನ್ನು ಇಂದಿನ ಆಧುನಿಕ ಜೀವನ, ಜಗತ್ತಿಗೆ ಹೊಂದಿಸಿಕೊಂಡು ಚಿತ್ರಕಥೆ ರಚಿಸಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.