ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮಾಜಿ ಅಧ್ಯಕ್ಷ ಪಿ. ಗೋವಿಂದರಾಜು ಅವರ ಸಹೋದರ ಪಿ. ಕಾಂತರಾಜು (62) ಗುರುವಾರ ಮಧ್ಯಾಹ್ನ ನಿಧನ ಹೊಂದಿದರು. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರಿಗೆ ಪತ್ನಿ ಪುಟ್ಟತಾಯಮ್ಮ, ಪುತ್ರ ಮೋಹನ್, ಪುತ್ರಿ ದೀಪಾ, ಸಹೋದರರಾದ ಮಹಾನಗರಪಾಲಿಕೆ ಮಾಜಿ ಸದಸ್ಯ ಪಿ. ದೇವರಾಜ್ ಇದ್ದಾರೆ. ಮೊದಲ ಪುತ್ರ ಭಾಸ್ಕರ್ ಮೂರು ವರ್ಷಗಳ ಹಿಂದೆ ಡೆಂಗೆ ರೋಗದಿಂದ ಮೃತಪಟ್ಟಿದ್ದರು.

ನಂಜನಗೂಡಿನ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ ಕಾಂತರಾಜು ಅವರನ್ನು ಎಲ್ಲರೂ `ಗುರುಸ್ವಾಮಿ' ಎಂದೇ ಕರೆಯುತ್ತಿದ್ದರು. 1998ರ ಜೂನ್ 6 ರಂದು ಅಯ್ಯಪ್ಪಸ್ವಾಮಿ ದೇವಸ್ಥಾನವನ್ನು ನಂಜನಗೂಡಿನಲ್ಲಿ ಆರಂಭಿಸಿದ್ದರು. ದೇವಸ್ಥಾನಕ್ಕೆ ಗುರುವಾರ 15 ವರ್ಷ ತುಂಬಿದೆ.

ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಮಾದರಿಯಲ್ಲೇ ಈ ದೇವಸ್ಥಾನ ನಿರ್ಮಿಸಿರುವುದು ವಿಶೇಷ. ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರು ಈ ದೇವಸ್ಥಾನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಬಂದು ಹೋಗುತ್ತಾರೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಅನ್ನ ದಾಸೋಹ ಆರಂಭವಾಗುವ ಮುನ್ನವೇ ಅವರು ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಅನ್ನ ದಾಸೋಹ ಆರಂಭಿಸಿದ್ದರು. ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಅನ್ನದಾಸೋಹವನ್ನು ನಡೆಸಿಕೊಂಡು ಬರುತ್ತಿದೆ. ಅವರು ಪ್ರತಿ ಡಿಸೆಂಬರ್ನಲ್ಲಿ 15 ದಿನ ಅಯ್ಯಪ್ಪಸ್ವಾಮಿ ಉತ್ಸವವನ್ನು ತಪ್ಪದೆ ನಡೆಸುತ್ತಿದ್ದರು.

ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ ಅವರು ಉಚಿತ ಸಾಮೂಹಿಕ ಮದುವೆ ಮಾಡಿಸುತ್ತಿದ್ದರು. ತಿ. ನರಸೀಪುರ ರಸ್ತೆಯ ವರುಣಾ ಕೆರೆ ಬಳಿ ಇರುವ `ಸುಂದರವನ'ದಲ್ಲಿ ಶುಕ್ರವಾರ (ಜೂನ್ 7) ಮಧ್ಯಾಹ್ನ 12 ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ.

ಸಂತಾಪ: ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೃತರ ಅಂತಿಮ ದರ್ಶನ ಪಡೆದು, ಸಂತಾಪ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.