ಗುರುವಾರ , ಜೂನ್ 17, 2021
22 °C

ಪೀಠೋಪಕರಣ:ಆಧುನಿಕ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಧುನಿಕತೆಗೆ ತಕ್ಕಂತೆ ಜೀವನ ಶೈಲಿ ಬದಲಾಯಿಸಿಕೊಂಡಿರುವ ಮಾನವ ತನ್ನ ಅವಶ್ಯಕ ವಸ್ತುಗಳನ್ನೂ ಅಗತ್ಯತೆಗೆ ತಕ್ಕಂತೆ ಬದಲಿಸಿಕೊಂಡಿದ್ದಾನೆ. ಸಂಪ್ರದಾಯದ ಮೂಲ ಬೇರಿನೊಂದಿಗೆ ಆಧುನಿಕತೆ ಹೆಣೆಯುವ ಅವನ ಕೌಶಲ್ಯ ಪೀಠೋಪಕರಣಗಳಲ್ಲೂ ಕಾಣಿಸಿಕೊಂಡಿದೆ.ಮನೆಯ  ವಿನ್ಯಾಸಕ್ಕೆ ತಕ್ಕಂತ ಸುಂದರ ಪೀಠೋಪಕರಣಗಳನ್ನು ಆಯ್ದು ತರುವುದು ಇಂದಿನ ದಿನಮಾನಗಳಲ್ಲಿ ಕಷ್ಟವೇನಲ್ಲ. ಸಮಕಾಲೀನ ಜೀವನಶೈಲಿಗೆ ಹೊಂದುವ ಅತ್ಯಾಧುನಿಕ ಹಾಗೂ ಸಂಪ್ರದಾಯಿಕ ಪೀಠೋಪಕರಣಗಳು ವಿವಿಧ ವಿನ್ಯಾಸಗಳಲ್ಲಿ ದೊರೆಯುತ್ತವೆ.ಹತ್ತಿಯಷ್ಟೇ ಮೆತ್ತನೆಯ ಅನುಭವ ನೀಡುವ ಸೋಫಾಗಳೂ ಈಗ ಬಂದಿವೆ. ಆತುಕೊಳ್ಳಲು, ಕೈ ಇರಿಸಿಕೊಳ್ಳಲು, ಕಾಲು ಚಾಚಿ ವಿಶ್ರಾಂಶಿ ಪಡೆಯಲು, ಬೇಕಾದರೆ ಸಣ್ಣದೊಂದು  ನಿದ್ರೆ ಮಾಡಲು ಹೀಗೆ ಬಹೂಪಯೋಗ ಇರುವ ಸೋಪಾಗಳೂ ಈಗ ಮಾರುಕಟ್ಟೆಯಲ್ಲಿ ಲಭಿಸುತ್ತವೆ.

 

ಮನೆಗೆ ಹಾಗೂ ಮನಸ್ಸಿಗೆ ಮುದ ನೀಡುವ ಯಾವ ಶೈಲಿಯ ಪೀಠೋಪಕರಣ ಬೇಕು ಎನ್ನುವುದನ್ನು ಆಯ್ದುಕೊಳ್ಳುವುದು ಸೃಜನಶೀಲತೆ ಬೇಡುವ ಕೆಲಸ. ನೀವು ವಾಸಿಸುವ ಮನೆಯಲ್ಲಿ ಇರುವ ಜಾಗ ಹಾಗೂ ಮನೆಯ ವಿನ್ಯಾಸದ ಮೇಲೆ ಪೀಠೋಪಕರಣಗಳ ಆಯ್ಕೆ ಇರಲಿ.ಆಸನಗಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಿದ್ದು, ಸುಂದರ ಕೆತ್ತನೆ ಹಾಗೂ ಬಾಗಿದಂತಹ ಕುರ್ಚಿಗಳೂ ಸಾಂಪ್ರದಾಯಿಕತೆಯನ್ನು ತೋರಿಸುತ್ತವೆ. ಹಿಂಭಾಗ ಹಾಗೂ ಆಸರೆಯ ಕೈಗಳು ಇಲ್ಲದ ಆಸನಗಳನ್ನು (ಒಟ್ಟೊಮನ್) ತಲೆದಿಂಬುಗಳಾಗಿಯೂ ಬಳಸಬಹುದು. ಇವು ಮನೆಯ ಅಂದವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.`ಒಟ್ಟೊಮನ್~ಗಳು ಮೊದಲಿಗೆ ಕಾಲ್ಮಣೆಗಳಂತೆ ಬಳಸಿಕೊಳ್ಳಲು ಸೃಷ್ಟಿಯಾದವುಗಳು. ಆದರೆ, ಈಗ ಒಟ್ಟೊಮನ್‌ಗಳು ವಿವಿಧ ಅವಶ್ಯಕತೆಗಳಿಗಾಗಿ ಬಳಕೆಯಾಗುತ್ತಿವೆ. ಅತ್ಯಂತ ಆರಾಮದಾಯಕ ಈ ಒಟ್ಟೊಮನ್‌ಗಳು ಇರುವ ಸ್ಥಳಾವಕಾಶಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತವೆ. ಕೆಲವೊಂದು ಒಟ್ಟೊಮನ್‌ಗಳನ್ನು ಪೊಟರೆಯಾಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಇವುಗಳು ಸಾಮಾನುಗಳನ್ನು ತುಂಬಿರಿಸುವ ಉಗ್ರಾಣವೂ ಆಗಬಹುದು!ಒಟ್ಟೊಮನ್‌ಗಳನ್ನು ಸೋಫಾದ ಮುಂದಿಟ್ಟು ಪಾನೀಯಗಳು, ತಿಂಡಿ ಹಾಗೂ ನಿಯತಕಾಲಿಕೆಗಳನ್ನಿಟ್ಟರೆ ಅವು ಕಾಫಿ ಟೇಬಲ್ ಕೂಡಾ ಆಗಬಲ್ಲವು. ಚಿಕ್ಕಮಕ್ಕಳು ಆಟವಾಡಲೂ ಈ ಒಟ್ಟೊಮನ್‌ಗಳು ಅತ್ಯುತ್ತಮ.ಟಿವಿಗಳನ್ನು ಇರಿಸುವ ಒಟ್ಟೊಮನ್‌ಗಳನ್ನೂ ನಿರ್ಮಿಸಲಾಗಿದ್ದು, ಮಲಗುವ ಕೋಣೆಯಲ್ಲಿ ಮಗ್ಗಲು ಮೇಜೂ ಆಗಲೂಬಹುದು. ಜೊತೆಗೆ ಕೆಲವು ವಸ್ತುಗಳನ್ನು ಗೌಪ್ಯವಾಗಿರಿಸಲು ಇವು ಉಪಯುಕ್ತ. ಕಚೇರಿಗಳಲ್ಲೂ ವೇಟಿಂಗ್ ಸೀಟ್‌ಗಳಾಗಿ ಇದನ್ನು ಬಳಸಿಕೊಳ್ಳಬಹುದು.ಒಟ್ಟೊಮನ್ ವೈವಿಧ್ಯತೆ

ಒಟ್ಟೊಮನ್‌ಗಳು ನಿಮ್ಮ ಅಲಂಕಾರಿಕ ಕೌಶಲ್ಯಗಳನ್ನು ಉತ್ತಮಗೊಳಿಸುತ್ತವೆ. ವಿವಿಧ ನಮೂನೆಯ ವಿವಿಧ ವಿನ್ಯಾಸಗಳನ್ನು ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯಲ್ಲಿ ಲಭ್ಯವಿರುವ ಇವು ರೂಪು, ವಿನ್ಯಾಸ ಮತ್ತು ರಚನೆಗಳಲ್ಲಿ ವೈವಿಧ್ಯತೆ ಹೊಂದಿದೆ. ಚರ್ಮ, ನಾರು, ಹತ್ತಿಬಟ್ಟೆಗಳಿಂದಲ್ಲೂ ಒಟ್ಟೊಮನ್‌ಗಳನ್ನು ತಯಾರಿಸಲಾಗುತ್ತಿದೆ. ಕಸೂತಿ ಕೆಲಸಗಳಿಂದ ಶೃಂಗಾರಗೊಂಡ ಒಟ್ಟೊಮನ್‌ಗಳು ಸಾಂಪ್ರದಾಯಿಕ ನೋಟವನ್ನು ನೀಡುತ್ತವೆ.ಇವುಗಳಲ್ಲಿ ಬಣ್ಣದ ವೈವಿಧ್ಯತೆಯೂ ಇದೆ. ಮನೆಯಲ್ಲಿರುವ ಇತರ ವಸ್ತುಗಳೊಂದಿಗೆ ಹೊಂದಿಕೊಳ್ಳುವಂತಹ ಬಣ್ಣ ಇರುವ ಒಟ್ಟೊಮನ್ ಆಯ್ಕೆಯಿಂದ ಮನೆಯೂ ಸುಂದರವಾಗಿ ಗೋಚರಿಸುತ್ತದೆ. ಆಧುನಿಕ ಶೈಲಿಗೆ ಹೊಂದಿಕೊಳ್ಳಲು ಚರ್ಮದಿಂದ ತಯಾರಾದ ಒಟ್ಟೊಮನ್ ಸೂಕ್ತವಾಗಿದ್ದು, ಇದು ತುಂಬಾ ಆರಾಮದಾಯಕವೂ ಹೌದು. ಬಹಳ ಕಾಲ ಉಳಿಯುವ ಇವು ಸೊಗಸಾಗಿ ಕಾಣುತ್ತದೆ ಮತ್ತು ಕಲುಷಿತಗೊಳ್ಳುವುದೂ ಇಲ್ಲ.ಹೆಚ್ಚಿನ ಸ್ಥಳಾವಕಾಶ ಇದ್ದಲ್ಲಿ ಬೆಂಚಿನಾಕಾರದ ಒಟ್ಟೊಮನ್ ಆಯ್ಕೆ ಸೂಕ್ತ. ನಿಮ್ಮಲ್ಲಿಯ ಸೃಜನಾತ್ಮಕತೆ ಬಳಸಿ ವಿವಿಧ ಬಗೆಯ ಒಟ್ಟೊಮನ್‌ಗಳನ್ನು ಮನೆಯಲ್ಲಿ ಸುಂದರವಾಗಿ ಅಲಂಕರಿಸಿ.ಅಲಂಕಾರ, ಸಂಗ್ರಹಣೆ, ಕುಳಿತುಕೊಳ್ಳಲು, ಆಟವಾಡಲು ಹೀಗೆ ಯಾವ ಉದ್ದೇಶಕ್ಕಾಗಿ ಒಟ್ಟೊಮನ್ ಅವಶ್ಯಕತೆ ಇದೆ ಎಂದು ನಿರ್ಧರಿಸಿಕೊಳ್ಳಿ. ಅದು ಸುಲಭವಾಗಿ ನಿಮ್ಮ ಮನೆಯಲ್ಲಿರುವ ಪ್ರಾಂಗಣಕ್ಕೆ ಹೊಂದಿಕೊಳ್ಳುವಂತಿರಬೇಕು. ಹೀಗೆ ಅವಶ್ಯಕತೆ ಈಡೇರಿಸುವ ಚೆಂದದ ಒಟ್ಟೊಮನ್‌ನ್ನು ಸುಂದರ ಮನೆಗೆ ತಂದು ಅಲಂಕರಿಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.