ಸಿರುಗುಪ್ಪ: ‘ಕರ್ನಾಟಕದಲ್ಲಿ ಸಂಗೀತ ಕಲೆಯನ್ನು ಉಳಿಸಿ- ಬೆಳೆಸಿದ ಮಹಾನ್ ಚೇತನ ಪುಟ್ಟರಾಜ ಗವಾಯಿಗಳು’ ಎಂದು ಅವರ ಹಿರಿಯ ಶಿಷ್ಯ ಮಲ್ಕಾಪುರ ದೊಡ್ಡಬಸವಾರ್ಯ ಗವಾಯಿಗಳು ಸ್ಮರಿಸಿದರು.

ಪಟ್ಟಣದ ಶಾಂತಿನಿಕೇತನ ವಿದ್ಯಾಮಂದಿರದಲ್ಲಿ ಲಿಂಗೈಕ್ಯ ಪಂ.ಪುಟ್ಟರಾಜ ಗವಾಯಿಗಳ ಹುಟ್ಟುಹಬ್ಬದ ಅಂಗವಾಗಿ ಗುರುವಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ರಾಜ್ಯದ ನಾನಾ ಮೂಲೆಗಳ ಅಂಧ, ಅನಾಥ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಂಗೀತವನ್ನು ಧಾರೆ ಎರೆದು, ಅವರಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಗವಾಯಿಗಳು ಆ ಮಕ್ಕಳ ಬಾಳಿಗೆ ದಾರಿದೀಪವಾಗಿದ್ದರು ಎಂದರು.

ಸಂಗೀತ ಪಾಠಶಾಲೆ ತೆರೆಯುವ ಮೂಲಕ ಸಹಸ್ರಾರು ಜನ ಉಚಿತ ಸಂಗೀತ, ಕೀರ್ತನೆ, ನಟನೆಗಳನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಟ್ಟ ಮಹಾ ಪುರುಷರು ಅವರು ಎಂದು ಸಂಸ್ಥೆಯ ಅಧ್ಯಕ್ಷ ಡಾ.ತಿಪ್ಪೇರುದ್ರಪ್ಪ ಸ್ಮರಿಸಿದರು.

ಇದರ ಅಂಗವಾಗಿ ಹನುಮಂತ ರಾವ್ ಮಳ್ಳಿ, ಜೆ.ನಾಗೇಶ್ವರಾವ್, ರಾಘವೇಂದ್ರ ಗಂಗಾವತಿ, ಪ್ರಹ್ಲಾದ್ ದಿಗ್ಗಾವಿ, ಎನ್.ಎಂ. ಜಗದೀಶ ಸಂಗೀತ ಗಾಯನ ನಡೆಸಿಕೊಟ್ಟರು. ಎನ್.ಜಿ. ಬಸವರಾಜಪ್ಪ, ಕೆ.ಕೃಷ್ಣ, ಆರ್. ಬಸವಲಿಂಗಪ್ಪ, ಶಿವಶಂಕರ ರಾವ್, ಶಿವಕುಮಾರ್ ಬಳಿಗಾರ್, ನಾಗಭೂಷಣಪ್ಪ, ಬಿ.ಚನ್ನಪ್ಪ, ಎಚ್.ಮುರಳೀಧರ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.