ನಗರದ ಕಾಟನ್ಪೇಟೆ ಪೊಲೀಸ್ ಠಾಣೆಯ ಸರಹದ್ದಿಗೆ ಬರುವ ಬಕ್ಷಿ ಗಾರ್ಡನ್, ಪ್ಲವರ್ ಗಾರ್ಡನ್, ಆಂಜನಪ್ಪ ಗಾರ್ಡನ್, ಜೈಭೀಮ್ನಗರ, ದೊರೆಸ್ವಾಮಿನಗರ, ರಾಣಾಸಿಂಗ್ಪೇಟೆ ಮತ್ತು ಕಾಟನ್ಪೇಟೆಯ ಗಲ್ಲಿಗಳಲ್ಲಿ ಪುಡಿ ರೌಡಿಗಳ ಅಟ್ಟಹಾಸ ವಿಪರೀತವಾಗಿದೆ.

ಕೂಲಿ ಕೆಲಸ ಮಾಡುವ ಬಡಜನರೆ ಹೆಚ್ಚಾಗಿರುವ ಸದರಿ ಪ್ರದೇಶಗಳಲ್ಲಿ ಪುಂಡ ಪೋಕರಿಗಳು ದುಡಿದು ಬಂದ ಜನರನ್ನು ನೆಮ್ಮದಿಯಿಂದಿರಲು ಬಿಡುತ್ತಿಲ್ಲ.

ಹಗಲು ರಾತ್ರಿಯೆನ್ನದೆ ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ವಿಚಿತ್ರ ಧ್ವನಿಗಳಲ್ಲಿ ಕೇಕೆ ಹಾಕಿ ನಗುವುದು, ದಾರಿಹೋಕರ ಮೈಮೇಲೆ ಬೀಳುವಂತೆ ನಟಿಸುವುದು, ಇದ್ದಕ್ಕಿದ್ದಂತೆ ಅವರವರೇ ಬಡಿದಾಡಿಕೊಳ್ಳುವುದು, ಲಾಂಗು ಮಚ್ಚುಗಳನ್ನು ಝಳಪಿಸುತ್ತಾ ಗಲ್ಲಿಗಳಲ್ಲಿ ಓಡಾಡುವುದು ಮಾಡುತ್ತಿದ್ದಾರೆ.

ಭಾನುವಾರವಂತೂ ಕಂಠಪೂರ್ತಿ ಕುಡಿದು, ಕುಣಿದು ಕುಪ್ಪಳಿಸುತ್ತಾರೆ. ಇವರ ಹಾವಳಿಯಿಂದ ಜನ ಬೇಸತ್ತಿದ್ದಾರೆ. ಈ ಪುಡಿ ರೌಡಿಗಳ ಕೂಗಾಟ ಎಲ್ಲೆಡೆಯೂ ಕೇಳಿಸುತ್ತದೆ. ಆದರೆ ಕೂಗಳತೆಯ ದೂರದಲ್ಲಿರುವ ಪೊಲೀಸ್ ಠಾಣೆಯ ಕಿವಿಗೆ ಬೀಳುವುದೇ ಇಲ್ಲವೆ?

ಇನ್ನಾದರೂ ಪೊಲೀಸ್ ಇಲಾಖೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವರೆ? ಪುಂಡರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ಬಡಾವಣೆಯ ನಾಗರಿಕರು ಕೋರುತ್ತಿದ್ದೇವೆ. ನೊಂದ ಸಾರ್ವಜನಿಕರು

ತಾತ್ಕಾಲಿಕ ಬಸ್ ಷೆಲ್ಟರ್ ನಿರ್ಮಿಸಿ

ಬಸವನಗುಡಿ ಗಾಂಧಿಬಜಾರಿನ ಸಮೀಪ ಟಾಗೋರ್ ಪಾರ್ಕ್ ಬಳಿ ನಡೆಯುತ್ತಿರುವ ಅಂಡರ್ಪಾಸ್ ಕಾಮಗಾರಿಯಿಂದಾಗಿ ಇಡೀ ಗಾಂಧಿಬಜಾರಿನ ವಾತಾವರಣವೇ ಕಲುಷಿತವಾಗಿದೆ.

ಅಂಡರ್ಪಾಸ್ ಕಾರ್ಯವು 12 ತಿಂಗಳ ಗಡುವಿನದಾಗಿದ್ದರೂ ಈಗ 30 ತಿಂಗಳಾದರೂ ಮುಗಿಯುತ್ತಿಲ್ಲ. ಕೆ.ಆರ್. ರಸ್ತೆ ಮೂಲಕ ಓಡಾಡುತ್ತಿದ್ದ ಎಲ್ಲ ಬಸ್ಗಳು ಪೊಲೀಸ್ ಸ್ಟೇಷನ್ ರಸ್ತೆ ಪಕ್ಕ ಬರುವ ಮಾರ್ಕೆಟ್ ರಸ್ತೆಯಲ್ಲಿ ಓಡಾಡುತ್ತಿವೆ.

ಮಾರ್ಕೆಟ್ ರಸ್ತೆಯ ಎಲ್ಲ ಮನೆಗಳು ದೂಳಿನಿಂದ ಬಣ್ಣಗೆಟ್ಟಿವೆ. ಮನೆಯ ಕಿಟಕಿ ಬಾಗಿಲುಗಳನ್ನು ಸದಾ ಮುಚ್ಚಿರಲೇಬೇಕಾದ ಪರಿಸ್ಥಿತಿ ಬಂದಿದೆ.

ಈ ಮಾರ್ಕೆಟ್ನ ಪೊಲೀಸ್ ಸ್ಟೇಷನ್ ರಸ್ತೆ ಕೂಡುವ ರಸ್ತೆಯಲ್ಲಿ ಎಲ್ಲ ಬಸ್ ನಿಲ್ಲಲು ನಿಲುಗಡೆ ಇದೆ. ಬಸ್ಸಿಗಾಗಿ ಕಾಯುವವರಿಗೆ ತಾತ್ಕಾಲಿಕ (ಷೆಡ್) ಷೆಲ್ಟರ್ ಮಾಡಬಹುದಿತ್ತು. ಎರಡು ವರ್ಷಗಳಿಂದ ಜನರು ಮಳೆ ಬಿಸಿಲುಗಳಿಗೆ ಮೈಯೊಡ್ಡಿ ಬಸ್ ಕಾಯುತ್ತಾರೆ.

ವಯೋವೃದ್ಧರು, ಮಹಿಳೆಯರ ಪಾಡು ಹೇಳತೀರದಾಗಿದೆ. ಷೆಲ್ಟರ್ ಒದಗಿಸಿದರೆ ಅನುಕೂಲವಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುವರೇ? ಇನ್ನೆಷ್ಟು ದಿನ ಈ ಬವಣೆ?
ಶಾಂತಿಪ್ರಿಯ

ಮಿನಿ ಬಸ್ ವ್ಯವಸ್ಥೆ ಮಾಡಿ
ಮಾಗಡಿ ರಸ್ತೆಯಿಂದ ಅಂದರೆ ಪ್ರಸನ್ನ ವೃತ್ತದಿಂದ ಕುಷ್ಠರೋಗ ಆಸ್ಪತ್ರೆಯ ವೃತ್ತದ ನಡುವಿನ ರಸ್ತೆಯಲ್ಲಿ ಮೆಟ್ರೊ ಕಾಮಗಾರಿಯಿಂದಾಗಿ, ಕೆ.ಬಿ. ನಿಲ್ದಾಣಕ್ಕೆ ಬಸ್ ಸಂಚಾರ ನಿಂತಿದೆ, ಬಿನ್ನಿಮಿಲ್ ರೈಲ್ವೆ ಬ್ರಿಡ್ಜ್ ಅಡಿಯ ಮೋರಿ ಕಾಮಗಾರಿಯಿಂದಾಗಿ ಮಾರ್ಕೆಟ್ (ಕೃ.ರಾ.) ಬಸ್ ಸಂಚಾರವು ನಿಂತಿದೆ, ಈ ಕಾರಣದಿಂದಾಗಿ ಮಗಡಿ ರಸ್ತೆಯ ಅಸಂಖ್ಯಾತ ನಾಗರೀಕರಿಗೆ ಬೆಳಗಿನ ಕೆಲಸಕ್ಕೆ ಹೋಗಲು, ಮಕ್ಕಳಿಗೆ ಶಾಲೆಗೆ ಹೋಗಲು, ವಯೋವೃದ್ಧರ ಪ್ರಯಾಣಕ್ಕೂ ತುಂಬಾ ತೊಂದರೆಯಾಗಿದೆ.

ಆಟೊದವರು ದುಬಾರಿ ಹಣ ಕೇಳುತ್ತಾರೆ. ಬಿಎಂಟಿಸಿಯ ಅಧಿಕಾರಿಗಳು ತಕ್ಷಣವೇ ಮಾಗಡಿ ರಸ್ತೆಯ 11ನೇ (ಹನ್ನೊಂದು) ಕ್ರಾಸ್ನಿಂದ ತಿರುಗುವಂತೆ ಕೆಂ.ಬಿ. ನಿಲ್ದಾಣಕ್ಕೆ ಮಿನಿ ಬಸ್ ಸಂಚಾರ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ. ದಯಮಾಡಿ ಈ ಮನವಿಯನ್ನು ಪರಿಶೀಲಿಸಲು ಕೋರಿಕೆ.
ಮಾಗಡಿ ರಸ್ತೆ ನಾಗರೀಕರು

ಹೆರಿಗೆ ಆಸ್ಪತ್ರೆ ಇದೆ ಮಹಿಳಾ ವೈದ್ಯರಿಲ್ಲ
ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಒಂದು ಹೋಬಳಿ ಕೇಂದ್ರವಾಗಿದೆ. ಈ ಊರಿನ ಜನಸಂಖ್ಯೆ ಹದಿನೆಂಟು ಸಾವಿರವಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಹೆರಿಗೆ ಆಸ್ಪತ್ರೆ ಸಹ ಇದೆ.

ಹೆರಿಗೆ ಆಸ್ಪತ್ರೆಯಲ್ಲಿದ್ದ ಮಹಿಳಾ ವೈದ್ಯರು ವರ್ಗಾವಣೆ ಆಗಿ ಸುಮಾರು 5-6 ತಿಂಗಳು ಕಳೆದರೂ ಆ ಜಾಗಕ್ಕೆ ಬೇರೊಬ್ಬ ಮಹಿಳಾ ವೈದ್ಯರ ನೇಮಕವಾಗಿಲ್ಲ.

ಇದರಿಂದ ವರ್ತೂರು ಮತ್ತು ಸುತ್ತಲಿನ ಬಡವರಿಗೆ ತುಂಬಾ ಅನಾನುಕೂಲವಾಗುತ್ತಿದೆ. ಕೂಡಲೇ ಈ ಆಸ್ಪತ್ರೆಗೆ ಮಹಿಳಾ ವೈದ್ಯರನ್ನು ನೇಮಿಸಬೇಕೆಂದು ಗ್ರಾಮಸ್ಥರ ಪರವಾಗಿ ಕೋರಿಕೊಳ್ಳುತ್ತೇವೆ.
ವರ್ತೂರು ಎಂ. ಲಚ್ಚಪ್ಪ

ಬಸ್ ನಿಲುಗಡೆ ವ್ಯವಸ್ಥೆ ಮಾಡಿ
ಸುಮಾರು 20-30 ವರ್ಷಗಳಿಂದ ಅಯ್ಯಪ್ಪ ದೇವಸ್ಥಾನದ ಪಾರ್ಕಿನ ಬಳಿ ಬಸ್ಸುಗಳ ನಿಲುಗಡೆ ತಾಣ ಇತ್ತು. ಈ ದೇವಸ್ಥಾನದ ಮುಂಭಾಗದಲ್ಲಿ ಅಂಡರ್ಪಾಸು ಮಾಡುವ ಸಮಯದಲ್ಲಿ ಬಸ್ಸುಗಳು ಬರುತ್ತಿರಲಿಲ್ಲ.

ಈಗ ಅಂಡರ್ಪಾಸು ಕೆಲಸ ಮುಗಿದು ಒಂದು ವರ್ಷ ಆಗಿದೆ. ಎಲ್ಲಾ ಬಸ್ಸುಗಳು ಅಂಡರ್ಪಾಸ್ನಲ್ಲಿಯೇ ಹೋಗುತ್ತವೆ. ಆದ್ದರಿಂದ ಬಸ್ಸಿಗೆ ಬರುವ ಸಾರ್ವಜನಿಕರು, ವಿದ್ಯಾರ್ಥಿಗಳು ಸುಮಾರು ಒಂದು ಕಿಲೋಮೀಟರ್ ದೂರ (ಅಂದರೆ ಮಡಿವಾಳ ಪೊಲೀಸ್ ಸ್ಟೇಷನ್ ಹತ್ತಿರ ಇಲ್ಲದಿದ್ದರೆ ಸೈಂಟ್ ಜಾನ್ಸ್ ಆಸ್ಪತ್ರೆ ಕ್ವಾರ್ಟರ್ಸ್ ಹತ್ತಿರ) ಹೋಗಬೇಕಾಗುತ್ತದೆ.

ಮುಂದೆ ಎಸ್.ವಿ. ಆಸ್ಪತ್ರೆ ಬಳಿ 50+50 ಅಡಿಗಳ ಜೋಡಿ ರಸ್ತೆ ಇದೆ, ಇಲ್ಲಿ ಬಸ್ಸು ತಂಗುದಾಣ ಮಾಡಬಹುದು. ಮೊದಲು ಇದ್ದ ಹಾಗೆಯೇ ಕೆಂಪೇಗೌಡ ಬಸ್ ನಿಲ್ದಾಣ, ಸಿಟಿ ಮಾರ್ಕೆಟ್, ಶಿವಾಜಿನಗರದ ಕಡೆ ಹೋಗಲು ಬಸ್ಸುಗಳ ತಂಗುದಾಣಕ್ಕೆ ಅನುಕೂಲ ಮಾಡಿಕೊಡಬೇಕಾಗಿ ನಮ್ಮೆಲ್ಲರ ಮನವಿ.
ನೊಂದ ಸಾರ್ವಜನಿಕರು

ಇದೆಂಥಾ ವಜ್ರ ಸೇವೆ?
ವಜ್ರ ವಾಹನಲ್ಲಿ ಫೆ.26 ರಂದು ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ ಸಿ.ವಿ.ರಾಮನ್ ನಗರದ ಬಸ್ನಲ್ಲಿ ಸಂಚರಿಸುತ್ತಿದ್ದೆ. (ವಜ್ರ ಸಂಖ್ಯೆ ಕೆಎ-01 ಎಫ್ಎ 4595; ಘಟಕ-13) ಶ್ರಿನಗರದಿಂದ ಬನಶಂಕರಿಗೆ ಮಾರ್ಗ ಮಧ್ಯದಲ್ಲಿ ಸದರಿ ವಾಹನದ ಚಾಲಕರು ಬನಶಂಕರಿ ಬಸ್ ನಿಲ್ದಾಣಕ್ಕೆ ಹೋಗಲೇ ಇಲ್ಲ.

ಬನಶಂಕರಿ ಹುಣಸೆಮರದ 40ನೇ ಕ್ರಾಸ್ 7ನೇ ಬ್ಲಾಕ್ ಪ್ರಭಾ ನೇತ್ರಾಲಯದ ಬಳಿಯೇ ಪ್ರಯಾಣಿಕರನ್ನು ಇಳಿಸಿ ಹೋಗಿದ್ದಾರೆ. ಸಾಮಾನ್ಯ ಬಸ್ನಲ್ಲಿ 13 ರೂ.ಗಳ ಟಿಕೆಟ್ ಪಡೆದರೂ ನಿಗದಿತ ನಿಲ್ದಾಣದಲ್ಲಿ ನಿಲ್ಲಿಸುತ್ತಾರೆ.

ವಜ್ರಕ್ಕೆ ದುಬಾರಿ ದರ ತೆತ್ತು (30 ರೂ.) ಪ್ರಯಾಣಿಸಿದರೂ ಅನಾನುಕೂಲ ತಪ್ಪಲಿಲ್ಲ. ಇಂಥ ನಿರ್ಲಕ್ಷ್ಯವನ್ನು ಮನ್ನಿಸಬಹುದೆ? ಈ ಸಿಬ್ಬಂದಿಯ ಬಗ್ಗೆ ಮೇಲಧಿಕಾರಿಗಳು ಸಮಜಾಯಿಷಿ ನೀಡಬಲ್ಲರೆ?
ನೊಂದ ಪ್ರಯಾಣಿಕ

ಲಂಚಾವತಾರ ನಿಲ್ಲಿಸಿ
ಬಾಪೂಜಿನಗರ 2ನೇ ಹಂತದಲ್ಲಿ 4ನೇ ಮುಖ್ಯ ರಸ್ತೆಯಲ್ಲಿರುವ ಕಾಮಧೇನು ನ್ಯಾಯಬೆಲೆ ಅಂಗಡಿಯಲ್ಲಿ ಸೀಮೆಎಣ್ಣೆ, ಅಕ್ಕಿ, ಅಕ್ರಮವಾಗಿ ಬ್ಲಾಕ್ನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ಅಂಗಡಿಯವರು ಗ್ರಾಹಕರ ಜೊತೆ ಕೀಳಾಗಿ ವರ್ತಿಸುತ್ತಾರೆ.

ಇಲ್ಲಿಗೆ ಬರುವ ಗ್ರಾಹಕರು ಅಕ್ಕಿ, ಗೋಧಿ, ಅಥವಾ ಸಕ್ಕರೆ ಖರೀದಿಸಿ 100 ರೂ. ಹಣ ಕೊಟ್ಟರೆ ಉಳಿದ ಚಿಲ್ಲರೆ ಹಣಕ್ಕೆ ಸೂಪ್, ಸಬೀನ ತೆಗೆದುಕೊಳ್ಳಿ ಎಂದು ಬಲವಂತ ಮಾಡುತ್ತಾರೆ.

ಚಿಲ್ಲರೆ ಕೊಡಿ ಎಂದರೇ ಚಿಲ್ಲರೆ ಇಲ್ಲವೆಂದು ಕೋಪದಿಂದ ವರ್ತಿಸುತ್ತಾರೆ. ಈ ತರಹದ ಸುಲಿಗೆ ಪ್ರತಿಯೊಬ್ಬ ಗ್ರಾಹಕರ ಬಳಿಯೂ ನಡೆಯುತ್ತಿದೆ. ಇದೇ ರೀತಿ ಮುಂದುವರಿದರೆ ಗ್ರಾಹಕರ ಗತಿ ಏನು? ಆದ್ದರಿಂದ ಸಂಬಂಧಪಟ್ಟವರೂ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಈ ಭಾಗದ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಮನವಿ.
ಗೋವಿಂದಪ್ಪ

ಹಾಪ್ಕಾಮ್ಸ ಮಳಿಗೆ ಆರಂಭಿಸಿ
ವಿಧಾನಸೌಧ ಬಳಿಯ ಬಹು ಅಂತಸ್ತು ಕಟ್ಟಡ (1 ರಿಂದ 5 ಹಂತಗಳು)ದಲ್ಲಿ ಸಚಿವಾಲಯದ ಬಹುತೇಕ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು ಅಲ್ಲಿ ಎಲ್ಲಾ ಸೌಕರ್ಯಗಳಿವೆ.

ಆದರೆ ಹಾಪ್ಕಾಮ್ಸ ಹಣ್ಣು/ತರಕಾರಿ ಮಳಿಗೆ ಮಾತ್ರ ಇಲ್ಲ. ಕೆಎಸ್ಡಿಎಲ್ಎಸ್ ಸೋಪು ಸಹ ತನ್ನ ಮಳಿಗೆಯನ್ನು ಈಚೆಗೆ ಆರಂಭಿಸಿದೆ. ಹಾಪ್ಕಾಮ್ಸ ಮಳಿಗೆಯನ್ನೂ ಪ್ರಾರಂಭಿಸಿದಲ್ಲಿ ಬಹಳ ಉಪಕಾರವಾಗುತ್ತದೆ.
ರಾಂನಗರ ದೇವ್ರಾಜ್

ಕೆಂಪು ಬಣ್ಣದ ಅಂಚೆ ಡಬ್ಬ ಇರಲಿ
ಕಮಾಕ್ಯ ಬಡಾವಣೆಯಲ್ಲಿರುವ ಟ್ಯಾಕ್ಸ್ ಕಛೇರಿ ಪಕ್ಕ (ರಿಂಗ್ರಸ್ತೆ) ಅಂಚೆ ಡಬ್ಬವನ್ನಿರಿಸಲಾಗಿದೆ. ದೂರದಿಂದ ನೋಡಿದರೆ ಬಿಬಿಎಂಪಿಯ ಕಸದ ಡಬ್ಬದಂತೆ ಕಾಣುತ್ತದೆ.

ಅಂಚೆ ಡಬ್ಬ ಕಾಣದಂತೆ ಜಾಹೀರಾತಿನ ಚೀಟಿಗಳನ್ನು ಅಂಟಿಸಲಾಗಿದೆ. ಪತ್ರಗಳನ್ನು ತೆಗೆಯುವ ಸಮಯ ಕೂಡಾ ನಮೂದಿಸಿಲ್ಲ. ಕೆಂಪು ಬಣ್ಣದ ಅಂಚೆ ಡಬ್ಬ ಇಲ್ಲಿಡಲು ಸಾಧ್ಯವೇ?
ಬೆಳ್ಳಾವೆ ರಮೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.