ಭಾನುವಾರ, ಮೇ 9, 2021
18 °C

ಪುರಸಭೆ ಆಡಳಿತಾಧಿಕಾರಿ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಪಟ್ಟಣದಲ್ಲಿ ಕುಡಿಯುವ ನೀರು ಹಾಗೂ ಇನ್ನಿತರ ಮೂಲಸೌಲಭ್ಯಗಳಿಲ್ಲದೆ ಬಡಾವಣೆಯ ಜನತೆ ಪರಿತಪ್ಪಿಸುತ್ತಿದ್ದು ಪುರಸಭೆ ಆಡಳಿತಾಧಿಕಾರಿ ಸಹಾಯಕ ಆಯುಕ್ತ(ಎ.ಸಿ) ಬಿ.ಪಿ.ವಿಜಯ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿದ್ದಾರೆ. ಪುರಸಭೆ ಆಡಳಿತ ಸಂಪೂರ್ಣವಾಗಿ ನಿಷ್ಕೃಿಯವಾಗಿದೆ.  ಎಂದು ಕರ್ನಾಟಕ ಜನತಾ ಪಕ್ಷದ ಪುರಸಭೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪುರಸಭೆ ಮುಖ್ಯಾಧಿಕಾರಿಯವರು ಪಟ್ಟಣದಲ್ಲಿ ಕುಡಿಯುವ ನೀರಿನ ಬಗ್ಗೆ ಯಾವುದೇ ಸಮಸ್ಯೆಯಿಲ್ಲವೆಂದು  15 ದಿನಗಳ ಹಿಂದೆ ವರದಿ ನೀಡಿದ್ದರು. ಇದರಿಂದ ರೊಚ್ಚಿಗೆದ್ದ ಸದಸ್ಯರು ನೇರವಾಗಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಜಿಲ್ಲಾಧಿಕಾರಿ ದೂರವಾಣಿಯ ಮೂಲಕ ಸಮಸ್ಯೆಗೆ ಸ್ಪಂದಿಸುವಂತೆ ಆಡಳಿತಾಧಿಕಾರಿಗೆ ನಿರ್ದೇಶನ ನೀಡಿದ್ದರು.  ಎ.ಸಿಯವರು ಪಟ್ಟಣಕ್ಕೆ ಆಗಮಿಸಿ ಹಲವಾರು ಬಡಾವಣೆಗಳಿಗೆ ಸಂಚರಿಸಿ ಖುದ್ದಾಗಿ ಸಮಸ್ಯೆಗಳನ್ನು ಕಂಡು ಒಂದು ವಾರದಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ನಮಗೆ ಭರವಸೆ ನೀಡಿದ್ದರು.ನಿಗದಿಪಡಿಸಿದ ಗಡವು ಮುಗಿದು ಹೋಗಿದೆ. ಸಮಸ್ಯೆಗಳು ಮತ್ತಷ್ಟು ಉಲ್ಬಣಿಸಿವೆ. ಮೂರು ತಿಂಗಳಿಂದ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಆಯುಕ್ತರು ಕರ್ತವ್ಯ ನಿರ್ವಹಿಸುವಲ್ಲಿ ಮುಗ್ಗರಿಸಿದ್ದಾರೆ ಎಂದು ಆರೋಪಿಸುತ್ತಾರೆ ಸದಸ್ಯ ವಸಂತ ಸುರಪುರಕರ್.ಆಡಳಿತಾಧಿಕಾರಿಯು ಜನಪ್ರತಿನಿಧಿಯಂತೆ ಭರವಸೆ ನೀಡುತ್ತಿರುವುದು ಸರಿಯಲ್ಲ.ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಎರಡು ದಿನಕ್ಕೊಮ್ಮೆ ಅಲ್ಪ ಪ್ರಮಾಣದ ನಲ್ಲಿಯ ನೀರು ಬರುತ್ತಲಿದೆ. ಇದು ಯಾತಕ್ಕೂ ಸಾಕಾಗುತ್ತಿಲ್ಲ. ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ಮುಂಗಾರು ಮಳೆ ಆರಂಭವಾಗಿದೆ.ಹಲವಾರು ಬಡಾವಣೆಗಳಲ್ಲಿ ತ್ಯಾಜ್ಯವಸ್ತುಗಳನ್ನು ವಿಲೇವಾರಿ ಮಾಡದೆ ನಿರ್ಲಕ್ಷ್ಯವಹಿಸಿದ್ದರಿಂದ ರೋಗದ ಭೀತಿ ಜನತೆಯನ್ನು ಆವರಿಸಿದೆ. ಅಲ್ಲದೆ ಡೆಂಗೆ ಜ್ವರದ ಆತಂಕವು ನಿವಾಸಿಗಳಿಗೆ ಕಾಡುತ್ತಲಿದೆ. ಉನ್ನತ ಸ್ಥಾನದಲ್ಲಿರುವ ಆಡಳಿತಾಧಿಕಾರಿಯ ನಿರ್ಲಕ್ಷ್ಯದ ವರ್ತನೆ ಸರಿಯಲ್ಲವೆಂದು ಸದಸ್ಯ ದೊಡ್ಡ ಮಾನಯ್ಯ ದೂರಿದ್ದಾರೆ.ಕುಡಿಯುವ ನೀರಿಗಾಗಿ ತುರ್ತುನಿಧಿಯೆಂದು 30 ಲಕ್ಷ ಅನುದಾನವಿದೆ. ನೀರಿನ ಸಮಸ್ಯೆಯನ್ನು ಎದುರಿಸುವ ಬಡಾವಣೆಗಳಿಗೆ  ನೂತನ ಬೊರವೆಲ್ ಕೊರೆಯಿಸಿ ನೀರು ಒದಗಿಸಬಹುದಾಗಿತ್ತು.ಅದೆಲ್ಲವನ್ನು ಬಿಟ್ಟು 15ಲಕ್ಷ ವೆಚ್ಚದಲ್ಲಿ ಎರಡು ಹಳೆಯ ಬಾವಿಗಳ ಹೂಳು ಎತ್ತವ ಕೆಲಸದಲ್ಲಿ ಪುರಸಭೆ ಮುಖ್ಯಾಧಿಕಾರಿ ನಿರತರಾಗಿದ್ದಾರೆ. ಹೂಳು ತೆಗೆದು ಜನತೆಗೆ ನೀರು ಒದಗಿಸುವುದು ಯಾವಾಗ ?.ಲಾಭದಾಯಕ ಕೆಲಸಗಳನ್ನು ಕೈಗೆತ್ತಿಕೊಂಡು ಪಟ್ಟಣದ ನಾಗರಿಕರ ಸಮಸ್ಯೆಗಳ ಜೊತೆ ಅಧಿಕಾರಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಸದಸ್ಯ ಬಸವರಾಜ ಆನೇಗುಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಡಾವಣೆಯ ಎಲ್ಲಾ ಪ್ರದೇಶದಲ್ಲಿ ಚರಂಡಿಯನ್ನು ಸ್ವಚ್ಛಗೊಳಿಸಿ. ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಬೇಕು. ಡೆಂಗೆ ಜ್ವರದ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಇಲ್ಲದಿದ್ದರೆ ಪುರಸಭೆಗೆ ಬೀಗ ಜಡಿದು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಸದಸ್ಯರಾದ ಸಂತೋಷ ಗುತ್ತೇದಾರ, ಶೇಖ ಲಾಡ್ಲೆಸಾ, ಸಲೀಮಾಬೇಗಂ ಖುರೇಶಿ, ಲಲಿತ ಮಹಾದೇವಯ್ಯ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.