ಶನಿವಾರ, ಜನವರಿ 18, 2020
19 °C

ಪುಸ್ತಕಗಳಲ್ಲೇ ಕ್ರಿಸ್ಮಸ್‌ ಟ್ರೀ, ಏಸುಕ್ರಿಸ್ತನ ಶಿಲುಬೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಸ್ತಕಗಳಲ್ಲೇ ಕ್ರಿಸ್ಮಸ್‌ ಟ್ರೀ, ಏಸುಕ್ರಿಸ್ತನ ಶಿಲುಬೆ

ರೆಸಿಡೆನ್ಸಿ ರಸ್ತೆಯಲ್ಲಿರುವ ಸಪ್ನಾ ಮಳಿಗೆಯ ಉದ್ಯೋಗಿ ಹಾಗೂ ಹವ್ಯಾಸಿ ಕಲಾವಿದ ಅನಿಲ್‌ ಅವರು ಕ್ರಿಸ್ಮಸ್‌ ಹಬ್ಬಕ್ಕೆಂದು ಪುಸ್ತಕಗಳಲ್ಲೇ ಕ್ರಿಸ್ಮಸ್‌ ಟ್ರೀ ಹಾಗೂ ಏಸುಕ್ರಿಸ್ತನ ಶಿಲುಬೆ ತಯಾರಿಸಿದ್ದಾರೆ.ಮಳಿಗೆಯ ದ್ವಾರ ಬಾಗಿಲಿನಲ್ಲಿ ಪ್ರದರ್ಶನಕ್ಕೆ ಇರಿಸಿರುವ ಈ ಎರಡೂ ಕಲಾಕೃತಿಗಳು ಈಗ ಗ್ರಾಹಕರನ್ನು ಆಕರ್ಷಿಸುತ್ತಿವೆ. ಅಂದಹಾಗೆ, 10 ಅಡಿ ಎತ್ತರ, 3.5 ಅಡಿ ಅಗಲ ಇರುವ ಈ ಪುಸ್ತಕ ಕಲಾಕೃತಿಗಳ ರಚನೆಗೆ ಅನಿಲ್‌ ತೆಗೆದುಕೊಂಡ ಸಮಯ 4,550 ನಿಮಿಷಗಳು ಮತ್ತು ಬಳಸಿಕೊಂಡ ಪುಸ್ತಕಗಳ ಸಂಖ್ಯೆ 480.

ಪ್ರತಿಕ್ರಿಯಿಸಿ (+)