ಶುಕ್ರವಾರ, ಜೂನ್ 18, 2021
21 °C

ಪುಸ್ತಕ ಮುಟ್ಟುಗೋಲಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೆಳಜಾತಿ ಮತ್ತು ಶೋಷಣೆಗೆ ಒಳಗಾದ ಸಮುದಾಯ­ಗಳ ಪ್ರಸಿದ್ಧ ವ್ಯಕ್ತಿಗಳನ್ನು  ಮೇಲ್ಜಾತಿಗೆ ಸೇರಿದವರು ಎಂದು ಬಿಂಬಿಸುವ ಕೆಲಸವಾಗುತ್ತಿದೆ’ ಎಂದು ಭಾರತೀಯ ವಾಲ್ಮೀಕಿ ಧರ್ಮ ಸಮಾಜದ ರಾಜ್ಯಾ­ಧ್ಯಕ್ಷ ಸಂದೇಶ್ ಆರೋಪಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ­ನಾಡಿದ ಅವರು, ‘ಕೆಳಜಾತಿ­ಗಳಲ್ಲಿ, ಬೇಡ ಸಮುದಾಯದಲ್ಲಿ ಮಹ­­ನೀ­ಯರು ಜನಿಸಬಾರದೆ?  ವಾಲ್ಮೀಕಿ ಬ್ರಾಹ್ಮಣ ಎನ್ನುವುದಕ್ಕೆ ಆಧಾ­ರ­ವೇನು?ಇದು ಶೋಷಿತರಿಗೆ ಜ್ಞಾನ­ವನ್ನು ನಿರಾಕರಿಸುತ್ತಿರುವ  ಮತ್ತೊಂದು ವಿಧಾನ’ ಎಂದರು.

‘ಅಂಕಣಕಾರ  ಡಾ.ಕೆ.ಎಸ್. ನಾರಾಯಣಚಾರ್ಯ ಅವರು ಬರೆದಿರುವ ‘ವಾಲ್ಮೀಕಿ ಯಾರು?’ ಪುಸ್ತಕದಲ್ಲಿ ವಾಲ್ಮೀಕಿಯನ್ನು ಬ್ರಾಹ್ಮಣ ಜಾತಿಯ ಮಗು,  ನದಿಯ ಬಳಿಯಿಂದ ಮಗುವನ್ನು ಹದ್ದು ಹೊತ್ತುಕೊಂಡು ಹೋಗಿ ಬೇಡರ ಬಳಿ ಬಿಟ್ಟಿತು ಎಂದು ಬರೆದಿದ್ದಾರೆ. ಇದನ್ನು ನಂಬಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.ಸಂಘಟನೆಯ  ಸದಸ್ಯ ದೇವರಾಜ್ ಮಾತನಾಡಿ ‘ಸಮರ್ಥ ಆಧಾರ­ಗಳೊಂದಿಗೆ ಚರ್ಚೆಗೆ ಬರುವುದಾದರೆ ನಾವು ಚರ್ಚೆಗೆ ಸಿದ್ಧರಿದ್ದೇವೆ.

ಅದರ ಹೊರತಾಗಿ ಪುರಾಣಗಳನ್ನು ತಿರುಚುವ ಕೆಲಸ ಮಾಡಬಾರದು. ಸರ್ಕಾರ ಪುಸ್ತಕವನ್ನು ಮುಟ್ಟುಗೋಲು ಹಾಕಿ­ಕೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯ­ದಾದ್ಯಂತ ಹೋರಾಟ ಮಾಡುತ್ತೇವೆ’ ಎಂದು ದೇವರಾಜ್ ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.