ಪೂನಿಯಾ ಉತ್ತಮ ಪ್ರದರ್ಶನ

ಗುರುವಾರ , ಜೂಲೈ 18, 2019
23 °C

ಪೂನಿಯಾ ಉತ್ತಮ ಪ್ರದರ್ಶನ

Published:
Updated:

ಲಂಡನ್ (ಪಿಟಿಐ): ಭಾರತದ ಡಿಸ್ಕಸ್ ಥ್ರೋ ಸ್ಪರ್ಧಿ ಕೃಷ್ಣಾ ಪೂನಿಯಾ ಇಲ್ಲಿ ನಡೆಯುತ್ತಿರುವ ವುಡ್‌ಫ್ರಾಡ್ ಗ್ರೀನ್ ಓಪನ್ ಗ್ರೇಡೆಡ್ ಕ್ರೀಡಾಕೂಟದಲ್ಲಿ 63.16ಮೀಟರ್ಸ್‌ ದೂರ ಎಸೆಯುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ.

ಲಂಡನ್ ಒಲಿಂಪಿಕ್ಸ್ ಆರಂಭವಾಗಲು ಕೆಲವೇ ದಿನ ಬಾಕಿ ಇರುವುದಿರಂದ ಪೂನಿಯಾ ಅವರಿಂದ ಈ ಸಾಧನೆ ಮೂಡಿಬಂದಿರುವುದು ಅವರ ಆತ್ಮವಿಶ್ವಾಸವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ. ವುಡ್‌ಫ್ರಾಡ್ ಗ್ರೀನ್ ಮತ್ತು ಎಸೆಕ್ಸ್ ಮಹಿಳಾ ಅಥ್ಲೆಟಿಕ್ ಕ್ಲಬ್‌ನಲ್ಲಿ ಮಂಗಳವಾರ ನಡೆದ ಕೂಟದಲ್ಲಿ ಪೂನಿಯಾ ಈ ಸಾಧನೆ ಮಾಡಿದರು.

`ಉತ್ತಮ ಪ್ರದರ್ಶನ ನೀಡಿದ ಪೂನಿಯಾ ಅವರಿಗೆ 65ಮೀ. ದೂರ ಎಸೆಯುವ ಸಾಮರ್ಥ್ಯವಿದೆ. ಈ ಟೂರ್ನಿಯಲ್ಲಿ ಡಿಸ್ಕ್ ಎಸೆದ ರೀತಿ ಅತ್ಯುತ್ತಮವಾಗಿತ್ತು. ಒಲಿಂಪಿಕ್ಸ್‌ನಲ್ಲೂ ಇದೇ ರೀತಿ ಪ್ರದರ್ಶನ ನೀಡುವುದು~ ಎಂದು ಅವರ ಪತಿ ಹಾಗೂ ಕೋಚ್ ಕೂಡಾ ಆಗಿರುವ ವೀರೇಂದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಆಗಸ್ಟ್ ಮೂರರಂದು ಡಿಸ್ಕಸ್ ಥ್ರೋ ಸ್ಪರ್ಧೆಗಳು ಆರಂಭವಾಗಲಿದ್ದು, ಅಲ್ಲಿಯವರೆಗೂ ಪೂನಿಯಾ ಸ್ಥಳೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry