ಸೋಮವಾರ, ಮೇ 17, 2021
25 °C

ಪೆಟ್ರೋಲ್ ಖರೀದಿ: ಪಾಕ್ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಭಾರತದಿಂದ ಪೆಟ್ರೋಲ್ ಮತ್ತು ವಿದ್ಯುತ್ ಆಮದು ಮಾಡಿಕೊಳ್ಳುವ ಸಂಬಂಧ ಮಾತುಕತೆ ನಡೆಸಲು ಇರುವ ಎಲ್ಲ ಸಾಧ್ಯತೆಗಳನ್ನೂ ಪಾಕಿಸ್ತಾನ ಪರಿಶೀಲಿಸುತ್ತಿದೆ.ಸದ್ಯ ವಿದ್ಯುತ್ ಕೊರತೆ ಮತ್ತಷ್ಟು ತೀವ್ರವಾಗಿದ್ದು, ಭಾರತದಿಂದ ಖರೀದಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಜತೆಗೆ ಪೆಟ್ರೋಲನ್ನೂ ದೇಶದ ಗಡಿ ಪ್ರದೇಶಗಳಿಗೆ ತರಿಸಿಕೊಳ್ಳುವ ಕುರಿತೂ ಚಿಂತನೆ ನಡೆದಿದೆ ಎಂದು ಭಾರತದಲ್ಲಿನ ಪಾಕ್ ರಾಯಭಾರಿ ಶಹೀದ್ ಮಲಿಕ್ ಸೋಮವಾರ ತಿಳಿಸಿದರು.

 

ಅಸೊಚಾಂನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಸುದ್ದಿಸಂಸ್ಥೆ ಜತೆ ಮಾತನಾಡಿದರು. ಕಳೆದ ವರ್ಷದ ಭಾರತದ ಡೀಸೆಲ್ ಆಮದಿಗೆ ಹಸಿರು ನಿಶಾನೆ ತೋರಿಸಿದ್ದ ಇಸ್ಲಾಮಾಬಾದ್, ಪೆಟ್ರೋಲ್ ಮತ್ತು ವಿದ್ಯುತ್ ಖರೀದಿಗೆ ನಿರ್ಬಂಧ ವಿಧಿಸಿತ್ತು. ಪಾಕಿಸ್ತಾನ ಈ ವರ್ಷಾಂತ್ಯದ ವೇಳೆಗೆ ಭಾರತವನ್ನು `ಪರಮಾಪ್ತ ರಾಷ್ಟ್ರ~ ಎಂದು ಘೋಷಿಸುವ ಸಂಭವವಿದೆ.ಹಾಗೆ ಆದಲ್ಲಿ ಉಭಯ ದೇಶಗಳ ನಡುವಿನ ವಾಣಿಜ್ಯ ವಹಿವಾಟು ಸಂಬಂಧ ವೃದ್ಧಿಯಾಗಿ ಎರಡೂ ದೇಶಗಳಿಗೂ ಲಾಭವಾಗಲಿದೆ ಎಂದರು. ಸದ್ಯ ಭಾರತದ 1209 ಸರಕುಗಳನ್ನು ಆಮದು ನಿರ್ಬಂಧ ಪಟ್ಟಿಗೆ ಪಾಕ್ ಸೇರಿಸಿದೆ. ಹಾಗಿದ್ದೂ, ಸದ್ಯ 13870 ಕೋಟಿ ರೂಪಾಯಿ ಮೊತ್ತದ(270 ಕೋಟಿ ಅಮೆರಿಕನ್ ಡಾಲರ್) ವಾಣಿಜ್ಯ ವಹಿವಾಟು ಉಭಯ ದೇಶಗಳ ನಡುವೆ ನಡೆದಿದೆ.ವಾಣಿಜ್ಯ ಸಚಿವ ಭೇಟಿ: ಪಾಕಿಸ್ತಾನದ ವಾಣಿಜ್ಯ ಸಚಿವ ಮಖ್ದೂಮ್ ಅಮಿನ್ ಫಾಹಿಮ್ ಅವರು 250 ಮಂದಿಯ ನಿಯೋಗದೊಂದಿಗೆ ಭಾರತಕ್ಕೆ ಬುಧವಾರ ಆಗಮಿಸಲಿದ್ದು, ನವದೆಹಲಿಯಲ್ಲಿ ಏ. 12ರಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ `ಲೈಫ್‌ಸ್ಟೈಲ್ ಪಾಕಿಸ್ತಾನ ವಸ್ತು ಪ್ರದರ್ಶನ~ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.