ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪೆಟ್ರೋಲ್ ಬೆಲೆಯನ್ನು ಲೀಟರ್ಗೆ ಎರಡು ರೂಪಾಯಿನಷ್ಟು ಹೆಚ್ಚಿಸಿದ್ದು, ಈ ಏರಿಕೆ ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದರಿಂದ ಪೆಟ್ರೋಲ್ ಬೆಲೆ ಹೆಚ್ಚಿಸಲಾಗಿದೆ.

ರೂಪಾಯಿ ಡಾಲರ್ ಎದುರು ಸತತವಾಗಿ ಕುಸಿಯುತ್ತಿರುವುದು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದರಿಂದ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ದೇಶದ ಬೃಹತ್ ಚಿಲ್ಲರೆ ಇಂಧನ ಮಾರಾಟ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ)ತಿಳಿಸಿದೆ.

ದೆಹಲಿಯಲ್ಲಿ ಇದುವರೆಗೆ ರೂ 63.99 ಇದ್ದ ಪೆಟ್ರೋಲ್ ಬೆಲೆ ಇನ್ನು ಮುಂದೆ ರೂ 66.39 ಆಗಲಿದೆ. ಕೋಲ್ಕತ್ತದಲ್ಲಿ ಇದುವರೆಗೆ ರೂ 71.29 ಇದ್ದ ಪೆಟ್ರೋಲ್ ಬೆಲೆ ಇನ್ನು ಮುಂದೆ ರೂ 73.79 ಆಗಲಿದೆ. ಚೆನ್ನೈನಲ್ಲಿ ಇದುವರೆಗೆ ರೂ 66.85 ಇದ್ದ ಪೆಟ್ರೋಲ್ ಬೆಲೆ ಇನ್ನು ಮುಂದೆ ರೂ 69.39 ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.