ಸೋಮವಾರ, ಏಪ್ರಿಲ್ 19, 2021
32 °C

ಪೇಸ್ಟ್: ಸರ್ಕಾರದ ನಿಯಮಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರುಕಟ್ಟೆಯಲ್ಲಿನ ಪೈಪೋಟಿಯಿಂದಾಗಿ ಇಂದು ಹಲ್ಲುಜ್ಜುವ ಪೇಸ್ಟ್‌ಗಳ ಪ್ಯಾಕಿಂಗ್ ಮತ್ತು ಲೇಬಲಿಂಗ್ ಆಕರ್ಷಕವಾಗಿದೆ. ಇದೇ ವೇಳೆ ಲೇಬಲಿಂಗ್‌ಗೆ ಸಂಬಂಧಿಸಿದಂತೆ ಸರ್ಕಾರ ಕೆಲವು ಕಟ್ಟುಪಾಡುಗಳನ್ನೂ ವಿಧಿಸಿದೆ.

 

ನಿಯಮಾವಳಿ ಪ್ರಕಾರ, ಯಾವುದೇ ಪೇಸ್ಟ್ ಪ್ಯಾಕೆಟ್ ಮೇಲಿನ ಲೇಬಲ್ ಕೆಳಕಂಡ ಮಾಹಿತಿಗಳನ್ನು ಒಳಗೊಂಡಿರುವುದು ಕಡ್ಡಾಯ1) ಪೇಸ್ಟ್‌ನ ಹೆಸರು ಮತ್ತು ದೃಢೀಕೃತ ಲಾಂಛನ ಇದ್ದರೆ ಅದನ್ನು ಅಚ್ಚು ಹಾಕಿರಬೇಕು.

2) ಯಾವುದೇ ಕಂಪೆನಿ ಪೇಸ್ಟ್‌ನ ಚಿಕಿತ್ಸಕ ಪರಿಣಾಮದ ಬಗ್ಗೆ ಪ್ರಚಾರ ಮಾಡಿಕೊಂಡಿದ್ದರೆ, ಅದಕ್ಕೆ ಕಾರಣವಾಗುವ ಪೇಸ್ಟ್‌ನಲ್ಲಿನ ರಾಸಾಯನಿಕ ವಸ್ತುವಿನ ಹೆಸರು ಹಾಗೂ ಅದರ ಪ್ರಮಾಣ

3) ರಾಸಾಯನಿಕ ಅಂಶಗಳ ವಿವರ ಹಾಗೂ ಅವುಗಳ ಪ್ರಮಾಣ

4) ವಿವಿಧ ಘಟಕಾಂಶಗಳು ಪ್ರಮಾಣ ಅಥವಾ ತೂಕ

5) ಲಾಟ್/ ಬ್ಯಾಚ್ (ಸಂಕೇತ ಅಥವಾ ಸಂಖ್ಯೆ)

6) ತಯಾರಕರ ಹೆಸರು, ವಿಳಾಸ

7) ಪೇಸ್ಟ್‌ಗೆ ಫ್ಲೋರೀನ್ ಅಂಶವನ್ನು ಸೇರಿಸಿದ್ದರೆ,  `ಫ್ಲೋರಿಡೇಟೆಡ್ ಟೂಥ್‌ಪೇಸ್ಟ್~ ಎಂಬುದನ್ನು ಕನಿಷ್ಠ 3 ಮಿ.ಮಿ. ಎತ್ತರದ ಅಕ್ಷರಗಳಲ್ಲಿ, ನೋಡಲು ಎದ್ದುಕಾಣುವಂತೆ ಮುದ್ರಿಸಿರಬೇಕು.

8) ಉತ್ಪನ್ನ ತಯಾರಾದ ದಿನಾಂಕ, ಅದು ಬಳಕೆಗೆ ಅರ್ಹವಾಗಿರುವ ದಿನಾಂಕದ ಗಡುವು (ವರ್ಷ, ತಿಂಗಳು, ದಿನ)

9) ಪೇಸ್ಟ್ ಸಂರಕ್ಷಿಸಿ ಇಡುವ ರೀತಿ

10) ಆಮದು ಮಾಡಿಕೊಂಡ ಪೇಸ್ಟ್ ಆಗಿದ್ದರೆ, ಎಲ್ಲಿಂದ ಆಮದಾಗಿದೆ ಎಂಬ ಮಾಹಿತಿ

11) ಬಳಕೆ ರೀತಿಯ ಬಗ್ಗೆ ಹೊರ ಕವರ್‌ನ ಮೇಲೆ ಅಥವಾ ಒಳಸೇರಿಸಿದ ಕಾಗದದಲ್ಲಿ ಮಾಹಿತಿ

12) ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ)(ಮುಗಿಯಿತು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.