ಪೈಪ್‌ಲೈನ್ ಹಾನಿ: ಅಂಗಡಿಗಳಿಗೆ ನುಗ್ಗಿದ ಭಾರಿ ನೀರು

7

ಪೈಪ್‌ಲೈನ್ ಹಾನಿ: ಅಂಗಡಿಗಳಿಗೆ ನುಗ್ಗಿದ ಭಾರಿ ನೀರು

Published:
Updated:

ಗದಗ: ಗದಗ-ಬೆಟಗೇರಿ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಮುಖ್ಯ ಪೈಪ್‌ಲೈನ್ ಶುಕ್ರವಾರ ನಗರದ ಮುಳಗುಂದ ನಾಕಾ ಹತ್ತಿರದಲ್ಲಿ ಒಡೆದು ರಸ್ತೆಯಲ್ಲೆಲ್ಲ ನೀರು ಹರಿದು ಅಕ್ಕಪಕ್ಕದ ಮನೆ ಹಾಗೂ ಅಂಗಡಿಗಳಿಗೆ ನುಗ್ಗಿದೆ.ದ್ವಿಮುಖ ರಸ್ತೆಯಲ್ಲೆಲ್ಲ ನೀರು ಹರಿದಾಡಿದ್ದು, ಕೆಲ ಗಂಟೆಗಳ ಕಾಲ ವಾಹನಗಳ ಸಂಚಾರಕ್ಕೆ ಅಸ್ತವ್ಯಸ್ತವಾಗಿತ್ತು. ಹುಬ್ಬಳ್ಳಿಯಿಂದ ಗದುಗಿಗೆ ಆಗಮಿಸುವ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ನೀರಿನ ರಭಸಕ್ಕೆ ಚರಂಡಿ ತುಂಬಿ ನೀರು ಅಕ್ಕ ಪಕ್ಕದ ಮನೆ ಹಾಗೂ ಅಂಗಡಿಗಳಿಗೆ ನುಗ್ಗಿ ಹಾನಿ ಸಂಭವಿಸಿದೆ. ಪೈಪ್‌ಲೈನ್ ಒಡೆದಿದ್ದರಿಂದ ನಗರದಲ್ಲಿ ಪೂರೈಕೆಯಾಗಬೇಕಿದ್ದ ನೀರು ಸರಬರಾಜು ಸ್ಥಗಿತಗೊಂಡಿತ್ತು.ಪೈಪ್‌ಲೈನ್ ಒಡೆದ ತಕ್ಷಣ ಅದರ ದುರಸ್ತಿ ಕಾರ್ಯಕೈಗೊಳ್ಳಲು ನಗರಸಭೆ ಸಿಬ್ಬಂದಿ ಮುಂದಾದರು.ಸಂಜೆಯವರೆಗೂ ಜೆಸಿಬಿ ಮೂಲಕ ದುರಸ್ತಿ ಕಾರ್ಯ ಕೈಗೊಳ್ಳಲಾಯಿತು. ಆದರೂ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿಲ್ಲ. ಶನಿವಾರ ಮಧ್ಯಾಹ್ನದ ವೇಳೆಗೆ ದುರಸ್ತಿ ಕಾರ್ಯ ಪೂರ್ಣಗೊಳಿಸುವುದಾಗಿ ನಗರಸಭೆ ಅಧಿಕಾರಿಗಳು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry